ಒಂದು ವಾರದ 'ಬಿಗ್ ಬಾಸ್': ರವಿ ಬೆಳಗೆರೆ ಕಿಂಗ್, ಮಿಕ್ಕವರೆಲ್ಲ ಠುಸ್.!

Recommended Video

Ravi Belagere is gaining most of the footage in the house.

ಬಹಳ ನಿರೀಕ್ಷೆಯೊಂದಿಗೆ 'ಬಿಗ್ ಬಾಸ್ ಕನ್ನಡ-7' ಕಾರ್ಯಕ್ರಮ ಶುರುವಾಯ್ತು. ಕಾಮನ್ ಮ್ಯಾನ್ ಗಳನ್ನೆಲ್ಲ ಪರಿಗಣಿಸದೇ, ಸೆಲೆಬ್ರಿಟಿಗಳಿಗೆ ಮಾತ್ರ ಆಹ್ವಾನ ನೀಡಿ, ಕಲರ್ಸ್ ಸೂಪರ್ ನಿಂದ ಕಲರ್ಸ್ ಕನ್ನಡಕ್ಕೆ ಪ್ರೋಗ್ರಾಂ ಶಿಫ್ಟ್ ಮಾಡಿದ್ರಿಂದ ಈ ಬಾರಿಯ 'ಬಿಗ್ ಬಾಸ್' ಹೆವಿ ಟಿ.ಆರ್.ಪಿ ಗಳಿಸಬಹುದು ಎಂಬ ಲೆಕ್ಕಾಚಾರ ಎಲ್ಲರ ತಲೆಯಲ್ಲೂ ಇತ್ತು.

ಮೊದಲ ನೋಟಕ್ಕೆ 'ಬಿಗ್ ಬಾಸ್ ಕನ್ನಡ-7' ಸ್ಪರ್ಧಿಗಳು ಓಕೆ. ಎಲ್ಲರೂ ಗೊತ್ತಿರುವ ಮುಖಗಳೇ. ಮುಕ್ಕಾಲು ಭಾಗ ಕಿರುತೆರೆ ಲೋಕದವರೇ ತುಂಬಿಕೊಂಡಿದ್ದರೂ, ವೀಕ್ಷಕರ ಪಾಲಿಗೆ ಟಿ.ಆರ್.ಪಿ ಕಾ ಮಾಮ್ಲಾ ಅಂತನಿಸಿದ್ದು ರವಿ ಬೆಳಗೆರೆ ಮಾತ್ರ.!

ರವಿ ಬೆಳಗೆರೆ ಬಗ್ಗೆ ಹೈ ಎಕ್ಸ್ ಪೆಕ್ಟೇಶನ್ ಇಟ್ಟುಕೊಂಡಿದ್ದ ಜನರಿಗೆ ಮೊದಲ ದಿನವೇ ಶಾಕ್ ಸಿಕ್ಬಿಡ್ತು. ''ರವಿ ಬೆಳಗೆರೆ ಸ್ಪರ್ಧಿ ಅಲ್ಲ, ಬರೀ ಅತಿಥಿ ಅಷ್ಟೇ. ಶನಿವಾರದವರೆಗೆ ಮಾತ್ರ ಅವರ ವಾಸ'' ಎಂದು 'ಬಿಗ್ ಬಾಸ್' ಹೇಳಿದ್ಮೇಲೆ ನೋಡುಗರು ಸಹಜವಾಗಿ ಬೇಸರ ಮಾಡಿಕೊಂಡಿದ್ದಾರೆ. ಯಾಕಂದ್ರೆ, ಒಂದುವರೆ ಗಂಟೆಯ ಶೋ ಕಂಟೆಂಟ್ ನಲ್ಲಿ ರವಿ ಬೆಳಗೆರೆ ಬಿಟ್ಟರೆ ಇನ್ಯಾರೂ ಕಿಂಗ್ ಆಗುತ್ತಿಲ್ಲ. ಕೆಲ ಸ್ಪರ್ಧಿಗಳಂತೂ ಫ್ರೇಮ್ ಗೆ ಸಿಗುತ್ತಿಲ್ಲ. ಮುಂದೆ ಓದಿರಿ...

ರವಿ ಬೆಳಗೆರೆ ಈಸ್ ಬಾಸ್.!

ರವಿ ಬೆಳಗೆರೆ ಈಸ್ ಬಾಸ್.!

