ಬಿಗ್ ಬಾಸ್: ಮೊದಲ ದಿನವೇ ರವಿ ಬೆಳಗೆರೆಗೆ ಶಾಕ್.!

Recommended Video

Ravi Belagere share his childhood memory | Bigg Boss Kannada 7

'ಬಿಗ್ ಬಾಸ್' ಮನೆ ಅಂದ್ಮೇಲೆ ಅಲ್ಲಿ ನಾಮಿನೇಷನ್ ಪ್ರಕ್ರಿಯೆ ಇದ್ದದ್ದೇ. ಪ್ರತಿ ಸ್ಪರ್ಧಿಯೂ ತಾನು 'ಬಿಗ್ ಬಾಸ್' ಮನೆಯಿಂದ ಹೊರ ಹಾಕಲು ಇಚ್ಛಿಸುವ ಇಬ್ಬರು ಇತರೆ ಸ್ಪರ್ಧಿಗಳನ್ನು ಪ್ರತಿ ವಾರವೂ ನಾಮಿನೇಟ್ ಮಾಡಬೇಕು. ಹಾಗೆ ನಾಮಿನೇಟ್ ಆದವರು 'ಬಿಗ್ ಬಾಸ್' ಮನೆಯಲ್ಲಿ ಉಳಿಯಬೇಕು ಅಂದ್ರೆ ವೀಕ್ಷಕರ ಬೆಂಬಲ ಅತ್ಯಗತ್ಯ.

'ಬಿಗ್ ಬಾಸ್' ಮನೆಯ ಈ ರೂಲ್ ಅರಿತಿರುವ ಪತ್ರಕರ್ತ ರವಿ ಬೆಳಗೆರೆಗೆ ಮೊದಲನೇ ವಾರವೇ ಶಾಕ್ ಆಗಿದೆ. ಬಹುಶಃ ಮೊಟ್ಟ ಮೊದಲ ವಾರವೇ ನಾಮಿನೇಟ್ ಆಗುವ ಬಗ್ಗೆ ರವಿ ಬೆಳಗೆರೆ ಊಹಿಸಿರಲಿಲ್ಲವೇನೋ.! ಹೀಗಾಗಿ, ನಾಮಿನೇಷನ್ ಲಿಸ್ಟ್ ನಲ್ಲಿ ರವಿ ಬೆಳಗೆರೆ ಹೆಸರು 'ಬಿಗ್ ಬಾಸ್' ಬಾಯಿಂದ ಬರುತ್ತಿದ್ದಂತೆಯೇ ಅವರು ಬೆಚ್ಚಿ ಬಿದ್ದರು.

ಹಾಗಾದ್ರೆ, ಮೊದಲ ವಾರ ಯಾರ್ಯಾರು ನಾಮಿನೇಟ್ ಆಗಿದ್ದಾರೆ.? ಯಾರ್ಯಾರು ಯಾರ್ಯಾರನ್ನು ನಾಮಿನೇಟ್ ಮಾಡಿದ್ದಾರೆ ಅಂತೀರಾ.? ಎಲ್ಲದರ ಸಂಪೂರ್ಣ ವಿವರ ಇಲ್ಲಿದೆ, ಓದಿರಿ...

(ಚಿತ್ರ ಕೃಪೆ: ಕಲರ್ಸ್ ಕನ್ನಡ/ವೂಟ್)

ರವಿ ಬೆಳಗೆರೆ ವಿರುದ್ಧ ಐದು ವೋಟ್ಸ್

ರವಿ ಬೆಳಗೆರೆ ವಿರುದ್ಧ ಐದು ವೋಟ್ಸ್

'ಅಗ್ನಿಸಾಕ್ಷಿ' ಪ್ರಿಯಾಂಕಾ, ಚಂದನ್ ಆಚಾರ್, ರಾಜು ತಾಳಿಕೋಟೆ, ಕಿಶನ್ ಮತ್ತು ಗುರುಲಿಂಗ ಸ್ವಾಮೀಜಿ... ರವಿ ಬೆಳಗೆರೆ ರನ್ನ ನಾಮಿನೇಟ್ ಮಾಡಿದರು. ಅದಕ್ಕಾಗಿ ಬಹುತೇಕ ಎಲ್ಲರೂ ಕೊಟ್ಟ ಕಾರಣ ಒಂದೇ.. ಅದು ರವಿ ಬೆಳಗೆರೆ ರ ಅನಾರೋಗ್ಯ.

ಟಾರ್ಗೆಟ್ ಆದ ಚೈತ್ರ ಕೊಟ್ಟೂರು

ಟಾರ್ಗೆಟ್ ಆದ ಚೈತ್ರ ಕೊಟ್ಟೂರು

ಹೆಚ್ಚು ಮಿಂಗಲ್ ಆಗುತ್ತಿಲ್ಲ ಎಂಬ ಕಾರಣಕ್ಕೆ ಹರೀಶ್ ರಾಜ್, ಜೈ ಜಗದೀಶ್, ದೀಪಿಕಾ ದಾಸ್, ವಾಸುಕಿ ವೈಭವ್, ಸುಜಾತಾ ಮತ್ತು ಕುರಿ ಪ್ರತಾಪ್.. ಚೈತ್ರ ಕೊಟ್ಟೂರು ರನ್ನ ಟಾರ್ಗೆಟ್ ಮಾಡಿದರು.

