For Quick Alerts
  ALLOW NOTIFICATIONS  
  For Daily Alerts

  ಪ್ರಿಯಾಂಕಾ 'ನೆಗೆಟಿವ್' ಇಮೇಜ್ ಬದಲಿಸಿದ ಒಂದೇ ಒಂದು ಟಾಸ್ಕ್.!

  |

  'ಬಿಗ್ ಬಾಸ್ ಕನ್ನಡ-7' ಕಾರ್ಯಕ್ರಮದಲ್ಲಿ 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ಚಂದ್ರಿಕಾ ಪಾತ್ರ ನಿಭಾಯಿಸುತ್ತಿರುವ ಪ್ರಿಯಾಂಕಾ ಸ್ಪರ್ಧಿ ಅಂತ ಗೊತ್ತಾಗುತ್ತಿದ್ದಂತೆಯೇ ವೀಕ್ಷಕರಲ್ಲಿ ಕುತೂಹಲ ಇಮ್ಮಡಿ ಆಗಿತ್ತು. ಯಾಕಂದ್ರೆ, 'ಬಿಗ್ ಬಾಸ್' ಮನೆಯೊಳಗೂ ಪ್ರಿಯಾಂಕಾ.. ಚಂದ್ರಿಕಾಳಂತೆ ಜಗಳ ಆಡಬಹುದು, ದ್ವೇಷ ಸಾಧಿಸಬಹುದು ಅಂತೆಲ್ಲಾ ನೋಡುಗರು ಲೆಕ್ಕಾಚಾರ ಹಾಕಿದ್ದರು.

  'ಬಿಗ್ ಬಾಸ್' ಮನೆಯೊಳಗೆ ಮೊದಲೆರಡು ವಾರ ಪ್ರಿಯಾಂಕಾಗೆ ನೆಗೆಟಿವ್ ಇಮೇಜ್ ಕ್ಯಾರಿ ಆಗಿತ್ತು. ಪ್ರಿಯಾಂಕಾ ಯಾವ ಕೆಲಸವನ್ನೂ ಮಾಡಲ್ಲ, ಸೋಮಾರಿ, ದುರಹಂಕಾರಿ ಅಂತಲೇ ಹಲವು ಸ್ಪರ್ಧಿಗಳು ಭಾವಿಸಿದ್ದರು. ಇದೇ ಕಾರಣಕ್ಕೆ ಪ್ರಿಯಾಂಕಾ ನಾಮಿನೇಟ್ ಕೂಡ ಆಗಿದ್ದರು.

  ಹೀಗಿರುವಾಗಲೇ, 'ಬಿಗ್ ಬಾಸ್ ದರ್ಬಾರ್' ಚಟುವಟಿಕೆಯಲ್ಲಿ ಪ್ರಿಯಾಂಕಾ ಗೆದ್ದು ಮಹಾರಾಣಿ ಪಟ್ಟಕ್ಕೇರಿದರು. ಸಿಂಹಾಸನದ ಮೇಲೆ ಪ್ರಿಯಾಂಕಾ ಕೂತಿದ್ದೇ ತಡ ಆಕೆಯ ಇಮೇಜ್ ಬದಲಾಗಲು ಆರಂಭವಾಯಿತು. ಮುಂದೆ ಓದಿರಿ...