'ಬಿಗ್ ಬಾಸ್' ಕಾರ್ಯಕ್ರಮದ ಪ್ರತಿ ಸಂಚಿಕೆಯ ಕಂಟೆಂಟ್ ವಿಷಯಕ್ಕೆ ಬಂದರೆ ಹಿರಿಯ ಪತ್ರಕರ್ತ, ಹಾಯ್ ಬೆಂಗಳೂರು ಪತ್ರಿಕೆ ಸಂಪಾದಕ ರವಿ ಬೆಳಗೆರೆ ಈಸ್ ಬಾಸ್. ಚಿತ್ರರಂಗದವರ ಬಗ್ಗೆ, ಪ್ರಖ್ಯಾತರ ಬಗ್ಗೆ ಮೊದಲ ದಿನದಿಂದಲೂ ಒಂದಲ್ಲಾ ಒಂದು ಸಂಗತಿಗಳನ್ನು ಬಹಿರಂಗ ಪಡಿಸಿ ಫುಟೇಜ್ ಪಡೆಯುವಲ್ಲಿ ರವಿ ಬೆಳಗೆರೆ ಯಶಸ್ವಿ ಆಗಿದ್ದಾರೆ.

ಕಮಾಲ್ ಮಾಡದ ಕುರಿ

ಕಮಾಲ್ ಮಾಡದ ಕುರಿ

ಕಾಮಿಡಿ ನಟ ಕುರಿ ಪ್ರತಾಪ್ ಮೇಲೆ ಹೈ ಹೋಪ್ಸ್ ಇದ್ದದ್ದು ಸತ್ಯ. 'ಬಿಗ್ ಬಾಸ್' ಮನೆಯಲ್ಲಿ ಕುರಿ ಪ್ರತಾಪ್ ನಗುವಿನ ಇಂಜೆಕ್ಷನ್ ಕೊಡ್ತಾರೆ ಅಂತ ಭಾವಿಸಿದ್ದರೆ, ಅದ್ಯಾಕೋ ಅವರು ಮಂಕಾಗಿದ್ದಾರೆ. ಆಗೊಮ್ಮೆ ಈಗೊಮ್ಮೆ ಕಾಮಿಡಿ ಪಂಚ್ ಕೊಟ್ಟರೂ ಕುರಿ ಪ್ರತಾಪ್ ನಿರೀಕ್ಷೆ ಮಟ್ಟ ತಲುಪಿಲ್ಲ.

ಹೆಂಗಳೆಯರ ಮನ ಗೆಲ್ಲುತ್ತಿರುವ ದುನಿಯಾ ರಶ್ಮಿ

ಹೆಂಗಳೆಯರ ಮನ ಗೆಲ್ಲುತ್ತಿರುವ ದುನಿಯಾ ರಶ್ಮಿ

ಸೈಲೆಂಟ್ ಆಗಿದ್ದರೂ ದುನಿಯಾ ರಶ್ಮಿ ಹೆಂಗಳೆಯರ ಮನ ಗೆಲ್ಲುತ್ತಿದ್ದಾರೆ. ತಮ್ಮ ಕುಟುಂಬ, ಕಷ್ಟದ ದಿನಗಳ ಬಗ್ಗೆ ಮನಬಿಚ್ಚಿ ಮಾತನಾಡುತ್ತಿರುವ ರಶ್ಮಿಗೆ ಫ್ಯಾನ್ ಫಾಲೋವಿಂಗ್ ಬಿಲ್ಡ್ ಆಗುತ್ತಿದೆ.

ಆಗೊಮ್ಮೆ ಈಗೊಮ್ಮೆ ಕಾಣುವ ಜೈಜಗದೀಶ್

ಆಗೊಮ್ಮೆ ಈಗೊಮ್ಮೆ ಕಾಣುವ ಜೈಜಗದೀಶ್

ಅಡುಗೆ ಮನೆ ಡಿಪಾರ್ಟ್ಮೆಂಟ್ ಸೇರಿರುವ ಜೈಜಗದೀಶ್ ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ತಿದ್ದಾರೆ. ಚಿತ್ರರಂಗದಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತ ಜೈಜಗದೀಶ್ ಪ್ರಮುಖ ಸ್ಪರ್ಧಿಯಾಗಿ ಗುರುತಿಸಿಕೊಳ್ತಿದ್ದಾರೆ.

