ಚಿಕಿತ್ಸೆ ಬಳಿಕ 'ಬಿಗ್ ಬಾಸ್' ಮನೆಗೆ ವಾಪಸ್ ಬಂದ ಕಿಶನ್
Recommended Video
'ಬಿಗ್ ಬಾಸ್ ಕನ್ನಡ-7' ಕಾರ್ಯಕ್ರಮಕ್ಕೆ ಬಂದ ಮೇಲೆ ಡ್ಯಾನ್ಸರ್ ಕಿಶನ್ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿತ್ತು. 'ಬಿಗ್ ಬಾಸ್' ಮನೆಯೊಳಗೆ ಕಿಶನ್ ಗೆ ಜಾಂಡೀಸ್ ಲಕ್ಷಣಗಳು ಕಾಣಿಸಿಕೊಂಡಿತ್ತು. ಹೀಗಾಗಿ ಜಾಂಡೀಸ್ ತಪಾಸಣೆಗಾಗಿ ನಾಲ್ಕನೇ ದಿನದ ರಾತ್ರಿ ಕಿಶನ್ ರನ್ನ 'ಬಿಗ್ ಬಾಸ್' ಆಸ್ಪತ್ರೆಗೆ ಕಳುಹಿಸಿದ್ದರು.
ಮೂರು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಕಿಶನ್ 'ಬಿಗ್ ಬಾಸ್' ಮನೆಗೆ ವಾಪಸ್ ಬಂದಿದ್ದಾರೆ. ಅದೇ ಹುರುಪು, ಅದೇ ಲವಲವಿಕೆಯೊಂದಿಗೆ ಕಿಶನ್ 'ದೊಡ್ಮನೆ' ಆಟಕ್ಕೆ ಮರಳಿದ್ದಾರೆ. ತಮಗೆ ಚಿಕಿತ್ಸೆ ಕೊಡಿಸಿದ 'ಬಿಗ್ ಬಾಸ್'ಗೆ ಕಿಶನ್ ಧನ್ಯವಾದ ತಿಳಿಸಿದ್ದಾರೆ.

ಸದ್ಯ ಆರೋಗ್ಯದಲ್ಲಿ ಕಿಶನ್ ಕಂಪ್ಲೀಟ್ ಫಿಟ್ ಅಂಡ್ ಫೈನ್ ಆಗಿರುವುದರಿಂದ 'ಬಿಗ್ ಬಾಸ್' ಮನೆಯಲ್ಲಿ ಕಿಶನ್ ಸ್ಪರ್ಧಿಯಾಗಿ ಮುಂದುವರೆಯಲಿದ್ದಾರೆ. 'ಬಿಗ್ ಬಾಸ್' ಕೊಡುವ ಎಲ್ಲಾ ಚಟುವಟಿಕೆಗಳಲ್ಲೂ ಕಿಶನ್ ಭಾಗವಹಿಸಲಿದ್ದಾರೆ.
ಮರಳಿ ಬರುತ್ತಿದ್ದಂತೆ ಕೊಂಚ ರೆಬೆಲ್ ಆಗಿದ್ದ ಕಿಶನ್, ಜೈಜಗದೀಶ್ ಜೊತೆಗೆ ವಾಕ್ಸಮರಕ್ಕಿಳಿದರು. ಕೆಲ ಸ್ಪರ್ಧಿಗಳಿಗೆ ಜೈಜಗದೀಶ್ ಬಾಯಿಗೆ ಬಂದ ಹಾಗೆ ಬೈಯುತ್ತಾರೆ ಅಂತ ಕಿಶನ್ ಆರೋಪಿಸಿದರು. ಇದೇ ವಿಚಾರವಾಗಿ ಜೈಜಗದೀಶ್ ಮತ್ತು ಕಿಶನ್ ನಡುವೆ ಮಾತಿನ ಚಕಮಕಿ ನಡೆಯಿತು.
ಮನಸ್ಸಿಗೆ ಅನಿಸಿದ್ದನ್ನ ನೇರವಾಗಿ ಹೇಳುತ್ತಿರುವ ಕಿಶನ್ 'ಬಿಗ್ ಬಾಸ್' ಮನೆಯಲ್ಲಿ ಹೆಚ್ಚು ದಿನ ಇರ್ತಾರಾ.? ಒಳ್ಳೆಯ ಮನಸ್ಸು ಹೊಂದಿರುವ ಕಿಶನ್ ಎಷ್ಟು ವಾರ ಸರ್ವೈವ್ ಆಗ್ತಾರೆ ಅನ್ನೋದನ್ನ ನೋಡಬೇಕು.


Click it and Unblock the Notifications