  ಮನರಂಜನೆ ಎಂಬ ಮಂತ್ರ

  ಮನರಂಜನೆ ಎಂಬ ಮಂತ್ರ

  'ಮಹಾರಾಣಿ' ಆಗಿ ಪ್ರಿಯಾಂಕಾ ನಡೆಸಿದ ಆಡಳಿತ ವೈಖರಿ ಅನೇಕರಿಗೆ ಇಷ್ಟವಾಯಿತು. ಟಾಸ್ಕ್ ನಲ್ಲಿ ಮನರಂಜನೆ ಕೊಡುವುದು ಮಾತ್ರ ಪ್ರಿಯಾಂಕಾ ಉದ್ದೇಶ ಆಗಿತ್ತು. ಹೀಗಾಗಿ, ಶಿಕ್ಷೆಗಳನ್ನೂ ತಮಾಷೆಯಾಗಿ ನೀಡುತ್ತಿದ್ದರು. 'ದರ್ಬಾರ್' ವೇಳೆ ಎಲ್ಲರನ್ನೂ ಕಟ್ಟಿ ಹಾಕಿ ಕೂರಿಸದೇ, ಖುಷಿ ಖುಷಿಯಾಗಿ ಚಟುವಟಿಕೆಯನ್ನು ಪ್ರಿಯಾಂಕಾ ನಡೆಸಿಕೊಟ್ಟರು. ಇದು ಕೆಲ ಸ್ಪರ್ಧಿಗಳಿಗೆ ತೃಪ್ತಿ ನೀಡಿತು. ಹೀಗಾಗಿ, 'ರಾಜಾಧಿರಾಜ' ಆಯ್ಕೆ ಸಂದರ್ಭದಲ್ಲಿ ಹೆಚ್ಚಿನ ಸ್ಪರ್ಧಿಗಳು ಪ್ರಿಯಾಂಕಾಗೆ ಹಾರ ಹಾಕಿದರು.

  ಜಡೆ ಜಗಳ ಶುರು: ಪ್ರಿಯಾಂಕಾ ಕಂಡ್ರೆ ಭೂಮಿ ಶೆಟ್ಟಿಗೆ ಯಾಕೆ ಹೊಟ್ಟೆ ಉರಿ.?ಜಡೆ ಜಗಳ ಶುರು: ಪ್ರಿಯಾಂಕಾ ಕಂಡ್ರೆ ಭೂಮಿ ಶೆಟ್ಟಿಗೆ ಯಾಕೆ ಹೊಟ್ಟೆ ಉರಿ.?

  ಪ್ರಿಯಾಂಕಾ ಆಡಳಿತ ಇಷ್ಟ ಆಗಿದ್ದು ಯಾಕೆ.?

  ಪ್ರಿಯಾಂಕಾ ಆಡಳಿತ ಇಷ್ಟ ಆಗಿದ್ದು ಯಾಕೆ.?

  ಸ್ತ್ರೀ ಸಾಮ್ರಾಜ್ಯ ಕಟ್ಟಿದ ಪ್ರಿಯಾಂಕಾ ಎಲ್ಲವನ್ನೂ ಅಚ್ಚುಕಟ್ಟಾಗಿ ನಿಭಾಯಿಸಿದರು, ಏನೂ ತೊಂದರೆ ಆಗದೆ, ವಾದ-ವಿವಾದ ಉಂಟು ಮಾಡದೆ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಚಟುವಟಿಕೆ ಪೂರ್ಣಗೊಳಿಸಿದರು ಎಂಬ ಕಾರಣಗಳನ್ನು ನೀಡಿ ಚಂದನ್ ಆಚಾರ್, ಸುಜಾತ, ಹರೀಶ್ ರಾಜ್, ಕುರಿ ಪ್ರತಾಪ್.. ಪ್ರಿಯಾಂಕಾಗೆ ಹಾರ ಹಾಕಿದರು.

  'ಬಿಗ್ ಬಾಸ್' ಸಾಮ್ರಾಜ್ಯದಲ್ಲಿ 'ರಾಜ' ಜೈಜಗದೀಶ್ ದರ್ಬಾರ್.!'ಬಿಗ್ ಬಾಸ್' ಸಾಮ್ರಾಜ್ಯದಲ್ಲಿ 'ರಾಜ' ಜೈಜಗದೀಶ್ ದರ್ಬಾರ್.!

