'ಮೇಕಪ್ ಇಲ್ಲದ ದೃಶ್ಯ ಹೆಚ್ಚು ತೋರಿಸಿದ್ದಾರೆ': ಚೈತ್ರಾ ಹೇಳಿಕೆಗೆ ಗರಂ ಆದ ಸುದೀಪ್

Recommended Video

Bigg Boss Kannada 7 : Sudeep gets angry on Chaitra's comment

ಬಿಗ್ ಬಾಸ್ ಕನ್ನಡ ಏಳನೇ ಆವೃತ್ತಿಯ ಎರಡನೇ ವಾರ ಚೈತ್ರಾ ವಾಸುದೇವನ್ ಎಲಿಮಿನೇಟ್ ಆದರು. ದೊಡ್ಮನೆಯಿಂದ ಚೈತ್ರಾ ಅವರನ್ನ ಹೊರಗೆ ಕರೆದ ಸುದೀಪ್ ವೇದಿಕೆ ಮೇಲೆ ಮಾತುಕತೆ ಮುಂದುವರಿಸಿದರು.

ಈ ವೇಳೆ ಚೈತ್ರಾ ವಾಸುದೇವನ್ ಅವರಿಗೆ ತಮ್ಮ ಎರಡು ವಾರದ ಜರ್ನಿ ಕುರಿತು VT (ವಿಡಿಯೋ ದೃಶ್ಯ) ತೋರಿಸಲಾಯಿತು. ಈ ವಿಡಿಯೋ ನೋಡಿದ ಚೈತ್ರಾ ವಾಸುದೇವನ್' ಮೇಕಪ್ ಇಲ್ಲದ ದೃಶ್ಯ ಹೆಚ್ಚು ತೋರಿಸಿದ್ದಾರೆ' ಒಂದು ವಿಚಾರಕ್ಕೆ ಕಾಮೆಂಟ್ ಮಾಡಿದರು.

ಈ ಮಾತಿನಿಂದ ಬೇಸರಗೊಂಡ ಸುದೀಪ್ ಅವರು, ವೇದಿಕೆಯಲ್ಲೇ ಚೈತ್ರಾ ಅವರಿಗೆ ಕ್ಲಾಸ್ ತೆಗೆದುಕೊಂಡರು. ಅಷ್ಟಕ್ಕೂ, ಚೈತ್ರಾ ಹೇಳಿಕೆಯ ಬಗ್ಗೆ ಸುದೀಪ್ ಏನಂದ್ರು?

ಏಳು ಆವೃತ್ತಿಯಲ್ಲಿ ಇದೇ ಮೊದಲು

ಏಳು ಆವೃತ್ತಿಯಲ್ಲಿ ಇದೇ ಮೊದಲು

ಈ ಹಿಂದಿನ ಆರು ಮತ್ತು ಈಗ ಏಳನೇ ಸಂಚಿಕೆ ಸೇರಿ, ಇದೇ ಮೊದಲ ಬಾರಿಗೆ ಮನೆಯಿಂದ ಹೊರಗೆ ಬಂದ ಸ್ಪರ್ಧಿಯೊಬ್ಬರು ಮೇಕಪ್ ಬಗ್ಗೆ ಮಾತನಾಡಿದ್ದಾರೆ. ಇದುವರೆಗೂ ವಿಡಿಯೋ ನೋಡಿದ ಬಹುತೇಕ ಎಲ್ಲರೂ ಕಣ್ಣೀರು ಹಾಕಿದ್ದರು. ತಮ್ಮ ಭಾವನೆ ತೋಡಿಕೊಂಡಿದ್ದರು. ಬಿಗ್ ಬಾಸ್ ಮನೆಯನ್ನ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದರು. ಆದರೆ, ಚೈತ್ರಾ ಅವರು 'ಮೇಕಪ್ ಇಲ್ಲದ ದೃಶ್ಯಗಳನ್ನ ಹೆಚ್ಚು ತೋರಿಸಿದ್ದಾರೆ' ಎಂದು ಹೇಳಿದ್ದು, ಸುದೀಪ್ ಅವರ ಕೆರಳಿಸಿತು.

