ಮೊದಲ ಹೆಂಡತಿ-ಮಗಳ ಬಗ್ಗೆ ಜೈಜಗದೀಶ್ ಕಣ್ಣೀರು ಹಾಕಿದ್ಮೇಲೆ ವಿಜಯಲಕ್ಷ್ಮಿ ಸಿಂಗ್ ಮಾಡಿದ್ದೇನು.?
ಕನ್ನಡ ಚಿತ್ರರಂಗದ ಹಿರಿಯ ನಟ ಜೈಜಗದೀಶ್ ಬಗೆಗಿನ ಒಂದು ದೊಡ್ಡ ಸೀಕ್ರೆಟ್ 'ಬಿಗ್ ಬಾಸ್' ಮನೆಯಲ್ಲಿ ರಿವೀಲ್ ಆಗಿತ್ತು. ಸಿನಿ ಪ್ರಿಯರಿಗೆ ಅದರಲ್ಲೂ ಜೈಜಗದೀಶ್ ಅಭಿಮಾನಿಗಳಿಗೆ ಗೊತ್ತಿಲ್ಲದ ಒಂದು ದೊಡ್ಡ ರಹಸ್ಯ 'ದೊಡ್ಮನೆ'ಯಲ್ಲಿ ಬಟಾಬಯಲಾಗಿತ್ತು.
ಅದೇನಪ್ಪಾ ಅಂದ್ರೆ, ನಟಿ-ನಿರ್ದೇಶಕಿ-ನಿರ್ಮಾಪಕಿ ವಿಜಯಲಕ್ಷ್ಮಿ ಸಿಂಗ್ ಕೊರಳಿಗೆ ತಾಳಿ ಕಟ್ಟುವ ಮುನ್ನ ಜೈಜಗದೀಶ್ ಗೆ ಅದಾಗಲೇ ಒಂದು ಮದುವೆ ಆಗಿತ್ತು. ರೂಪ ಎಂಬುವರನ್ನ ಜೈಜಗದೀಶ್ ವಿವಾಹವಾಗಿದ್ದರು. ಈ ಜೋಡಿಗೆ ಅರ್ಪಿತಾ ಎಂಬ ಮಗು ಕೂಡ ಇತ್ತು.
ರೂಪರನ್ನ ಮದುವೆ ಆದ ಕೆಲವೇ ವರ್ಷಗಳಲ್ಲಿ ಮನಸ್ತಾಪ ಉಂಟಾಯಿತು. ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆಯಲಾಯಿತು. ದುರಂತ ಅಂದ್ರೆ ಇದೀಗ ಪುತ್ರಿ ಅರ್ಪಿತಾ ಮದುವೆಯೂ ಮುರಿದು ಬಿದ್ದಿದೆ. ಅರ್ಪಿತಾಗೆ ಅಪ್ಪನ ಪ್ರೀತಿಯೂ ಸಿಗಲಿಲ್ಲ. ಗಂಡನ ಪ್ರೀತಿಯೂ ಲಭಿಸಲಿಲ್ಲ. ಹೀಗಾಗಿ, ಪುತ್ರಿ ಅರ್ಪಿತಾಗೆ ಜೈಜಗದೀಶ್ ಕ್ಷಮೆ ಕೇಳಿದರು.
'ಬಿಗ್ ಬಾಸ್' ಮನೆಯಲ್ಲಿ ತಂದೆ ಜೈಜಗದೀಶ್ ಅಳುವುದನ್ನು ನೋಡಿದ ಅರ್ಪಿತಾ, ಅಪ್ಪನಿಗಾಗಿ ವಾಯ್ಸ್ ಮೆಸೇಜ್ ಕಳುಹಿಸಿದ್ದಾರೆ. ಅದರಲ್ಲಿ, ಜೈಜಗದೀಶ್ ತಮ್ಮ ಮೊದಲ ಮದುವೆ ಕಥೆ ಹೇಳಿಕೊಂಡ ನಂತರ ಎರಡನೇ ಪತ್ನಿ ವಿಜಯಲಕ್ಷ್ಮಿ ಸಿಂಗ್ ಮತ್ತು ಪುತ್ರಿಯರು ಏನು ಮಾಡಿದರು ಎಂಬುದೂ ಇದೆ. ಓದಿರಿ...

