ರವಿ ಬೆಳಗೆರೆ ಕಥೆ ಕೇಳಿ ಉಘೇ ಉಘೇ ಎನ್ನುತ್ತಿರುವ ಟ್ವೀಟಿಗರು

'ಬಿಗ್ ಬಾಸ್ ಕನ್ನಡ-7' ಕಾರ್ಯಕ್ರಮ ಶುರುವಾಗಿ ಐದು ದಿನಗಳು ಕಳೆದಿವೆ ಅಷ್ಟೇ. ಅಷ್ಟು ಬೇಗ ಈ ಆವೃತ್ತಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಅದಕ್ಕೆ ಕಾರಣ ಸ್ಪರ್ಧಿಗಳು. ಅದರಲ್ಲೂ ಮುಖ್ಯವಾಗಿ ಸ್ಪೆಷಲ್ ಗೆಸ್ಟ್ ರವಿ ಬೆಳಗೆರೆ ನೋಡುಗರ ಮನಸ್ಸು ಗೆದ್ದಿದ್ದಾರೆ.

Recommended Video

Bigg Boss Kannada 7 : Don't miss tomorrow's episode here is why

ಹೌದು, 'ಬಿಗ್ ಬಾಸ್' ಮನೆಯಲ್ಲಿ ರವಿ ಬೆಳಗೆರೆ ಆಡುತ್ತಿರುವ ಮಾತುಗಳು, ನಡೆದುಕೊಳ್ಳುತ್ತಿರುವ ರೀತಿ ವೀಕ್ಷಕರಿಗೆ ಇಷ್ಟವಾಗಿದೆ. ನಿನ್ನೆ ಪ್ರಸಾರವಾದ ಸಂಚಿಕೆಯಲ್ಲಂತೂ ರವಿ ಬೆಳಗೆರೆ ತಮ್ಮ ತಾಯಿ ಹಾಗೂ ತಮ್ಮ ಜೀವನದ ಬಗ್ಗೆ ಮಾತನಾಡಿದ್ದನ್ನು ಕೇಳಿ ನೆಟ್ಟಿಗರು ಉಘೇ ಉಘೇ ಎನ್ನುತ್ತಿದ್ದಾರೆ.

ರವಿ ಬೆಳಗೆರೆಯವರ ಈ ಮುಖವನ್ನು ನೋಡಿ ಟ್ವೀಟಿಗರು ಜೈಕಾರ ಹಾಕುತ್ತಿದ್ದಾರೆ. ಬೇಕಾದ್ರೆ ನೀವೇ ಈ ಕೆಳಗಿನ ಟ್ವೀಟ್ ಗಳತ್ತ ಕಣ್ಣಾಡಿಸಿ...

ಕಿರಿಕಿರಿ ಅಲ್ಲ.!

ಕಿರಿಕಿರಿ ಅಲ್ಲ.!

''ರವಿ ಬೆಳಗೆರೆಯಿಂದ ಕಿರಿಕಿರಿ ಆಗುತ್ತೆ ಅಂತ ಭಾವಿಸಿದ್ದೆ. ಆದ್ರೆ, ಹಾಗಾಗಲಿಲ್ಲ. ಅವರು ಬಹಿರಂಗ ಪಡಿಸಿರುವ ಕಥೆಗಳು 'ಬಿಗ್ ಬಾಸ್' ಕಾರ್ಯಕ್ರಮವನ್ನು ನೋಡುವಂತೆ ಮಾಡುತ್ತಿದೆ'' ಎಂದು ಪ್ರಸಾದ್ ಎಂಬುವರು ಟ್ವೀಟ್ ಮಾಡಿದ್ದಾರೆ.