'This is not fair' ಎಂದ ಸುದೀಪ್

'This is not fair' ಎಂದ ಸುದೀಪ್

''ಚೈತ್ರಾ ಅವರೇ ಇದು ಸೀರಿಯಸ್ ನೋಟ್, This is not fair. ಇದುವರೆಗೂ ಮನೆಗೆ ಬಂದಿರುವ ಎಲ್ಲ ಸ್ಪರ್ಧಿಗಳಿಗೂ ಮೇಕಪ್ ಇಲ್ಲದೇ ತೋರಿಸಿದ್ದೀವಿ. ಅದನ್ನ ನೋಡಿ ಖುಷಿ ಪಡಬೇಕು. ಅದರಲ್ಲಿ ತಪ್ಪು ಕಂಡುಹಿಡಿಯುವುದನ್ನ ಏನು ಹೇಳಬೇಕು. ನಿಜವಾಗಲು ಅದು ತಪ್ಪಿಲ್ಲ. ಅದು ಬೆಳಿಗ್ಗೆ ಎದ್ದ ತಕ್ಷಣ ಬರುವ ಮುಗ್ದ ದೃಶ್ಯ'' ಎಂದು ಮನವರಿಕೆ ಮಾಡಿಕೊಟ್ಟರು.

ಕ್ಷಮೆ ಕೇಳಿದ ಚೈತ್ರಾ, ಕೂಲ್ ಆಗದ ಸುದೀಪ್

ಕ್ಷಮೆ ಕೇಳಿದ ಚೈತ್ರಾ, ಕೂಲ್ ಆಗದ ಸುದೀಪ್

ಸುದೀಪ್ ಅವರು ಈ ಮಾತು ಹೇಳುತ್ತಿದ್ದಂತೆ ಚೈತ್ರಾ ಕ್ಷಮೆ ಕೇಳಿದ್ರು. ಬಳಿಕಯೂ ಕೂಲ್ ಆಗದ ಸುದೀಪ್ ''ಜೀವನದಲ್ಲಿ ಕೆಲವು ಸಲ ಮುಂದೆ ಹೋಗುವುದರಲ್ಲಿ ಸ್ವಲ್ಪ ತಡೆ ಸಿಕ್ಕಿದೆ ಅಂದ್ರೆ, ಎಲ್ಲಿ ಏನೋ ಒಂಚೂರು ಸಮಸ್ಯೆಯಾಗಿರುತ್ತೆ. ನೀವಾಗಿರಬಹುದು ಅಥವಾ ನಾನಾಗಿರಬಹುದು. ಇಲ್ಲಿಂದ ಮುಂದೆ ಬೆಳಿಯಬೇಕು ಅಂದುಕೊಂಡರೆ ಅದನ್ನ ನಾವು ತಿದ್ದಿಕೊಳ್ಳಬೇಕು. ಆಗ ಇನ್ನು ಮುಂದೆ ಹೋಗ್ತೀನಿ'' ಎಂದು ಬುದ್ದಿ ಹೇಳಿದರು.

ಸುಮ್ಮನೆ 24 ವರ್ಷ ಇಂಡಸ್ಟ್ರಿಯಲ್ಲಿ ಇದ್ದಿಲ್ಲ ನಾನು

ಸುಮ್ಮನೆ 24 ವರ್ಷ ಇಂಡಸ್ಟ್ರಿಯಲ್ಲಿ ಇದ್ದಿಲ್ಲ ನಾನು

ಈ ಮಧ್ಯೆ ವಿಟಿ ನೋಡಿ ಚೆನ್ನಾಗಿದೆ ಎಂದು ಹೇಳಿದೆ ಸರ್ ಎಂದಿದ್ದಕ್ಕೆ ಮತ್ತೆ ಪ್ರತಿಕ್ರಿಯಿಸಿದ ಸುದೀಪ್ ''ಚೈತ್ರಾ ಅವರೇ ಸುಮ್ಮನೆ ಹೇಳಬೇಡಿ. ನಾನೇನು ಸುಮ್ಮನೆ 24 ವರ್ಷ ಇಂಡಸ್ಟ್ರಿಯಲ್ಲಿದ್ದು, ಇಲ್ಲಿ ಬಂದು ನಿಂತಿಲ್ಲ. ಇದನ್ನ ನಾನು ಬಹಳ ನೊಂದುಕೊಂಡು ಹೇಳುತ್ತಿದ್ದೇನೆ'' ಎಂದು ಕಿಚ್ಚನ ಮಾತಿನಲ್ಲೆ ಪೆಟ್ಟು ಕೊಟ್ಟರು.

More from Filmibeat

English summary
Kannada actor, bigg boss host Sudeep is upset About Chaitra Vasudevan's makeup statement.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X