ಕಣ್ಣೀರಿಡುತ್ತ 'ಬಿಗ್ ಬಾಸ್' ಮನೆಯಿಂದ ಹೊರಬಂದ ರವಿ ಬೆಳಗೆರೆ
Recommended Video
ರವಿ ಬೆಳಗೆರೆ ಅಂದ್ರೆ ವಿವಾದಾತ್ಮಕ ಪತ್ರಕರ್ತ ಎಂಬ ಭಾವ ಹಲವರಲ್ಲಿದೆ. ಸುಪಾರಿ ಕೇಸ್ ನಲ್ಲಿ ತಗಲಾಕಿಕೊಂಡ ಮೇಲಂತೂ ರವಿ ಬೆಳಗೆರೆ ಬಗ್ಗೆ ಮಾಧ್ಯಮಗಳಲ್ಲಿ ತರಹೇವಾರಿ ಸುದ್ದಿಗಳು ಪ್ರಕಟವಾದವು. ವೈವಾಹಿಕ ಜೀವನದ ವಿಚಾರವಾಗಿಯೂ ರವಿ ಬೆಳಗೆರೆ ಸುದ್ದಿಯಾದರು.
ಈ ಎಲ್ಲದರ ನಡುವೆ ರವಿ ಬೆಳಗೆರೆಗೆ ಒಳ್ಳೆಯ ಇಮೇಜ್ ತಂದುಕೊಟ್ಟಿದ್ದು 'ಬಿಗ್ ಬಾಸ್' ಕಾರ್ಯಕ್ರಮ. ರವಿ ಬೆಳಗೆರೆ ಭಾವುಕ ಜೀವಿ ಅಂತ ತೋರಿಸಿಕೊಟ್ಟಿದ್ದು ಇದೇ 'ಬಿಗ್ ಬಾಸ್' ಶೋ.
ಒಂದು ವಾರ ಕಾಲ ಅತಿಥಿಯಾಗಿ 'ಬಿಗ್ ಬಾಸ್' ಮನೆಯಲ್ಲಿದ್ದ ರವಿ ಬೆಳಗೆರೆ ಯಾವುದೇ ವಿವಾದ ಮಾಡಿಕೊಳ್ಳದೆ, ಕ್ಲೀನ್ ಇಮೇಜ್ ನೊಂದಿಗೆ ಹೊರಬಂದಿದ್ದಾರೆ. ಉಳಿದ ಸ್ಪರ್ಧಿಗಳು ಕಣ್ಣೀರಿಡುತ್ತಾ ರವಿ ಬೆಳಗೆರೆಯವರನ್ನ ಕಳುಹಿಸಿಕೊಟ್ಟಿದ್ದಾರೆ. ಮುಂದೆ ಓದಿರಿ...

ಚೆನ್ನಾಗಿ ನೋಡಿಕೊಂಡರು
''ನನ್ನಂತಹ ಅತ್ಯಂತ ವಿವಾದಾತ್ಮಕ ವ್ಯಕ್ತಿಯನ್ನು ಆಯ್ಕೆ ಮಾಡಿ ಇಲ್ಲಿಗೆ ತಂದು ಬಿಟ್ಟರು. ನನ್ನನ್ನು ಓರ್ವ ತಂದೆಯಾಗಿ, ಅಣ್ಣನಾಗಿ ಎಲ್ಲರೂ ಚೆನ್ನಾಗಿ ನೋಡಿಕೊಂಡಿದ್ದಾರೆ. ಎಲ್ಲರಿಗೂ ನನ್ನ ಕೃತಜ್ಞತೆಗಳು. ನಾನು ಒಬ್ಬ ಪತ್ರಕರ್ತನಾಗಿ ಹೀಗೆ ಬಾಗಿಲು ಹಾಕಿಕೊಂಡು ಇರಲು ಸಾಧ್ಯವಿಲ್ಲ. ಇಲ್ಲದಿದ್ದರೆ ಇನ್ನೊಂದಷ್ಟು ವಾರ ಇಲ್ಲಿ ಇರುತ್ತಿದೆ'' ಎಂದು ಔಟ್ ಆಗುವ ಮುನ್ನ ರವಿ ಬೆಳಗೆರೆ ಹೇಳಿದರು.

ಕಣ್ಣೀರು ಹಾಕಿರುವುದು ಇಲ್ಲೇ.!
''ನನ್ನ ಎರಡನೇ ಮಗಳ ಮದುವೆ ಸಂದರ್ಭದಲ್ಲಿ ಬಿಟ್ಟರೆ ನಾನು ಕಣ್ಣೀರು ಹಾಕುತ್ತಿರುವುದು ಇಲ್ಲೇ. ಸ್ಪರ್ಧೆ ಮುಗಿದ ಮೇಲೆ ಎಲ್ಲರೂ ನನ್ನ ಮನೆಗೆ ಬನ್ನಿ. ಇಷ್ಟು ಪ್ರೀತಿ ಎಲ್ಲರಿಗೂ ಸಿಗುವುದಿಲ್ಲ. ನನಗೆ ಸಿಕ್ಕಿದೆ. ನಾನು ಧನ್ಯ'' ಎಂದಿದ್ದಾರೆ ರವಿ ಬೆಳಗೆರೆ

ಪವರ್ ಫುಲ್ ಮ್ಯಾನ್
''ನೀವೆಲ್ಲ ಸೋತಾಗ, ಈ ಬದುಕು ಸಾಕು ಎಂದಾಗ ನನಗೆ ಒಂದು ಫೋನ್ ಮಾಡಿ. ಯಾಕಂದ್ರೆ ನಾನು ತುಂಬಾ ಪವರ್ ಫುಲ್ ಮ್ಯಾನ್. ಯಾರೊಂದಿಗೆ ಬೇಕಾದರೂ ನಾನು ಜಗಳ ಮಾಡಬಲ್ಲೆ'' ಅಂತ ಎಲ್ಲ ಸ್ಪರ್ಧಿಗಳಿಗೂ ರವಿ ಬೆಳಗೆರೆ ಹೇಳಿದ್ದಾರೆ.

ಜೈಜಗದೀಶ್ ಜೀವನಚರಿತ್ರೆ
''ಜೈಜಗದೀಶ್ ರವರ ಹುಟ್ಟುಹಬ್ಬದಂದು ಖಂಡಿತ ಅವರ ಜೀವನಚರಿತ್ರೆ ಬಗ್ಗೆ ಒಂದು ಪುಸ್ತಕವನ್ನು ಹೊರತರುವೆ'' ಅಂತ ಹೇಳಿ 'ಬಿಗ್ ಬಾಸ್' ಮನೆಯಿಂದ ರವಿ ಬೆಳಗೆರೆ ಆಚೆ ಬಂದಿದ್ದಾರೆ. ಇಷ್ಟು ದಿನ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಟಿ.ಆರ್.ಪಿ ಕಾ ಮಾಮ್ಲಾ ಆಗಿದ್ದವರು ರವಿ ಬೆಳಗೆರೆ. ಇದೀಗ ರವಿ ಬೆಳಗೆರೆ ಇಲ್ಲದ 'ಬಿಗ್ ಬಾಸ್' ಮನೆಯಲ್ಲಿ ಏನೇನು ಆಗಬಹುದು ಎಂಬುದೇ ಸದ್ಯದ ಕುತೂಹಲ.


Click it and Unblock the Notifications











