For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್' ಗೆದ್ದವರಿಗೆ ಮಾತ್ರ ಅಲ್ಲ, ಸೋತವರಿಗೂ ಸಿಕ್ಕಿದೆ ಲಕ್ಷ ಲಕ್ಷ ಬಹುಮಾನ.!

  |
  Bigg Boss Kannada 07 :final 5 got reward for being finalists this season | BBK7 | Shineshetty | Kuri

  ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ 'ಬಿಗ್ ಬಾಸ್'ನ ಏಳನೇ ಆವೃತ್ತಿ ಪೂರ್ಣಗೊಂಡಿದೆ. 'ಬಿಗ್ ಬಾಸ್ ಕನ್ನಡ-7' ಕಾರ್ಯಕ್ರಮದಲ್ಲಿ ಕಿರುತೆರೆ ನಟ ಶೈನ್ ಶೆಟ್ಟಿ ವಿಜೇತರಾಗಿ ಹೊರಹೊಮ್ಮಿದ್ದಾರೆ.

  ಕನ್ನಡ ಚಿತ್ರರಂಗದ ಬಹು ಬೇಡಿಕೆಯ ಹಾಸ್ಯ ನಟ ಕುರಿ ಪ್ರತಾಪ್ 'ಬಿಗ್ ಬಾಸ್ ಕನ್ನಡ-7' ಕಾರ್ಯಕ್ರಮದಲ್ಲಿ ರನ್ನರ್ ಅಪ್ (ದ್ವಿತೀಯ ಸ್ಥಾನ) ಆಗಿದ್ದಾರೆ. 'ಬಿಗ್ ಬಾಸ್' ಶೋನಲ್ಲಿ ಗೆಲುವಿನ ನಗೆ ಬೀರಿದವರಿಗೆ ಅರ್ಧ ಕೋಟಿ ರೂಪಾಯಿ ಬಹುಮಾನವಾಗಿ ಸಿಗುವುದು ಸಾಮಾನ್ಯ.

  ಆದ್ರೆ, ಈ ಬಾರಿಯ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಗೆಲ್ಲದೇ ಇದ್ದರೂ, ಟಾಪ್ 5 ಹಂತ ತಲುಪಿದ ಫೈನಲಿಸ್ಟ್ ಗಳನ್ನ ಖಾಲಿ ಕೈಯಲ್ಲಿ ಮನೆಗೆ ಕಳುಹಿಸಿಲ್ಲ. ಲಕ್ಷ ಲಕ್ಷ ಹಣವನ್ನು ಫೈನಲಿಸ್ಟ್ ಗಳಿಗೆ ಬಹುಮಾನವಾಗಿ ನೀಡಲಾಗಿದೆ. ಮುಂದೆ ಓದಿರಿ...

  ಭೂಮಿ ಶೆಟ್ಟಿಗೆ ಸಿಕ್ಕ ಬಹುಮಾನ ಎಷ್ಟು.?

  ಭೂಮಿ ಶೆಟ್ಟಿಗೆ ಸಿಕ್ಕ ಬಹುಮಾನ ಎಷ್ಟು.?

  'ಬಿಗ್ ಬಾಸ್ ಕನ್ನಡ-7' ಕಾರ್ಯಕ್ರಮದಲ್ಲಿ ಟಾಪ್ 5 ಹಂತ ತಲುಪಿದ ಫೈನಲಿಸ್ಟ್ ಗಳ ಪೈಕಿ ಕಿರುತೆರೆ ನಟಿ ಭೂಮಿ ಶೆಟ್ಟಿ ಕೂಡ ಒಬ್ಬರು. ಟಾಪ್ 5 ಹಂತದಿಂದ ಮೊದಲಿಗರಾಗಿ ಹೊರಬಿದ್ದ ಭೂಮಿ ಶೆಟ್ಟಿಗೆ ಒಂದು ಲಕ್ಷ ರೂಪಾಯಿ ಬಹುಮಾನವಾಗಿ ಸಿಕ್ಕಿದೆ.

  'ಬಿಗ್ ಬಾಸ್'ನಲ್ಲಿ ಶೈನ್ ಆದ ಶೆಟ್ಟಿ ಕುರಿಯಾದ ಪ್ರತಾಪ್'ಬಿಗ್ ಬಾಸ್'ನಲ್ಲಿ ಶೈನ್ ಆದ ಶೆಟ್ಟಿ ಕುರಿಯಾದ ಪ್ರತಾಪ್

  ದೀಪಿಕಾ ದಾಸ್ ಗೆ ಆರು ಲಕ್ಷ ಬಹುಮಾನ.!

  ದೀಪಿಕಾ ದಾಸ್ ಗೆ ಆರು ಲಕ್ಷ ಬಹುಮಾನ.!

