ಯಾರು ಏನೇ ಅಂದ್ರೂ ಜೈಜಗದೀಶ್ ಮಾಡಿದ್ದು ತಪ್ಪು ಅಂತಿದ್ದಾರೆ ವೀಕ್ಷಕರು.!

Recommended Video

Bigg Boss Kannada 7 : Jai Jagadish made a big mistake in Bigg Boss house.

'ಬಿಗ್ ಬಾಸ್' ಮನೆಯಲ್ಲಿ ಸದ್ಯ ಹಾಟ್ ಟಾಪಿಕ್ ಆಗಿರೋದು ಕನ್ನಡ ಚಿತ್ರರಂಗದ ಹಿರಿಯ ನಟ ಜೈಜಗದೀಶ್ ಮತ್ತು ಕಿಶನ್. 'ಬಿಗ್ ಬಾಸ್' ಮನೆಯ ಕಿಚನ್ ಟೀಮ್ ಸೇರಿರುವ ಜೈಜಗದೀಶ್ ಎಲ್ಲರಿಗೂ ಬಾಯಿಗೆ ಬಂದ ಹಾಗೆ ಬೈಯ್ಯುತ್ತಾರೆ, ಕೆಟ್ಟ ಪದ ಬಳಕೆ ಮಾಡುತ್ತಾರೆ ಅಂತ ಕಿಶನ್ ಬೆಟ್ಟು ಮಾಡಿ ತೋರಿಸಿದ್ದರು.

ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ವಾಕ್ಸಮರ ನಡೆದಿತ್ತು. ಜೈಜಗದೀಶ್ ಗೆ ಕಿಶನ್ ಕ್ಷಮೆಯನ್ನೂ ಕೇಳಿದ್ದರು. ಅಲ್ಲಿಗೆ ಈ ಮ್ಯಾಟರ್ ಗೆ 'ಬಿಗ್ ಬಾಸ್' ಮನೆಯೊಳಗೆ ಫುಲ್ ಸ್ಟಾಪ್ ಬಿದ್ದಿದ್ದರೂ ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಜೈಜಗದೀಶ್ ಮತ್ತು ಕಿಶನ್ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದೆ.

ಜೈಜಗದೀಶ್ ಪರವಾಗಿ 'ಬಿಗ್ ಬಾಸ್' ಮನೆಯಲ್ಲಿ ಸುಜಾತ, ಶೈನ್ ಶೆಟ್ಟಿ, ಹರೀಶ್ ರಾಜ್ ಬ್ಯಾಟಿಂಗ್ ಮಾಡಿರಬಹುದು. ಆದರೆ ವೀಕ್ಷಕರ ಕಣ್ಣಲ್ಲಿ ಮಾತ್ರ ಕಿಶನ್ ಹೀರೋ ಆಗಿದ್ದಾರೆ. ಸಿಡುಕು ಸ್ವಭಾವದ ಜೈಜಗದೀಶ್ ಮಾತುಗಳು ವೀಕ್ಷಕರಿಗೆ ರುಚಿಸಿಲ್ಲ. ಅದಕ್ಕೆ ಸಾಕ್ಷಿ ಕಲರ್ಸ್ ಕನ್ನಡ ವಾಹಿನಿ ಅಫೀಶಿಯಲ್ ಫೇಸ್ ಬುಕ್ ಪುಟದಲ್ಲಿಯೇ ವ್ಯಕ್ತವಾಗುತ್ತಿರುವ ಕಾಮೆಂಟ್ಸ್. ಮುಂದೆ ಓದಿರಿ...

ರವಿ ಬೆಳಗೆರೆ ಎಷ್ಟೋ ವಾಸಿ.!

ರವಿ ಬೆಳಗೆರೆ ಎಷ್ಟೋ ವಾಸಿ.!