ಇದ್ದಿದ್ದರಲ್ಲಿ ಇವರು ಓಕೆ

ಇದ್ದಿದ್ದರಲ್ಲಿ ಇವರು ಓಕೆ

ಶೈನ್ ಶೆಟ್ಟಿ, ಪ್ರಿಯಾಂಕಾ, ವಾಸುಕಿ ವೈಭವ್, ಹರೀಶ್ ರಾಜ್, ಚೈತ್ರ ಕೊಟ್ಟೂರು, ದೀಪಿಕಾ ದಾಸ್... ಹಾಡು, ಡ್ಯಾನ್ಸ್, ಮಿಮಿಕ್ರಿ, ಕಾಮಿಡಿ ಮಾಡಿಕೊಂಡು ವೀಕ್ಷಕರಿಗೆ ಮನರಂಜನೆ ಕೊಡ್ತಿದ್ದಾರೆ.

ಇವರೆಲ್ಲ ಏನ್ ಮಾಡ್ತಿದ್ದಾರೆ.?

ಇವರೆಲ್ಲ ಏನ್ ಮಾಡ್ತಿದ್ದಾರೆ.?

ಭೂಮಿ ಶೆಟ್ಟಿ, ಚಂದನ್ ಆಚಾರ್, ಚಂದನ ಅನಂತ ಕೃಷ್ಣ, ಗುರುಲಿಂಗ ಸ್ವಾಮಿ, ರಾಜು ತಾಳಿಕೋಟೆ, ಚೈತ್ರ ವಾಸುದೇವನ್, ಸುಜಾತ ಏನ್ ಮಾಡ್ತಿದ್ದಾರೆ ಅಂತಲೇ ವೀಕ್ಷಕರಿಗೆ ಗೊತ್ತಾಗುತ್ತಿಲ್ಲ. ಇವರಲ್ಲಿ ಕೆಲವರಂತೂ ಯಾವ ಕ್ಯಾಮರಾ ಫ್ರೇಮ್ ಗೂ ಸಿಗುತ್ತಿಲ್ಲ.

ಬಹುತೇಕರು ಠುಸ್

ಬಹುತೇಕರು ಠುಸ್

ಸದ್ಯ 'ಬಿಗ್ ಬಾಸ್' ಮನೆ ಸೇರಿರುವ ಸ್ಪರ್ಧಿಗಳ ಪೈಕಿ ಬಹುತೇಕರು ಕಂಟೆಂಟ್ ನಲ್ಲಿ ಠುಸ್ ಆಗಿದ್ದಾರೆ. ಸಮಾನ ಮನಸ್ಕರೇ ಹೆಚ್ಚಾಗಿರುವುದರಿಂದ ಇನ್ನೂ ಗದ್ದಲ-ಗಲಾಟೆ ಆರಂಭ ಆಗಿಲ್ಲ.

ಕೆಲಸ ಮಾಡದ ಟಾಸ್ಕ್ ಗಳು.!

ಕೆಲಸ ಮಾಡದ ಟಾಸ್ಕ್ ಗಳು.!

'ಅಪ್ಪ-ಅಮ್ಮ'ನ ಬಗ್ಗೆ ಮಾತನಾಡುವ ಒಂದು ಟಾಸ್ಕ್ ಬಿಟ್ಟರೆ ಈ ಒಂದು ವಾರದಲ್ಲಿ 'ಬಿಗ್ ಬಾಸ್' ಕೊಟ್ಟಿದ್ದ ಯಾವ ಟಾಸ್ಕ್ ಗಳು ಅಷ್ಟಾಗಿ ವರ್ಕ್ ಆಗಿಲ್ಲ. ಸದ್ಯಕ್ಕೆ ಚೈತ್ರ ಕೊಟ್ಟೂರ್-ಶೈನ್ ಶೆಟ್ಟಿ-ಪ್ರಿಯಾಂಕಾ ಮಧ್ಯೆ ಲವ್ ಟ್ರೈಯಾಂಗಲ್ ಆಗಿದೆ. ಅಷ್ಟು ಬಿಟ್ಟರೆ 'ಬಿಗ್ ಬಾಸ್' ಮನೆಯಲ್ಲಿ ಇನ್ನೂ ಕಿಡಿ ಹೊತ್ತಿಕೊಂಡಿಲ್ಲ.

More from Filmibeat

English summary
Bigg Boss Kannada 7: Week 1: Ravi Belagere is gaining most of the footage in the house.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X