'ಬಿಗ್ ಬಾಸ್ ಕನ್ನಡ 7' ಪ್ರೋಮೋ ಶೂಟ್ ನಲ್ಲಿ ಸ್ಟೈಲಿಶ್ ಸುದೀಪ್
'ಪೈಲ್ವಾನ್' ಸಿನಿಮಾದ ಬಿಡುಗಡೆಯ ಕೆಲಸಗಳ ನಡುವೆಯೂ ಸುದೀಪ್ 'ಬಿಗ್ ಬಾಸ್ ಕನ್ನಡ 7' ಕಾರ್ಯಕ್ರಮದ ಪ್ರೊಮೋ ಶೂಟ್ ನಲ್ಲಿ ಭಾಗಿಯಾಗಿದ್ದಾರೆ.
'ಪೈಲ್ವಾನ್' ಸಿನಿಮಾ ಗುರುವಾರ ಬಿಡುಗಡೆಯಾಗಿದ್ದು, ಬಿಗ್ ಬಾಸ್ ಪ್ರೊಮೋ ಚಿತ್ರೀಕರಣ ಬುಧವಾರ ನಡೆದಿದೆ. ಕಳೆದ ಬಾರಿ ಮಾರ್ಕೆಟ್ ಸೆಟ್ ನಲ್ಲಿ ಪ್ರೊಮೋ ಶೂಟ್ ಆಗಿದ್ದು, ಈ ಬಾರಿ ಒಳಾಂಗಣ ಸೆಟ್ ನಲ್ಲಿ ಚಿತ್ರೀಕರಣ ಮಾಡಲಾಗಿದೆ.
ಪ್ರೊಮೋ ಚಿತ್ರೀಕರಣದ ಮೇಕಿಂಗ್ ವಿಡಿಯೋವನ್ನು ಕಲರ್ಸ್ ಕನ್ನಡ ಫೇಸ್ ಬುಕ್ ಪೇಜ್ ನಲ್ಲಿ ಹಂಚಿಕೊಳ್ಳಲಾಗಿದೆ. ಕಲರ್ಸ್ ಕನ್ನಡದ ಬಿಜಿನೆಸ್ ಹೆಡ್, ಬಿಗ್ ಬಾಸ್ ಕಾರ್ಯಕ್ರಮದ ನಿರ್ದೇಶಕ ಪರಮೇಶ್ವರ ಗುಂಡ್ಕಲ್ ನಿರ್ದೇಶನ ಮಾಡಿದ್ದಾರೆ.

ಪೂಜೆ, ಡಾಕ್ಟರ್, ಕಾಫಿ ವಿತ್ ಕಿಚ್ಚ ಹೀಗೆ ಬಗೆ ಬಗೆಯಾಗಿ ಪ್ರೊಮೋವನ್ನು ಚಿತ್ರೀಕರಣ ಮಾಡಲಾಗಿದೆ. ಎಂದಿನಂತೆ ಸ್ಟೈಲಿಶ್ ಲುಕ್ ನಲ್ಲಿ ಕಿಚ್ಚ ಕಾಣಿಸಿಕೊಂಡಿದ್ದಾರೆ. ಸದ್ಯದಲ್ಲಿಯೇ, ಪ್ರೊಮೋ ಬಿಡುಗಡೆ ಆಗಲಿದೆ.

ಈ ಬಾರಿ ಕಲರ್ಸ್ ಸೂಪರ್ ಬದಲಾಗಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್ ಬಾಸ್ ಪ್ರಸಾರ ಆಗಲಿದೆ. ಕಳೆದ ಬಾರಿ ಇದ್ದ ಕಮನ್ ಮ್ಯಾನ್ ಗಳಿಗೆ ಅವಕಾಶ ಈಗ ಇರುವುದಿಲ್ಲ. ಅಕ್ಟೋಬರ್ ಎರಡನೇ ವಾರದಿಂದ ಕಾರ್ಯಕ್ರಮ ಶುರು ಆಗುತ್ತಿದೆ.


Click it and Unblock the Notifications











