ಗುಟ್ಟು ರಟ್ಟಾದರೂ ಜೈಜಗದೀಶ್ ಮನೆಯಲ್ಲಿ ಜಡೆ ಜಗಳ ಇಲ್ಲ.!
Recommended Video
ಎರಡು ಜಡೆ ಒಂದೇ ಕಡೆ ಸೇರಿದರೆ ಜಗಳ ಅಂತಾರೆ.. ಇನ್ನೂ ಇಬ್ಬರು ಹೆಂಡತಿಯರು ಇದ್ದುಬಿಟ್ಟರಂತೂ ಗಂಡನ ಗತಿ ಅಧೋಗತಿ ಎನ್ನುವವರೂ ಇದ್ದಾರೆ. ಆದರೆ ಇದಕ್ಕೆಲ್ಲ ಅಪವಾದ ಎಂಬಂತಿದ್ದಾರೆ ಜೈಜಗದೀಶ್ ಮತ್ತು ಕುಟುಂಬ.
ಮೊದಲ ಪತ್ನಿ ರೂಪ ಎಂಬುವರನ್ನ ಜೈಜಗದೀಶ್ ಪ್ರೀತಿಸಿ ವಿವಾಹವಾಗಿದ್ದರು. ಆದರೆ ಈ ಮದುವೆ ಹೆಚ್ಚು ದಿನ ಇರಲಿಲ್ಲ. ಬಳಿಕ ಜೈಜಗದೀಶ್ ರನ್ನ ಪ್ರೀತಿಸಿ ಮದುವೆ ಆಗಿದ್ದು ವಿಜಯಲಕ್ಷ್ಮಿ ಸಿಂಗ್.
ಜೈಜಗದೀಶ್ ಗೆ ಅದಾಗಲೇ ಮದುವೆ ಆಗಿ, ಮಗಳಿರುವುದು ವಿಜಯಲಕ್ಷ್ಮಿ ಸಿಂಗ್ ಗೆ ಗೊತ್ತಿತ್ತು. ಹೀಗಿದ್ದರೂ, ಒಂದು ದಿನವೂ ಈ ವಿಚಾರಕ್ಕೆ ಕದನ ನಡೆದಿಲ್ಲವಂತೆ. ಈಗಲೂ ರೂಪ ಜೊತೆಗೆ ವಿಜಯಲಕ್ಷ್ಮಿ ಸಿಂಗ್ ಆತ್ಮೀಯವಾಗಿ ಮಾತನಾಡುತ್ತಾರಂತೆ.

ಇನ್ನೂ ವಿಜಯಲಕ್ಷ್ಮಿ ಸಿಂಗ್ ಮೂವರು ಪುತ್ರಿಯರು ಮತ್ತು ರೂಪ ಪುತ್ರಿ ಅರ್ಪಿತಾ ನಡುವಿನ ಸಂಬಂಧ ಕೂಡ ಚೆನ್ನಾಗಿದೆ. ಹಾಗಂತ ಸ್ವತಃ ಜೈಜಗದೀಶ್ 'ಬಿಗ್ ಬಾಸ್' ಮನೆಯಲ್ಲಿ ಹೇಳಿಕೊಂಡಿದ್ದಾರೆ.
''ನಮ್ಮನೆಯಲ್ಲಿ ಇಷ್ಟೆಲ್ಲಾ ನಡೆದರೂ, ನನ್ನ ಮೊದಲ ಹೆಂಡತಿ ಮತ್ತು ಎರಡನೇ ಹೆಂಡತಿ ನಡುವೆ ಯಾವುದೇ ಗಲಾಟೆ ಇಲ್ಲ. ನಾಲ್ಕು ಮಕ್ಕಳು ಒಟ್ಟಾಗಿ ಇರ್ತಾರೆ. ಒಟ್ಟಿಗೆ ಊಟ ಮಾಡ್ತೀವಿ, ಪಾರ್ಟಿ ಮಾಡ್ತೀವಿ. ಎಸ್ಟೇಟ್ ಮನೆಗೆ ಹೋಗುವಾಗಲೂ ಎಲ್ಲರೂ ಒಟ್ಟಿಗೆ ಬರ್ತಾರೆ. ಈಗ ಯಾರು ಇರುತ್ತಾರೆ ಹೀಗೆ.?'' ಎಂದು ಸಂತಸ ವ್ಯಕ್ತ ಪಡಿಸುತ್ತಾರೆ ಜೈಜಗದೀಶ್.
ಇನ್ನೂ ಮೊದಲ ಪತ್ನಿ ಮತ್ತು ಪುತ್ರಿಯನ್ನ ನೆನೆದು 'ಬಿಗ್ ಬಾಸ್' ಮನೆಯಲ್ಲಿ ಜೈಜಗದೀಶ್ ಕಣ್ಣೀರಿಟ್ಟಾಗಲೂ ವಿಜಯಲಕ್ಷ್ಮಿ ಸಿಂಗ್ ಮತ್ತು ಮಗಳು.. ರೂಪ ಮತ್ತು ಪುತ್ರಿಗೆ ಸಮಾಧಾನ ಪಡಿಸಿದ್ದರಂತೆ. ಈ ಬಗ್ಗೆ ಅರ್ಪಿತಾ ಕೂಡ ಖುಷಿ ಪಟ್ಟಿದ್ದಾರೆ.


Click it and Unblock the Notifications