ಸುದೀಪ್ ಹೇಳಿದ್ದೇನು.?
'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ಹಿರಿಯ ನಟ ಜೈಜಗದೀಶ್ ಗೆ ''ನಿಮ್ಮ 'ಸಾರಿ'ಯ ಕಥೆ ಎಷ್ಟೋ ಮಂದಿಗೆ ಗೊತ್ತಿಲ್ಲದ ವಿಚಾರ. ಮನಸ್ಸಿಗೆ ತುಂಬಾ ಮುಟ್ಟಿತು. ವಿ ಲವ್ ಯು'' ಎಂದು ಸುದೀಪ್ ಹೇಳಿದರು. ಜೊತೆಗೆ ಪುತ್ರಿ ಅರ್ಪಿತಾ ಕಳುಹಿಸಿದ್ದ ವಾಯ್ಸ್ ಮೆಸೇಜ್ ನ ಪ್ಲೇ ಮಾಡಿದರು.

ಅರ್ಪಿತಾ ಹೇಳಿದ್ದೇನು.?
''ಹಾಯ್ ಪಾ.. ದೀಪಾವಳಿ ಹಬ್ಬದ ಶುಭಾಶಯಗಳು ಪಾ. ಮೊನ್ನೆಯ ಸಂಚಿಕೆ ನೋಡಿ ನಿಮ್ಮ ಜೊತೆಗೆ ನಾನು ಕೂಡ ತುಂಬಾ ಅತ್ತುಬಿಟ್ಟೆ. ಕ್ಷಮಿಸು ಅಂತೆಲ್ಲಾ ಯಾಕೆ ಕೇಳ್ತಿದ್ದೀರಾ ಪಾ. ನೀವು ನನ್ನ ಅಪ್ಪ. ಐ ಲವ್ ಯು ಎ ಲಾಟ್ ಅಪ್ಪ'' ಎಂದರು ಅರ್ಪಿತಾ.

ವಿಜಯಲಕ್ಷ್ಮಿ ಸಿಂಗ್ ಮೂವರು ಪುತ್ರಿಯರು ಮಾಡಿದ್ದೇನು.?
''ಮಾರನೇ ದಿನ ನನ್ನ ಮೂವರು ತಂಗಿಯರು ಮನೆಗೆ ಬಂದು, ನನ್ನ ಹಾಗೂ ಅಮ್ಮನ ಜೊತೆ ಕಾಲ ಕಳೆದರು. ನಾವೆಲ್ಲರೂ ತುಂಬಾ ಚೆನ್ನಾಗಿ ಕಾಲ ಕಳೆದ್ವಿ. ಮುನ್ನಿ ಆಂಟಿ (ವಿಜಯಲಕ್ಷ್ಮಿ ಸಿಂಗ್) ಕೂಡ ಎಸ್.ಎಂ.ಎಸ್ ಮಾಡಿದ್ದರು. ನನಗೆ ತುಂಬಾ ಖುಷಿ ಆಯ್ತು'' ಎಂದು ವಾಯ್ಸ್ ಮೆಸೇಜ್ ನಲ್ಲಿ ಅರ್ಪಿತಾ ತಿಳಿಸಿದ್ದಾರೆ.

ಅಪ್ಪನಿಗೆ ಅರ್ಪಿತಾ ಮನವಿ
''ನಿಮ್ಮ ನಗು ಎಲ್ಲಿ ಹೋಯ್ತು.? ನಮ್ಮ ಜೊತೆ ಎಷ್ಟು ಚೆನ್ನಾಗಿ ನಕ್ಕೊಂಡು ಇರ್ತೀರಾ.. 'ಬಿಗ್ ಬಾಸ್' ಮನೆಯಲ್ಲೂ ನಗಾಡಿಕೊಂಡು ಇರಿ. ಇದು ನನ್ನ ಮನವಿ. ಚೆನ್ನಾಗಿ ಆಡುತ್ತಿದ್ದೀರಾ. ಅದನ್ನೇ ಮುಂದುವರೆಸಿ. ಅಮ್ಮ ಕೂಡ ನಿಮಗೆ ವಿಶಸ್ ಕಳುಹಿಸಿದ್ದಾರೆ. ಐ ಲವ್ ಯು ಎ ಲಾಟ್'' ಅಂತ ಅರ್ಪಿತಾ ಹೇಳಿದನ್ನು ಕೇಳಿ ಜೈಜಗದೀಶ್ ಭಾವುಕರಾದರು. ಆಗ ''ಯಾವಾಗಲೂ ನಗುತ್ತಿರಿ'' ಎಂದು ಸುದೀಪ್ ಕೂಡ ಹೇಳಿದರು.


Click it and Unblock the Notifications











