'ಬಿಗ್ ಬಾಸ್' ವೀಕ್ಷಕರಿಗೆ ಅಚ್ಚರಿ ನೀಡಿದ ಈ 5 ಜನರ 'ದೊಡ್ಮನೆ' ಎಂಟ್ರಿ!
Recommended Video
ಬಿಗ್ ಬಾಸ್ ಕನ್ನಡ 7ನೇ ಆವೃತ್ತಿಯಲ್ಲಿ ಯಾರೆಲ್ಲ ಭಾಗವಹಿಸುತ್ತಾರೆ ಎಂಬ ಅಭ್ಯರ್ಥಿಗಳ ಸಂಭಾವ್ಯ ಪಟ್ಟಿ ಕಾರ್ಯಕ್ರಮ ಆರಂಭಕ್ಕೂ ಮುನ್ನ ತುಂಬಾ ಸದ್ದಿ ಮಾಡಿತ್ತು. ಆ ಪಟ್ಟಿಯಲ್ಲಿದ್ದ ಬಹುತೇಕರು ದೊಡ್ಮನೆಗೆ ಎಂಟ್ರ ಕೊಟ್ಟಿದ್ದಾರೆ. ಆದರೆ, ಕೆಲವರ ಹೆಸರು ಎಲ್ಲಿಯೂ ಕೇಳಿ ಬಂದಿರಲಿಲ್ಲ. ಅಂತವರು ಬಿಗ್ ಬಾಸ್ ಗೆ ಬಂದು ಅಚ್ಚರಿ ನೀಡಿದ್ದಾರೆ.
ಹೌದು, ಈ ಸಲ ಅವರು ಹೋಗ್ತಾರೆ, ಇವರೇ ಇರ್ತಾರೆ, ಈತ ಬರ್ತಾನೆ, ಆಕೆ ಹೋಗ್ತಾಳೆ ಎಂದು ಧಾರಾವಾಹಿ ನಟಿಯರು ಹೆಸರು, ಸಿನಿಮಾ ಕಲಾವಿದರ ಹೆಸರು, ಕೆಲವು ಪತ್ರಕರ್ತರು ಹೆಸರು, ಕೆಲವು ಟಿಕ್ ಟಾಕ್ ಸ್ಟಾರ್ ಗಳ ಹೆಸರೆಲ್ಲ ಚರ್ಚೆಯಾಯಿತು. ಇದರಲ್ಲಿ ಕೆಲವರು ಬಂದರು, ಇನ್ನು ಕೆಲವರು ಬಂದಿಲ್ಲ.
ಹಾಗಿದ್ರೆ, ಸಂಭಾವ್ಯ ಪಟ್ಟಿಗಳಲ್ಲಿ ಕಾಣಿಸಿಕೊಳ್ಳದ ಯಾವ ವ್ಯಕ್ತಿಗಳು ಬಿಗ್ ಬಾಸ್ ಮನೆಯೊಳಗೆ ಹೋಗಿದ್ದಾರೆ. ಮುಂದೆ ಓದಿ....

ಚಂದನ್ ಆಚಾರ್ ಸರ್ಪ್ರೈಸ್
ಬಿಗ್ ಬಾಸ್ ಆರನೇ ಆವೃತ್ತಿಯಲ್ಲಿ ಚಂದನ್ ಆಚಾರ್ ಸ್ಪರ್ಧಿಯಾಗುತ್ತಾ ಹೆಸರು ಸದ್ದು ಮಾಡಿತ್ತು. ಆದರೆ, ಆ ಸೀಸನ್ ನಲ್ಲಿ ಚಂದನ್ ಕಾಣಿಸಿಕೊಂಡಿರಲಿಲ್ಲ. ಏಳನೇ ಆವೃತ್ತಿಯಲ್ಲಿ ಎಲ್ಲಿಯೂ ಚಂದನ್ ಹೆಸರು ಚರ್ಚೆಯಾಗಿಲ್ಲ. ಯಾವ ಸಂಭಾವ್ಯ ಪಟ್ಟಿಯಲ್ಲೂ ಹೆಸರು ಇರಲಿಲ್ಲ. ಆದರೆ, ಆರಂಭದ ದಿನ ಬಿಗ್ ಬಾಸ್ ಮನೆಯೊಳಗೆ ಬಂದು ಎಲ್ಲರಿಗೂ ಅಚ್ಚರಿ ನೀಡಿದರು.

