ಎಲಿಮಿನೇಷನ್ ಟ್ವಿಸ್ಟ್: ಶನಿವಾರ ಆಗಿಲ್ಲ, ಭಾನುವಾರ ಏನಾಗಬಹುದು?
ಬಿಗ್ ಬಾಸ್ ಕನ್ನಡ 7ನೇ ಆವೃತ್ತಿಯ ಮೊದಲ ವಾರ ಯಶಸ್ವಿಯಾಗಿ ಮುಗಿದಿದೆ. ನಿರೀಕ್ಷೆಯಂತೆ ಶನಿವಾರ ಒಬ್ಬ ಸದಸ್ಯರು ಮನೆಯಿಂದ ಹೊರಹೋಗಬೇಕಿತ್ತು. ಈ ವಾರ ಐದು ಜನ ನಾಮಿನೇಟ್ ಆಗಿದ್ದರು.
ರಾಜುತಾಳಿಕೋಟೆ, ಚೈತ್ರಾ ವಾಸುದೇವನ್, ಕುರಿ ಪ್ರತಾಪ್, ಚೈತ್ರಾ ಕೋಟೂರ್ ಹಾಗೂ ಗುರುಲಿಂಗ ಸ್ವಾಮೀಜಿ ಬಿಗ್ ಬಾಸ್ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದರು. ಆದರೆ, ಶನಿವಾರದ ನಡೆದ ಕಿಚ್ಚನ ಪಂಚಾಯಿತಿಯಲ್ಲಿ ಮೂವರು ಸೇಫ್ ಆದರು.
ಕೊನೆಯಲ್ಲಿ ಉಳಿದ ಇಬ್ಬರಿಗೂ ಒಂದು ದಿನ ಮಟ್ಟಿಗೆ ರಿಲೀಫ್ ನೀಡಲಾಗಿದೆ. ಈ ನಡುವೆ ನಡೆದ ಕೆಲವು ಬೆಳವಣಿಗೆಗಳನ್ನ ಗಮನಿಸಿದರೆ, ಭಾನುವಾರ ಏನಾಗುತ್ತೆ ಎಂಬುದು ಕುತೂಹಲ ಮೂಡಿಸಿದೆ.? ಮುಂದೆ ಓದಿ...

ಭಾನುವಾರ ಎಲಿಮಿನೇಷನ್ ಇದ್ಯಾ?
ಶನಿವಾರ ಸಂಚಿಕೆ ಮುಕ್ತಾಯಗೊಳಿಸಿದ ಸುದೀಪ್, ಭಾನುವಾರ ಎಲಿಮಿನೇಷನ್ ಇರಲಿದೆ ಎಂದು ಹೇಳಿ ಹೋದರು. ಸಂಪ್ರದಾಯದಂತೆ ಈ ಹಿಂದಿನ ಆವೃತ್ತಿಗಳಲ್ಲಿ ಶನಿವಾರ ಎಲಿಮಿನೇಷನ್, ಭಾನುವಾರ ಸ್ಪೆಷಲ್ ಎಪಿಸೋಡ್ ಪ್ರಸಾರವಾಗ್ತಿತ್ತು. ಇದೀಗ, ಭಾನುವಾರವೂ ಎಲಿಮಿನೇಷನ್ ಪ್ರಕ್ರಿಯೆ ಮುಂದುವರಿದಿದ್ದು, ಇಬ್ಬರಲ್ಲಿ ಯಾರಿಗೆ ಗೇಟ್ ಪಾಸ್ ಸಿಗಲಿದೆ ಎಂಬ ಚರ್ಚೆ ದೊಡ್ಡದಾಗಿದೆ.

