'ಬಿಗ್ ಬಾಸ್' ಹೀಗ್ಯಾಕ್ ಮಾಡಿದ್ರು.? 'ಟ್ರೋಫಿ' ಹಿಂದಿನ ಗುಟ್ಟೇನು.?
Recommended Video
ಕನ್ನಡದಲ್ಲಿ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ 'ಬಿಗ್ ಬಾಸ್' ಶುರುವಾಗಿ ಆರು ವರ್ಷಗಳು ಕಳೆದಿವೆ. ಏಳನೇ ಆವೃತ್ತಿಗೆ ಮೊನ್ನೆಯಷ್ಟೇ ಚಾಲನೆ ಸಿಕ್ಕಿದೆ. ಕಳೆದ ಆರು ಸೀಸನ್ ಗಳಲ್ಲಿ 'ಬಿಗ್ ಬಾಸ್' ವಿನ್ನರ್ ಗಳಿಗೆ ನೀಡುವ ಟ್ರೋಫಿ ರಿವೀಲ್ ಆಗಿದ್ದು ಗ್ರ್ಯಾಂಡ್ ಫಿನಾಲೆಯಲ್ಲಿ.
ಆದರೆ, ಈ ಬಾರಿ ಹಾಗಾಗಿಲ್ಲ. ಮೊಟ್ಟ ಮೊದಲ ದಿನವೇ.. 'ಬಿಗ್ ಬಾಸ್ ಕನ್ನಡ-7' ವಿಜೇತರಿಗೆ ನೀಡುವ ಟ್ರೋಫಿಯನ್ನ ಜಗಜ್ಜಾಹೀರು ಮಾಡಲಾಗಿದೆ. ಅದು 'ಬಿಗ್ ಬಾಸ್' ಮನೆಯೊಳಗೆ.!
ಹೌದು, ಈ ಬಾರಿಯ 'ದೊಡ್ಮನೆ'ಯೊಳಗಿನ ವಿಶೇಷತೆಗಳ ಪಟ್ಟಿಯಲ್ಲಿ ಇದೂ ಒಂದು. 'ಬಿಗ್ ಬಾಸ್' ಮನೆಯಲ್ಲಿನ ಲಿವಿಂಗ್ ಏರಿಯಾದಲ್ಲೇ ಯಾರ ಕೈಗೂ ಸಿಗದ ರೀತಿಯಲ್ಲಿ, ಎತ್ತರದಲ್ಲಿ 'ವಿನ್ನರ್ ಟ್ರೋಫಿ' ಇಡಲಾಗಿದೆ.

ಜೊತೆಗೆ ಕಳೆದ ಆರು ಸೀಸನ್ ಗಳಲ್ಲಿ ಗೆಲುವಿನ ನಗೆ ಬೀರಿದವರ ಫೋಟೋಗಳನ್ನೂ ಹಾಕಲಾಗಿದೆ. ಈ ಬಾರಿ ಯಾರು ಗೆಲ್ಲಬಹುದು ಎಂಬ ಕುತೂಹಲಕ್ಕಾಗಿ ಒಂದು ಖಾಲಿ ಫ್ರೇಮ್ ನೂ ಇಡಲಾಗಿದೆ.
ಅಷ್ಟಕ್ಕೂ, 'ಬಿಗ್ ಬಾಸ್' ಹೀಗ್ಯಾಕೆ ಮಾಡಿದ್ರು.? ಇದರ ಹಿಂದಿನ ಗುಟ್ಟೇನು.? ಎಂಬ ಪ್ರಶ್ನೆಗೆ ಕಿಚ್ಚ ಸುದೀಪ್ ಕಂಡುಕೊಂಡ ಉತ್ತರ 'ಸ್ಫೂರ್ತಿ'. ''ಬಿಗ್ ಬಾಸ್' ಮನೆ ಸೇರಿರುವ ಸ್ಪರ್ಧಿಗಳು ಪ್ರತಿದಿನ ಈ ಟ್ರೋಫಿ ನೋಡಿ ಸ್ಫೂರ್ತಿ ಪಡೆಯಬಹುದು. ಖಾಲಿ ಇರುವ ಫ್ರೇಮ್ ನಲ್ಲಿ ತಮ್ಮ ಫೋಟೋ ಬರುವಂತೆ ಬುದ್ಧಿವಂತಿಕೆಯಿಂದ ಆಡಬಹುದು'' ಅಂತಾರೆ ಸುದೀಪ್.
ಇನ್ನೂ, ವಿನ್ನರ್ ಟ್ರೋಫಿ ಪಕ್ಕದಲ್ಲೇ ಒಂದು ಮೆಡಲ್ ಮತ್ತು ಕಳಪೆ ಬೋರ್ಡ್ ಕೂಡ ಹಾಕಲಾಗಿದೆ. ಇದನ್ನೆಲ್ಲ ನೋಡಿದರೆ, ಈ ಬಾರಿ ಸ್ಪರ್ಧಿಗಳು 'ಬಿಗ್ ಬಾಸ್' ಕೊಡುವ ಚಟುವಟಿಕೆಗಳನ್ನು ಸೀರಿಯಸ್ ಆಗಿ ತೆಗೆದುಕೊಂಡರೆ ಒಳಿತು.


Click it and Unblock the Notifications











