For Quick Alerts
  ALLOW NOTIFICATIONS  
  For Daily Alerts

  ಪದವಿ ಓದುತ್ತಿದ್ದ ಜೈಜಗದೀಶ್ ಕನ್ನಡ ಚಿತ್ರರಂಗಕ್ಕೆ ಬಂದಿದ್ದು ಹೇಗೆ.?

  |

  ನೋಡಲು ಸ್ಮಾರ್ಟ್ ಅಂಡ್ ಹ್ಯಾಂಡ್ಸಮ್ ಆಗಿದ್ದ ಜೈಜಗದೀಶ್ ಆಗಿನ್ನೂ ಪದವಿ ಓದುತ್ತಿದ್ದರು. ಡಬಲ್ ಗ್ರ್ಯಾಜುಯೇಟ್ ಆಗಿ ಒಳ್ಳೆಯ ಕೆಲಸಕ್ಕೆ ಸೇರಬೇಕು ಅನ್ನೋದು ಜೈಜಗದೀಶ್ ತಂದೆಯ ಕನಸಾಗಿತ್ತು. ಅಪ್ಪನ ಇಚ್ಛೆ ಈಡೇರಿಸಲು ಜೈಜಗದೀಶ್ ಕೂಡ ಪ್ರಯತ್ನ ಪಡುತ್ತಿದ್ದರು.

  ಆದರೆ ಅಷ್ಟರಲ್ಲಿ ಅವರಿಗೆ ಪುಟ್ಟಣ್ಣ ಕಣಗಾಲ್ ಮತ್ತು ಚಿತ್ರ ನಿರ್ಮಾಪಕರಿಂದ ಆಫರ್ ಬಂತು. ನಟನೆ ಬಗ್ಗೆ ಎಳ್ಳಷ್ಟೂ ತಿಳಿಯದ ಜೈಜಗದೀಶ್ ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ಫಲಿತಾಂಶ' ಚಿತ್ರಕ್ಕೆ ಆಯ್ಕೆ ಆಗೇಬಿಟ್ಟರು. ಅಲ್ಲಿಂದ ಶುರುವಾದ ಅವರ ಬಣ್ಣದ ಬದುಕಿನ ಪಯಣ 600ಕ್ಕೂ ಹೆಚ್ಚು ಚಿತ್ರಗಳಲ್ಲಿ ಮುಂದುವರೆದಿದೆ.

  25ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಾಣ ಮಾಡಿರುವ ಜೈಜಗದೀಶ್ ಡೈರೆಕ್ಟರ್ ಕ್ಯಾಪ್ ನೂ ತೊಟ್ಟಿದ್ದಾರೆ. ಸದ್ಯ 'ಬಿಗ್ ಬಾಸ್' ಮನೆ ಸೇರಿರುವ ಜೈಜಗದೀಶ್ ತಾವು ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಕಥೆಯನ್ನ ಹೇಳಿಕೊಂಡಿದ್ದಾರೆ. ಅದೆಲ್ಲವನ್ನೂ ಅವರ ಮಾತುಗಳಲ್ಲೇ ಓದಿರಿ ಕೆಳಗಿರುವ ಫೋಟೋ ಸ್ಲೈಡ್ ಗಳಲ್ಲಿ...

  ಚಿತ್ರನಟನಾಗುವ ಬಗ್ಗೆ ಕನಸು ಕಂಡಿರಲಿಲ್ಲ.!

  ಚಿತ್ರನಟನಾಗುವ ಬಗ್ಗೆ ಕನಸು ಕಂಡಿರಲಿಲ್ಲ.!

  ''ನಾನು ಡಬಲ್ ಗ್ರ್ಯಾಜುಯೇಟ್ ಆಗಬೇಕು ಅನ್ನೋದು ನನ್ನ ತಂದೆಯ ಆಸೆ ಆಗಿತ್ತು. ಕೊನೆಯ ವರ್ಷ ಓದಬೇಕಾದರೆ, ಪುಟ್ಟಣ್ಣ ಕಣಗಾಲ್ ರವರಿಂದ ಆಫರ್ ಬಂತು. ಸಿನಿಮಾ ಸೇರಬೇಕು, ಚಿತ್ರನಟನಾಗಬೇಕು ಅಂತ ನಾನು ಕನಸು ಕೂಡ ಕಂಡವನಲ್ಲ. ನನ್ನ ತಂದೆಗೂ ಸಿನಿಮಾ ಬಗ್ಗೆ ಏನೂ ಗೊತ್ತಿರಲಿಲ್ಲ'' ಎಂದು ತಮ್ಮ ಅಂದಿನ ದಿನಗಳ ಬಗ್ಗೆ ಜೈಜಗದೀಶ್ ಮಾತಿಗಿಳಿದರು.