  ಪ್ರಿಯಾಂಕಾ 'ಸಹೃದಯಿ'

  ಪ್ರಿಯಾಂಕಾ 'ಸಹೃದಯಿ'

  ಇನ್ನೂ ಪ್ರಿಯಾಂಕಾ ಸಹೃದಯಿ ಎಂದು ಇದೇ ಟಾಸ್ಕ್ ನಲ್ಲಿ ಚೈತ್ರ ಕೋಟೂರು ಹೇಳಿದರು. ಮಹಾರಾಣಿಗೆ ಇರಬೇಕಾದ ಗತ್ತು-ಗೈರತ್ತು ಪ್ರಿಯಾಂಕಾರಲ್ಲಿ ಇತ್ತು ಎಂದು ರಾಜು ತಾಳಿಕೋಟೆ ಮೆಚ್ಚಿಕೊಂಡರು. ಒಟ್ನಲ್ಲಿ, ಪ್ರಿಯಾಂಕಾ ಬಗ್ಗೆ ಇದ್ದ ನೆಗೆಟಿವ್ ಇಮೇಜ್ 'ಮಹಾರಾಣಿ' ಪಟ್ಟಕ್ಕೇರುತ್ತಿದ್ದಂತೆಯೇ ಕಳಚಿ ಬಿತ್ತು.

  ಕಿರುತೆರೆ ಲೋಕದ ಈ ಸುಂದರಿಯರು ಮೇಕಪ್ ಇಲ್ಲದೆ ಹೇಗೆ ಕಾಣ್ತಾರೆ ನೋಡಿಕಿರುತೆರೆ ಲೋಕದ ಈ ಸುಂದರಿಯರು ಮೇಕಪ್ ಇಲ್ಲದೆ ಹೇಗೆ ಕಾಣ್ತಾರೆ ನೋಡಿ

  ಪ್ರಿಯಾಂಕಾಗೆ ಪ್ಲಸ್ ಪಾಯಿಂಟ್

  ಪ್ರಿಯಾಂಕಾಗೆ ಪ್ಲಸ್ ಪಾಯಿಂಟ್

  ಅತ್ತ ಮೊದಮೊದಲು ರಾಜನ ಪಟ್ಟಕ್ಕೆ ಬಂದ ಜೈಜಗದೀಶ್ ಕೊಂಚ ಕನ್ ಫ್ಯೂಸ್ ಮಾಡಿಕೊಂಡರು ಎಂಬುದು ಕೆಲವರ ಅಭಿಪ್ರಾಯ. ಹೀಗಾಗಿ ಕಿಶನ್ ಮತ್ತು ಭೂಮಿ ಮಾತ್ರ ಜೈಜಗದೀಶ್ ಗೆ ಹಾರ ಹಾಕಿದರು. ಇತ್ತ ವಾಸುಕಿ ವೈಭವ್ ಅತಿಯಾಗಿ ಕಟ್ಟುನಿಟ್ಟಿನ ಆಡಳಿತ ಕೊಟ್ಟಿದ್ದರಿಂದ ಕೆಲವರು ರೆಬೆಲ್ ಆಗಿದ್ದರು. ಇಬ್ಬರ ಆಡಳಿತ ನೋಡಿ ಪ್ರಿಯಾಂಕಾ ಕೆಲ ಕಡೆ ಸುಧಾರಣೆ ತಂದಿದ್ದು ಅವರ ಇಮೇಜ್ ಗೆ ಪ್ಲಸ್ ಪಾಯಿಂಟ್ ಆಯ್ತು. ಒಟ್ನಲ್ಲಿ, ಸದ್ಯಕ್ಕೆ ಪ್ರಿಯಾಂಕಾ ಮಾಸ್ಟರ್ ಪ್ಲಾನ್ ವರ್ಕ್ ಆಗಿದೆ. ಎಲ್ಲರ ಮನಸ್ಸು ಗೆಲ್ಲುವಲ್ಲಿ ಪ್ರಿಯಾಂಕಾ ಯಶಸ್ವಿ ಆಗಿದ್ದಾರೆ. ಮುಂದೆ ಏನಾಗುತ್ತೋ, ನೋಡೋಣ.

  English summary
  Bigg Boss Kannada 7: Priyanka gets positive image after becoming Queen.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X