ಜೈಜಗದೀಶ್ ಕುರಿತ ಒಂದು ಸೀಕ್ರೆಟ್ 'ಬಿಗ್ ಬಾಸ್' ಮನೆಯಲ್ಲಿ ರಿವೀಲ್.!
Recommended Video
'ಫಲಿತಾಂಶ' ಚಿತ್ರದ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ಜೈಜಗದೀಶ್ ಉತ್ತಮ ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದಾರೆ. 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಜೈಜಗದೀಶ್ ಇಂದಿಗೂ ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರಗಳನ್ನು ನಿಭಾಯಿಸುತ್ತಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆ ನೀಡಿರುವ ಜೈಜಗದೀಶ್ ಒಂದು ಕಾಲದಲ್ಲಿ ಪೈಲಟ್ ಆಗಲು ಹೊರಟಿದ್ದರಂತೆ. ಮೂರು ವರ್ಷಗಳ ಕಾಲ ಜಕ್ಕೂರು ಫ್ಲೈಯಿಂಗ್ ಸ್ಕೂಲ್ ನಲ್ಲಿ ಪೈಲಟ್ ಟ್ರೇನಿಂಗ್ ಮಾಡಿದ್ದರು ಜೈಜಗದೀಶ್.
ಇನ್ನೂ 8-10 ಗಂಟೆ ಟ್ರೇನಿಂಗ್ ಮಾಡಿದ್ದರೆ, ಜೈಜಗದೀಶ್ ಅಧಿಕೃತವಾಗಿ ಪೈಲಟ್ ಆಗಿಬಿಡುತ್ತಿದ್ದರು. ಆದರೆ, ಅಷ್ಟರಲ್ಲಿ ನಿರ್ದೇಶಕ ಸಿದ್ದಲಿಂಗಯ್ಯ ರವರಿಂದ 'ಬಿಳಿಗಿರಿಯ ಬನದಲ್ಲಿ' ಚಿತ್ರಕ್ಕಾಗಿ ಬುಲಾವ್ ಬಂತು. ಬಿಳಿಗಿರಿಯ ಬನದ ಕಡೆ ಹೊರಟ ಜೈಜಗದೀಶ್ ಟ್ರೇನಿಂಗ್ ಗೆ ಟಾಟಾ ಹೇಳಿದ್ದರು.
ಜೈಜಗದೀಶ್ ಬಗ್ಗೆ ಇಲ್ಲಿಯವರೆಗೂ ಯಾರಿಗೂ ತಿಳಿಯದ ಈ ಸೀಕ್ರೆಟ್ 'ಬಿಗ್ ಬಾಸ್' ಮನೆಯಲ್ಲಿ ರಿವೀಲ್ ಆಗಿದೆ. ಮುಂದೆ ಓದಿರಿ...

ಯಶಸ್ಸು ನೀಡದ 'ಫಲಿತಾಂಶ' ಚಿತ್ರ
''ಫಲಿತಾಂಶ' ಅಂತ ನನ್ನ ಮೊದಲ ಚಿತ್ರದ ಚಿತ್ರೀಕರಣ ಜಕ್ಕೂರು ಟ್ರೇನಿಂಗ್ ಸೆಂಟರ್ ನಲ್ಲಿ ನಡೆಯಿತು. ಆ ಟ್ರೇನಿಂಗ್ ಸೆಂಟರ್ ಪ್ರಿನ್ಸಿಪಾಲ್ ನನಗೆ ತುಂಬ ಹತ್ತಿರವಾದರು. ಸಿನಿಮಾ ರಿಲೀಸ್ ಆದ್ಮೇಲೆ ಅಷ್ಟೊಂದು ಯಶಸ್ಸು ಗಳಿಸಲಿಲ್ಲ. ನನಗೆ ಕೆಲಸ ಕೂಡ ಸಿಗಲಿಲ್ಲ'' ಅಂತ ತಮ್ಮ ಪೈಲಟ್ ಟ್ರೇನಿಂಗ್ ದಿನಗಳ ಬಗ್ಗೆ ಜೈಜಗದೀಶ್ ಮಾತು ಆರಂಭಿಸಿದರು.