  'ಬಿಗ್ ಬಾಸ್ ಕನ್ನಡ-7' ಕಾರ್ಯಕ್ರಮದಲ್ಲಿ ನಾಲ್ಕನೇ ಸ್ಥಾನ ಪಡೆದ ದೀಪಿಕಾ ದಾಸ್ ಆರು ಲಕ್ಷ ರೂಪಾಯಿಯನ್ನು ಬಹುಮಾನವಾಗಿ ಪಡೆದು ಮನೆಗೆ ತೆರಳಿದ್ದಾರೆ. (ಟಾಸ್ಕ್ ಒಂದರಲ್ಲಿ ಡ್ಯಾನ್ಸ್ ಪರ್ಫಾಮೆನ್ಸ್ ಮಾಡಿ, ಅದರಲ್ಲಿ ಹೆಚ್ಚು ವೋಟ್ ಗಳಿಸಿದ್ದ ದೀಪಿಕಾ ದಾಸ್ ಗೆ ಐದು ಲಕ್ಷ ರೂಪಾಯಿ ನೀಡಲಾಗಿದೆ. ಇನ್ನೂ, ಫೈನಲಿಸ್ಟ್ ಆಗಿದ್ದ ಕಾರಣಕ್ಕೆ ದೀಪಿಕಾ ದಾಸ್ ಗೆ ಒಂದು ಲಕ್ಷ ರೂಪಾಯಿ ಕೊಡಲಾಗಿದೆ)

  ವಾಸುಕಿ ವೈಭವ್ ಗೆ ಒಂದು ಲಕ್ಷ.!

  ವಾಸುಕಿ ವೈಭವ್ ಗೆ ಒಂದು ಲಕ್ಷ.!

  'ಬಿಗ್ ಬಾಸ್ ಕನ್ನಡ-7' ಕಾರ್ಯಕ್ರಮದಲ್ಲಿ ಗಾಯಕ, ಸಂಗೀತ ನಿರ್ದೇಶಕ ವಾಸುಕಿ ವೈಭವ್ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಫೈನಲಿಸ್ಟ್ ಆಗಿದ್ದ ವಾಸುಕಿ ವೈಭವ್ ಗೆ ಒಂದು ಲಕ್ಷ ರೂಪಾಯಿಯನ್ನು ಬಹುಮಾನವಾಗಿ ನೀಡಲಾಗಿದೆ.

  ಕುರಿ ಪ್ರತಾಪ್ ಗೆ ಸಿಕ್ಕಿದೆ ಆರು ಲಕ್ಷ.!

  ಕುರಿ ಪ್ರತಾಪ್ ಗೆ ಸಿಕ್ಕಿದೆ ಆರು ಲಕ್ಷ.!

  'ಬಿಗ್ ಬಾಸ್ ಕನ್ನಡ-7' ಕಾರ್ಯಕ್ರಮದಲ್ಲಿ ಎರಡನೇ ಸ್ಥಾನ (ರನ್ನರ್ ಅಪ್) ಪಡೆದ ಕುರಿ ಪ್ರತಾಪ್ ಗೂ ಏನೂ ಲಾಸ್ ಆಗಿಲ್ಲ. ಯಾಕಂದ್ರೆ, ಬಹುಮಾನ ರೂಪದಲ್ಲಿ ಕುರಿ ಪ್ರತಾಪ್ ಗೆ ಆರು ಲಕ್ಷ ರೂಪಾಯಿ ನೀಡಲಾಗಿದೆ.

  ಶೈನ್ ಶೆಟ್ಟಿ ಗೆ 61 ಲಕ್ಷ ಮತ್ತು ಕಾರು.!

  ಶೈನ್ ಶೆಟ್ಟಿ ಗೆ 61 ಲಕ್ಷ ಮತ್ತು ಕಾರು.!

  'ಬಿಗ್ ಬಾಸ್ ಕನ್ನಡ-7' ಕಾರ್ಯಕ್ರಮದಲ್ಲಿ ವಿಜೇತರಾದ ಶೈನ್ ಶೆಟ್ಟಿಗೆ 'ಬಿಗ್ ಬಾಸ್' ಕಡೆಯಿಂದ ಐವತ್ತು ಲಕ್ಷ ರೂಪಾಯಿ ಹಣ ಮತ್ತು ಟ್ರೋಫಿ ಸಿಕ್ಕಿದೆ. ವಿವಿಧ ಪ್ರಾಯೋಜಕರಿಂದ ಹನ್ನೊಂದು ಲಕ್ಷ ರೂಪಾಯಿ ಹಣ ಮತ್ತು ಒಂದು ಕಾರಿಗೂ ಶೈನ್ ಶೆಟ್ಟಿ ಒಡೆಯನಾಗಿದ್ದಾರೆ.

  English summary
  Bigg Boss Kannada 7: Top 5 Finalists gets 1 Lakh rupees as cash prize.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X