  ಜೈಜಗದೀಶ್ ಕುರಿತ ಒಂದು ಸೀಕ್ರೆಟ್ 'ಬಿಗ್ ಬಾಸ್' ಮನೆಯಲ್ಲಿ ರಿವೀಲ್.!ಜೈಜಗದೀಶ್ ಕುರಿತ ಒಂದು ಸೀಕ್ರೆಟ್ 'ಬಿಗ್ ಬಾಸ್' ಮನೆಯಲ್ಲಿ ರಿವೀಲ್.!

  ಜೇಬಲ್ಲಿ 15 ರೂಪಾಯಿ ಇಟ್ಟುಕೊಂಡು ಬೆಂಗಳೂರಿಗೆ ಬಂದ ನಟ

  ಜೇಬಲ್ಲಿ 15 ರೂಪಾಯಿ ಇಟ್ಟುಕೊಂಡು ಬೆಂಗಳೂರಿಗೆ ಬಂದ ನಟ

  ''ಬೆಂಗಳೂರಿಗೆ ಕೂಡಲೆ ಬರಬೇಕು ಅಂತ ಪುಟ್ಟಣ್ಣ ಕಣಗಾಲ್ ಮತ್ತು ನಿರ್ಮಾಪಕರಿಂದ ಬುಲಾವ್ ಬಂತು. ನನ್ನ ಬಳಿ ಜೇಬಲ್ಲಿ 15 ರೂಪಾಯಿ ಇತ್ತು. ಆಗೆಲ್ಲ ಮೈಸೂರು ಟು ಬೆಂಗಳೂರು 3 ರೂಪಾಯಿ. ಬೆಂಗಳೂರಿನ ಬ್ರಾಡ್ ವೇ ಹೋಟೆಲ್ ನಲ್ಲಿ ನನಗೆ ರೂಮ್ ಮಾಡಲಾಗಿತ್ತು'' - ಜೈಜಗದೀಶ್, ನಟ

  ರಂಪ ಆದ್ಮೇಲೆ ಜೈಜಗದೀಶ್ ಬಳಿ ಕ್ಷಮೆ ಕೇಳಿದ ಕಿಶನ್ರಂಪ ಆದ್ಮೇಲೆ ಜೈಜಗದೀಶ್ ಬಳಿ ಕ್ಷಮೆ ಕೇಳಿದ ಕಿಶನ್

  ಪುಟ್ಟಣ್ಣ ಹೇಳಿದ್ದು ಒಂದೇ ಮಾತು

  ಪುಟ್ಟಣ್ಣ ಹೇಳಿದ್ದು ಒಂದೇ ಮಾತು

  ''ಮಾರನೇ ದಿನ ಪುಟ್ಟಣ್ಣ ಕಣಗಾಲ್ ರವರನ್ನ ಭೇಟಿ ಮಾಡಿದೆ. ಆಗ ನಾನು ಅವರನ್ನ ನೋಡಿ ನಡುಗುತ್ತಿದ್ದೆ. ''ನನಗೆ ಆಕ್ಟಿಂಗ್ ಬರಲ್ಲ, ನಟನೆಯ ಅನುಭವ ಇಲ್ಲ. ಹೇಳಿಕೊಟ್ಟರೆ ಮಾಡುವೆ'' ಎಂದೆ. ಆಗ ಅವರು ಹೇಳಿದ್ದು ಒಂದೇ ಮಾತು. ''ನನ್ನ ಸಿನಿಮಾಗೆ ನೀನೇ ಹೀರೋ'' ಎಂದರು. ನಾನು ತುಂಬಾ ಥ್ರಿಲ್ ಆದೆ'' - ಜೈಜಗದೀಶ್, ನಟ

  ಜೈಜಗದೀಶ್ ಮೇಲೆ ಇದೇನಿದು ಗಂಭೀರ ಆರೋಪ.?ಜೈಜಗದೀಶ್ ಮೇಲೆ ಇದೇನಿದು ಗಂಭೀರ ಆರೋಪ.?

  ಛೀಮಾರಿ ಹಾಕಿದ ತಂದೆ

  ಛೀಮಾರಿ ಹಾಕಿದ ತಂದೆ

  ''ಸಿನಿಮಾಗೆ ಸೆಲೆಕ್ಟ್ ಆಗಿರುವ ಬಗ್ಗೆ ತಂದೆಗೆ ಫೋನ್ ಮಾಡಿ ಹೇಳಿದಾಗ ಛೀಮಾರಿ ಹಾಕಿದರು. ಅದೃಷ್ಟವಶಾತ್ ಪುಟ್ಟಣ್ಣ ಗರಡಿಯಲ್ಲಿ ಬೆಳೆದು 45 ವರ್ಷ ಚಿತ್ರರಂಗದಲ್ಲಿ ಕೆಲಸ ಮಾಡಿದ್ದೇನೆ. 600 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದೇನೆ. 25 ಚಿತ್ರಗಳನ್ನ ನಿರ್ಮಾಣ ಮಾಡಿದ್ದೇನೆ'' ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ ಜೈಜಗದೀಶ್.

  English summary
  Bigg Boss Kannada 7: Jai Jagadeesh remembers his first meeting with Puttanna Kanagal.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X