ಹುಡುಕಿಕೊಂಡು ಬಂದ ಅವಕಾಶ
''ಎಂ.ಜಿ.ರೋಡ್ ನಲ್ಲಿ ಒಮ್ಮೆ ನಡೆದುಕೊಂಡು ಹೋಗುತ್ತಿದ್ದಾಗ ಆ ಪ್ರಿನ್ಸಿಪಾಲ್ ಸಿಕ್ಕರು. ಡಿಗ್ರಿ ಮುಗಿದಿದೆ, ಯಾವುದಾದರೂ ಸಿನಿಮಾ ಅವಕಾಶ ಸಿಕ್ಕರೆ ಆಕ್ಟ್ ಮಾಡ್ತೀನಿ ಅಂತ ನಾನು ಹೇಳಿದೆ. ಆಗ ತಮ್ಮ ಆಫೀಸ್ ಗೆ ಬರುವಂತೆ ಆ ಪ್ರಿನ್ಸಿಪಾಲ್ ಸೂಚಿಸಿದರು'' - ಜೈಜಗದೀಶ್, ನಟ

ಕೆಲವೇ ಗಂಟೆಗಳು ಬಾಕಿ ಇತ್ತು
''ಆಫೀಸಿಗೆ ಹೋದ್ಮೇಲೆ ಫಾರ್ಮ್ ಫಿಲಪ್ ಮಾಡಿಸಿ ಪ್ರಿನ್ಸಿಪಾಲ್ ಫ್ಲೈಯಿಂಗ್ ಸ್ಕೂಲ್ ಗೆ ಅಡ್ಮಿಶನ್ ಮಾಡಿಕೊಂಡರು. ಅಲ್ಲಿಂದ ಮೂರು ವರ್ಷ ನಾನು ಫ್ಲೈಯಿಂಗ್ ಸ್ಕೂಲ್ ನಲ್ಲಿ ಟ್ರೇನಿಂಗ್ ಮಾಡಿದೆ. ಇನ್ನೊಂದು 8-10 ಗಂಟೆ ಟ್ರೇನಿಂಗ್ ಮಾಡಿದಿದ್ದರೆ ಅಧಿಕೃತವಾಗಿ ಪೈಲಟ್ ಆಗುತ್ತಿದ್ದೆ'' - ಜೈಜಗದೀಶ್, ನಟ

ಆಫರ್ ಕೊಟ್ಟ ಸಿದ್ಧಲಿಂಗಯ್ಯ
''ಅಷ್ಟೊತ್ತಿಗೆ ಸಿದ್ಧಲಿಂಗಯ್ಯ ಅವರ 'ಬಿಳಿಗಿರಿಯ ಬನದಲ್ಲಿ' ಸಿನಿಮಾ ಸಿಕ್ತು. ವಿಷ್ಣುವರ್ಧನ್ ಕಾಂಬಿನೇಶನ್ ಇದ್ದ ಕಾರಣ ಪುಟ್ಟಣ್ಣ ಬಳಿ ಅಭಿಪ್ರಾಯ ಕೇಳಿದೆ. ''ಉತ್ತಮ ಅವಕಾಶ ಬಿಡಬೇಡಿ'' ಅಂತ ಪುಟ್ಟಣ್ಣ ಹೇಳಿದರು. ಅಲ್ಲಿಂದ ಸಿನಿಮಾಗೆ ಪೂರ್ತಿ ಬಂದುಬಿಟ್ಟೆ. ಒಂದ್ವೇಳೆ ಫ್ಲೈಯಿಂಗ್ ಸ್ಕೂಲ್ ನಲ್ಲಿ ಮುಂದುವರೆದಿದ್ದರೆ, ಇಷ್ಟೊತ್ತಿಗೆ ಪೈಲಟ್ ಆಗಿರುತ್ತಿದ್ದೆ. ಸಿನಿಮಾ ರಂಗದಲ್ಲಿ ಇರುತ್ತಿರಲಿಲ್ಲ'' ಎಂದಿದ್ದಾರೆ ಜೈಜಗದೀಶ್


Click it and Unblock the Notifications