''ಜೈಜಗದೀಶ್ ಅವರಿಗಿಂತ ರವಿ ಬೆಳಗೆರೆ ಎಷ್ಟೋ ವಾಸಿ. ಜೈಜಗದೀಶ್ ಸೀನಿಯರ್ ಆರ್ಟಿಸ್ಟ್ ಇರಬಹುದು. ಆದರೆ ತುಂಬಾ ಸಿಡುಕ. ಎಲ್ಲರೊಂದಿಗೆ ತಮಾಷೆಯಾಗಿ ಇರಲ್ಲ'' ಎಂದು ವೀಕ್ಷಕರೊಬ್ಬರು ಫೇಸ್ ಬುಕ್ ನಲ್ಲಿ ಕಾಮೆಂಟ್ ಮಾಡಿದ್ದಾರೆ.

ತಾಳ್ಮೆ ಎನ್ನುವುದೇ ಇಲ್ಲ.!

ತಾಳ್ಮೆ ಎನ್ನುವುದೇ ಇಲ್ಲ.!

''ಜೈಜಗದೀಶ್ ಗೆ ಮುಂಗೋಪ ಜಾಸ್ತಿ. ತಾಳ್ಮೆ ಎನ್ನುವುದೇ ಇಲ್ಲ. ವಯಸ್ಸಿನಲ್ಲಿ ದೊಡ್ಡವರು ಇರಬಹುದು. ಹಾಗಂತ ಏನು ಬೇಕಾದರೂ ಹೇಳುವುದು ಸರಿಯಲ್ಲ'' ಎನ್ನುತ್ತಿದ್ದಾರೆ ವೀಕ್ಷಕರು.

ವಿಲನ್ ತರಹ ಮಾತಾಡುತ್ತಾರೆ.!

ವಿಲನ್ ತರಹ ಮಾತಾಡುತ್ತಾರೆ.!

''ಜೈಜಗದೀಶ್ ವಿಲನ್ ತರಹ ಮಾತಾಡುತ್ತಾರೆ. ಇನ್ನೊಬ್ಬರಿಗೆ ಹೇಳಿ ಕೊಡುವ ವಯಸ್ಸಿನಲ್ಲಿ ತಾವೇ ಸರಿಯಾಗಿ ಮಾತಾಡಲ್ಲ. ದೊಡ್ಡವರು ಚಿಕ್ಕವರು ಬರಲ್ಲ. ಕಿಶನ್ ಕ್ಷಮೆ ಕೇಳಿದ್ದಾರೆ. ರಿಯಲಿ ಗ್ರೇಟ್'' ಅಂತ ಕಿಶನ್ ಗೆ ಜೈಕಾರ ಹಾಕುತ್ತಿದ್ದಾರೆ ವೀಕ್ಷಕರು.

ಕ್ಷಮೆ ಕೇಳುವ ಅಗತ್ಯ ಇರಲಿಲ್ಲ.!

ಕ್ಷಮೆ ಕೇಳುವ ಅಗತ್ಯ ಇರಲಿಲ್ಲ.!

''ಕಿಶನ್ ಕ್ಷಮೆ ಕೇಳುವ ಅಗತ್ಯ ಇರಲಿಲ್ಲ. ಜೈಜಗದೀಶ್ ಅವರಿಗೆ ಕೆಟ್ಟ ಪದ ಬಳಕೆ ಮಾಡಬೇಡಿ ಅಂತ ಹೇಳಿದರು ಅಷ್ಟೇ. ಇದರಲ್ಲಿ ಯಾವುದೇ ತಪ್ಪಿಲ್ಲ'' ಅಂತ ವೀಕ್ಷಕರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ. ಅಂದ್ಹಾಗೆ ಇದೇ ಟಾಪಿಕ್ ಬಗ್ಗೆ ನೀವು ಏನಂತೀರಿ... ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ, ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.

More from Filmibeat

English summary
Bigg Boss Kannada 7: Viewers are annoyed with Jai Jagadeesh for using foul language.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X