ಚೈತ್ರಾ ಕೋಟೊರ್
ರಂಗಭೂಮಿ ಕಲಾವಿದೆ, ಬರಹಗಾರ್ತಿ ಹಾಗೂ ನಟಿಯಾಗಿರುವ ಚೈತ್ರಾ ಕೋಟೊರ್ ಅವರ ಹೆಸರು ಕೂಡ ಬಿಗ್ ಬಾಸ್ ಆರಂಭಕ್ಕೂ ಮುನ್ನ ಸದ್ದು ಮಾಡಿರಲಿಲ್ಲ. ಸೂಜಿದಾರ ಸಿನಿಮಾದಲ್ಲಿ ನಟಿಸಿದ್ದ ಚೈತ್ರಾ ಅವರನ್ನ ಬಿಗ್ ಬಾಸ್ ಆರಂಭದ ದಿನ ನೋಡಿ ಶಾಕ್ ಆಯ್ತು.

ಹರೀಶ್ ರಾಜ್ ಊಹಿಸಿರಲಿಲ್ಲ
ಕಳೆದ ಆವೃತ್ತಿಗಳಲ್ಲಿ ನಟ ಹರೀಶ್ ರಾಜ್ ಅವರು ಇರ್ತಾರೆ ಎಂದು ಊಹಿಸಲಾಗುತ್ತಿತ್ತು. ಆದರೆ, ಹಳೆ ಆವೃತ್ತಿಯಲ್ಲಿ ಏಲ್ಲೂ ಕಾಣಿಸಿಕೊಂಡಿರಲಿಲ್ಲ. ಹಾಗಾಗಿ, ಈ ಆವೃತ್ತಿಯಲ್ಲಿ ಅವರ ಹೆಸರನ್ನು ಯಾರೂ ಗೆಸ್ ಮಾಡಿರಲಿಲ್ಲ. 18ನೇ ಸ್ಪರ್ಧಿಯಾಗಿ ಬಂದ ಕಣ್ಣು ಹುಬ್ಬೇರಿಸುವಂತೆ ಮಾಡಿದರು.

ಅಗ್ನಿಸಾಕ್ಷಿ ಚಂದ್ರಿಕಾನೂ ಸರ್ಪ್ರೈಸ್
ಹಾಗ್ನೋಡಿದ್ರೆ, ರಾಧಾರಮಣ ಧಾರಾವಾಹಿ ನಟಿ ಶ್ವೇತಾ ಪ್ರಸಾದ್ ಮತ್ತು ಅದೇ ಧಾರಾವಾಹಿಯ ಖಳನಟಿ ಸುಜತಾ ಅವರ ಹೆಸರು ಸಂಭಾವ್ಯ ಪಟ್ಟಿಯಲ್ಲಿತ್ತು. ಅಚ್ಚರಿ ಅಂದ್ರೆ ಅಗ್ನಿಸಾಕ್ಷಿ ಧಾರಾವಾಹಿ ನಟಿ ಚಂದ್ರಿಕಾ (ಪ್ರಿಯಾಂಕ) ಎಂಟ್ರಿ ಕೊಡುವ ಮೂಲಕ ಸರ್ಪ್ರೈಸ್ ಕೊಟ್ಟರು.

ಡ್ಯಾನ್ಸರ್ ಕಿಶನ್
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಡ್ಯಾನ್ಸಿಂಗ್ ರಿಯಾಲಿಟಿ ಶೋ ಸ್ಪರ್ಧಿಯಾಗಿದ್ದ ಕಿಶನ್ ಅವರ ಬಗ್ಗೆಯೂ ಸುಳಿವು ಸಿಕ್ಕಿರಲಿಲ್ಲ. ಒಬ್ಬ ಡ್ಯಾನ್ಸರ್ ಇರ್ತಾರೆ ಎನ್ನಲಾಗುತ್ತಿತ್ತು. ಆದರೆ ಕಿಶನ್ ಅವರೇ ಇರ್ತಾರೆ ಎಂಬುದು ಪಕ್ಕಾ ಇರಲಿಲ್ಲ. ಬಿಗ್ ಬಾಸ್ ವೇದಿಕೆ ಮೇಲೆ ನೋಡಿದ ಮೇಲೆ 'ಅರೇ ಇವರಾ' ಎಂದು ಅಚ್ಚರಿಯಿಂದ ನೋಡುವಂತಾಯಿತು.


Click it and Unblock the Notifications