ಸ್ಫೂರ್ತಿ ತುಂಬುತ್ತಿದೆ

ಸ್ಫೂರ್ತಿ ತುಂಬುತ್ತಿದೆ

''ಭೀಮಾತೀರದ ಹಂತಕರು' ಪುಸ್ತಕ ಓದಿರುವ ನನಗೆ ರವಿ ಬೆಳಗೆರೆ ಬಗ್ಗೆ ಚಿಕ್ಕವಯಸ್ಸಿನಿಂದ ತಿಳಿದುಕೊಂಡಿದ್ದೇನೆ. ಅವರು ಉತ್ತಮ ಬರಹಗಾರರು. ಅವರ ಜೀವನಗಾಥೆ ಸ್ಫೂರ್ತಿ ತುಂಬುವಂಥದ್ದು'' ಎಂದು ಟ್ವೀಟಿಸಿದ್ದಾರೆ ಗಿರೀಶ್ ಪಾಟಿಲ್.

ಕಣ್ಣೀರು ತರಿಸಿತು

ಕಣ್ಣೀರು ತರಿಸಿತು

'ಬಿಗ್ ಬಾಸ್' ಕಾರ್ಯಕ್ರಮ ನೋಡಿದ್ಮೇಲೆ ರವಿ ಬೆಳಗೆರೆ ಬಗ್ಗೆ ಜನರಲ್ಲಿ ಇದ್ದ ಇಮೇಜ್ ಬದಲಾಗಿದೆ ಎಂಬುದಕ್ಕೆ ಈ ಟ್ವೀಟ್ ಸಾಕ್ಷಿ.

ನಿಜವಾದ ಮುಖ

ನಿಜವಾದ ಮುಖ

ಇಲ್ಲಿಯವರೆಗೂ ರವಿ ಬೆಳಗೆರೆಯವರ ಒಂದು ಮುಖ ಮಾತ್ರ ಗೊತ್ತಿದ್ದ ಜನರಿಗೆ ಇದೀಗ ಮತ್ತೊಂದು ಮುಖದ ಪರಿಚಯವಾಗಿದೆ. ರವಿ ಬೆಳಗೆರೆಯವರ ಕಥೆ ಕೇಳಿ ವೀಕ್ಷಕರಿಗೆ ಕಣ್ಣು ತುಂಬಿ ಬಂದಿದೆ.

ಒಂದೇ ವಾರಕ್ಕೆ ಕಳುಹಿಸಬೇಡಿ

ಒಂದೇ ವಾರಕ್ಕೆ ಕಳುಹಿಸಬೇಡಿ

'ಬಿಗ್ ಬಾಸ್' ಮನೆಯಲ್ಲಿ ರವಿ ಬೆಳಗೆರೆಯವರನ್ನ ನೋಡಿ ಕೆಲ ವೀಕ್ಷಕರು ಅಭಿಮಾನಿಗಳಾಗಿದ್ದಾರೆ. ಸದ್ಯಕ್ಕೆ ಗೆಸ್ಟ್ ಆಗಿರುವ ರವಿ ಬೆಳಗೆರೆ ಅವರನ್ನ ಕೊನೆಯವರೆಗೂ ಮನೆಯಲ್ಲಿ ಇಟ್ಟುಕೊಳ್ಳಿ ಅಂತ ವೀಕ್ಷಕರು ಕೇಳಿಕೊಳ್ಳುತ್ತಿದ್ದಾರೆ.

ನೀವೇನಂತೀರಿ.?

ನೀವೇನಂತೀರಿ.?

'ಬಿಗ್ ಬಾಸ್ ಕನ್ನಡ-7' ಕಾರ್ಯಕ್ರಮದ ಸಂಚಿಕೆಗಳು ಹೇಗೆ ಮೂಡಿಬರುತ್ತಿವೆ. ಈ ಆವೃತ್ತಿ ನಿಮಗೆ ಖುಷಿ ಕೊಟ್ಟಿದ್ಯಾ.? ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ.. ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.

More from Filmibeat

English summary
Bigg Boss Kannada 7: Twitterati praises Ravi Belagere.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X