ಗುರುಲಿಂಗ ಸ್ವಾಮೀಜಿ

ಗುರುಲಿಂಗ ಸ್ವಾಮೀಜಿ

'ಔಟ್ ಆಫ್ ದಿ ಬಾಕ್ಸ್', 'ಮಡಿ'.. ಹೀಗೆ ನಾನಾ ಕಾರಣಗಳನ್ನು ನೀಡಿ 'ಬಿಗ್ ಬಾಸ್' ಮನೆಯ ಸದಸ್ಯರು ಗುರುಲಿಂಗ ಸ್ವಾಮೀಜಿ ರನ್ನ ನಾಮಿನೇಟ್ ಮಾಡಿದ್ದಾರೆ.

ಡೇಂಜರ್ ಝೋನ್ ನಲ್ಲಿ ರಾಜು ತಾಳಿಕೋಟೆ

ಡೇಂಜರ್ ಝೋನ್ ನಲ್ಲಿ ರಾಜು ತಾಳಿಕೋಟೆ

ರಾಜು ತಾಳಿಕೋಟೆ ವಿರುದ್ಧ ದುನಿಯಾ ರಶ್ಮಿ, ರವಿ ಬೆಳಗೆರೆ, ಚೈತ್ರ ವಾಸುದೇವನ್ ವೋಟ್ ಹಾಕಿದರು. ಪರಿಣಾಮ ರಾಜು ತಾಳಿಕೋಟೆ ಈ ವಾರ ಡೇಂಜರ್ ಝೋನ್ ನಲ್ಲಿದ್ದಾರೆ.

ಚೈತ್ರ ಮಿಸ್ ಆಗಲಿಲ್ಲ.!

ಚೈತ್ರ ಮಿಸ್ ಆಗಲಿಲ್ಲ.!

ಒಂದ್ಕಡೆ ಚೈತ್ರ ಕೊಟ್ಟೂರು ನಾಮಿನೇಟ್ ಆಗಿದ್ದರೆ, ಇನ್ನೊಂದು ಕಡೆ ಚೈತ್ರ ವಾಸುದೇವನ್ ಕೂಡ ಎಲಿಮಿನೇಷನ್ ಟೆನ್ಷನ್ ಎದುರಿಸುವ ಹಾಗಾಗಿದೆ.

'ಕುರಿ' ಆದ ಪ್ರತಾಪ್

'ಕುರಿ' ಆದ ಪ್ರತಾಪ್

ಕ್ಯಾಪ್ಷನ್ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಕುರಿ ಪ್ರತಾಪ್ ಗೆ ಅದೃಷ್ಟ ಕೈಕೊಟ್ಟ ಕಾರಣ ನೇರವಾಗಿ ನಾಮಿನೇಟ್ ಆಗ್ಬಿಟ್ರು.

ಜಸ್ಟ್ ಮಿಸ್ ಆದವರು

ಜಸ್ಟ್ ಮಿಸ್ ಆದವರು

ನಾಮಿನೇಷನ್ ಪ್ರಕ್ರಿಯೆಯಲ್ಲಿ ಜೈಜಗದೀಶ್, ಶೈನ್ ಶೆಟ್ಟಿ, ಚಂದನಾ, ಚಂದನ್ ಆಚಾರ್, ದೀಪಿಕಾ ದಾಸ್, ಸುಜಾತಾ, ಹರೀಶ್ ರಾಜ್ ಹೆಸರು ಕೂಡ ಕೇಳಿಬಂತು. ಆದ್ರೆ, ಇವರಿಗೆಲ್ಲ ಜಸ್ಟ್ ಒಂದೊಂದು ವೋಟ್ ಬಿದ್ರಿದ್ರಿಂದ ಎಲಿಮಿನೇಷನ್ ತಲೆಬಿಸಿಯಿಂದ ತಪ್ಪಿಸಿಕೊಂಡಿದ್ದಾರೆ.

ನಿಮ್ಮ ಮತ ಯಾರಿಗೆ.?

ನಿಮ್ಮ ಮತ ಯಾರಿಗೆ.?

ಚೈತ್ರ ಕೊಟ್ಟೂರು, ಚೈತ್ರ ವಾಸುದೇವನ್, ಕುರಿ ಪ್ರತಾಪ್, ರವಿ ಬೆಳಗೆರೆ, ರಾಜು ತಾಳಿಕೋಟೆ, ಗುರುಲಿಂಗ ಸ್ವಾಮೀಜಿ... ಇವರುಗಳ ಪೈಕಿ ನಿಮ್ಮ ಮತ ಯಾರಿಗೆ.? ಯಾರು ಔಟ್ ಆಗಬೇಕು ಅಂತ ನೀವು ಬಯಸುತ್ತೀರಿ.? ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ.. ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.

More from Filmibeat

English summary
Bigg Boss Kannada 7 - Ravi Belagere, Kuri Pratap, Chaitra Kottur, Chaitra Vasudevan, Gurulinga Swami and Raju Talikote gets nominated in first week.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X