ಎಲಿಮಿನೇಷನ್ ಅಥವಾ ರಿಲೀಫ್
ಒಟ್ಟು 18 ಜನರು ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡಿದ್ದರು. ಡ್ಯಾನ್ಸರ್ ಕಿಶನ್ ಅವರು ಜ್ವರದಿಂದ ಬಳಲುತ್ತಿದ್ದ ಕಾರಣ, ಸದ್ಯಕ್ಕೆ ಮನೆಯಿಂದ ಹೊರಹೋಗಿದ್ದಾರೆ. ಅವರು ಮತ್ತೆ ವಾಪಸ್ ಬರುವ ಸಾಧ್ಯತೆ ಹೆಚ್ಚಿದೆ. ರವಿಬೆಳಗೆರೆ ಅವರು ಅತಿಥಿಯಾಗಿ ಇರ್ತಾರೆ ಎಂದು ಸ್ವತಃ ಬಿಗ್ ಬಾಸ್ ಹೇಳಿದ್ದರಿಂದ, ಬೆಳಗೆರೆ ಯಾವ ಕ್ಷಣದಲ್ಲಿ ಬೇಕಾದರೂ ಮನೆಯಿಂದ ಹೊರಹೋಗಬಹುದು. ಭಾನುವಾರದ ನಿರೀಕ್ಷೆ ಚೈತ್ರಾ ಕೋಟೂರ್ ಅಥವಾ ಗುರುಲಿಂಗ ಸ್ವಾಮೀಜಿ ಇಬ್ಬರಲ್ಲಿ ಒಬ್ಬರು ಔಟ್ ಆಗ್ತಾರೆ ಎನ್ನುವುದು. ಅದನ್ನ ಮೀರಿ ಇಬ್ಬರಿಗೂ ಮೊದಲ ವಾರ ಎಂಬ ಕಾರಣಕ್ಕೆ ರಿಲೀಫ್ ಸಿಗಬಹುದಾ? ಗೊತ್ತಿಲ್ಲ.

ವಿಶೇಷ ಅಧಿಕಾರ ಸಿಗುತ್ತಂತೆ
ಚೈತ್ರಾ ಕೋಟೂರ್ ಅಥವಾ ಗುರುಲಿಂಗ ಸ್ವಾಮೀಜಿ ಯಾರೇ ಹೊರಗೆ ಬಂದರೂ ಅವರಿಗೆ ವಿಶೇಷ ಅಧಿಕಾರ ನೀಡಲಾಗುತ್ತಂತೆ. ಎಲಿಮಿನೇಟ್ ಆಗುವ ಸ್ಪರ್ಧಿ, ಮನೆಯಲ್ಲಿ ಯಾರಾದರೂ ಒಬ್ಬರನ್ನ ನೇರವಾಗಿ ನಾಮಿನೇಟ್ ಮಾಡಬಹುದು. ಈ ವಿಶೇಷ ಅಧಿಕಾರವನ್ನ ಯಾರು ಪಡೆದುಕೊಳ್ಳುತ್ತಾರೆ?

ಭಾನುವಾರ ಏನು ಸ್ಪೆಷಲ್ ಇಲ್ವಾ?
ಕಳೆದ ಆವೃತ್ತಿಗಳಲ್ಲಿ ಭಾನುವಾರದ ಸಂಚಿಕೆ ಸಂಪೂರ್ಣವಾಗಿ ಸ್ಪೆಷಲ್ ಕಾರ್ಯಕ್ರಮಕ್ಕೆ ಸೀಮಿತವಾಗುತ್ತಿತ್ತು. ಎಲಿಮಿನೇಟ್ ಆದ ಸ್ಪರ್ಧಿ ಜೊತೆ ಮಾತುಕತೆ ಮತ್ತು ಯಾರಾದರೂ ವಿಶೇಷ ಅತಿಥಿಯನ್ನ ಆಹ್ವಾನಿಸಿ, ಅವರೊಂದಿಗೆ ಮಾತುಕತೆ, ಅಥವಾ ಸುದೀಪ್ ಅಡುಗೆ ಮಾಡುತ್ತಿದ್ದರು. ಈ ಆವೃತ್ತಿಯಲ್ಲಿ ಭಾನುವಾರ ಏನು ವಿಶೇಷ ಇರಬಹುದು ಎಂಬುದು ಇನ್ನೂ ನಿಗೂಡವಾಗಿಯೇ ಉಳಿದಿದೆ.


Click it and Unblock the Notifications











