'ಬಿಗ್ ಬಾಸ್ ಕನ್ನಡ-7': ಟಾರ್ಗೆಟ್ ಆದ 'ಅನ್ನಪೂರ್ಣೇಶ್ವರಿ' ಸುಜಾತ
Recommended Video
'ರಾಧಾ ರಮಣ' ಧಾರಾವಾಹಿಯಲ್ಲಿ ಸಿತಾರಾ ದೇವಿ ಆಗಿ ಅಭಿನಯಿಸುತ್ತಿದ್ದ ಸುಜಾತ ನಿಜ ಜೀವನದಲ್ಲಿ 'ವಿಲನ್' ಅಲ್ಲ. ಆಕೆ ಅನ್ನಪೂರ್ಣೇಶ್ವರಿ ಅಂತೆಲ್ಲಾ 'ಅಗ್ನಿಸಾಕ್ಷಿ' ಚಂದ್ರಿಕಾ ಖ್ಯಾತಿಯ ಪ್ರಿಯಾಂಕಾ ಹಾಡಿ ಹೊಗಳುತ್ತಿದ್ದರು. ಯಾಕಂದ್ರೆ, ಅಡುಗೆ ಮನೆಯ ನೇತೃತ್ವ ವಹಿಸಿಕೊಂಡಿದ್ದ ಸುಜಾತಾ ರುಚಿ ರುಚಿಯಾಗಿ ಮಾಡುತ್ತಿದ್ದ ಅಡುಗೆ ಪ್ರಿಯಾಂಕಾಗೆ ಇಷ್ಟ ಆಗಿತ್ತು.
ಮೊದಲ ವಾರ ಸುಜಾತ ಜೊತೆ ಕ್ಲೋಸ್ ಆಗಿದ್ದವರು ಪ್ರಿಯಾಂಕಾ. ಇದೀಗ ಅದೇ ಪ್ರಿಯಾಂಕಾ ಎರಡನೇ ವಾರದ ನಾಮಿನೇಷನ್ ನಲ್ಲಿ ಸುಜಾತಾರನ್ನ ಟಾರ್ಗೆಟ್ ಮಾಡಿದ್ದಾರೆ.
ಅವಶ್ಯಕತೆ ಇಲ್ಲದೇ ಇದ್ದರೂ ಸುಜಾತಾ ಕೂಗಾಡಿದ್ರಂತೆ. ಇದನ್ನೇ ನೆಪ ಮಾಡಿಕೊಂಡು ಸುಜಾತಾ ರನ್ನ ಪ್ರಿಯಾಂಕಾ ನಾಮಿನೇಟ್ ಮಾಡಿದ್ದಾರೆ. ಹಾಗಾದ್ರೆ, ಎರಡನೇ ವಾರ 'ಬಿಗ್ ಬಾಸ್' ಮನೆಯಿಂದ ಹೊರ ಹೋಗಲು ಯಾರೆಲ್ಲಾ ನಾಮಿನೇಟ್ ಆಗಿದ್ದಾರೆ ಅಂದ್ರಾ.? ಫೋಟೋ ಸ್ಲೈಡ್ ಗಳಲ್ಲಿ ಸಂಪೂರ್ಣ ಮಾಹಿತಿ ಇದೆ. ಓದಿರಿ...

ಕ್ಯಾಪ್ಟನ್ ದುನಿಯಾ ರಶ್ಮಿ ಆಯ್ಕೆ ಪ್ರಿಯಾಂಕಾ
'ಬಿಗ್ ಬಾಸ್' ನೀಡಿದ್ದ ಚಟುವಟಿಕೆಗಳಲ್ಲಿ ಉತ್ತಮ ಪರ್ಫಾಮೆನ್ಸ್ ಕೊಟ್ಟಿದ್ದ ದುನಿಯಾ ರಶ್ಮಿ ಈ ವಾರ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ. ಕ್ಯಾಪ್ಟನ್ ರಶ್ಮಿ.. ಪ್ರಿಯಾಂಕಾ ರನ್ನ ನೇರವಾಗಿ ನಾಮಿನೇಟ್ ಮಾಡಿದರು.

ಡೇಂಜರ್ ಝೋನ್ ನಲ್ಲಿ ಚಂದನ್ ಆಚಾರ್
'ಬಿಗ್ ಬಾಸ್' ಮನೆಯಿಂದ ಹೊರಗೆ ಹೋಗುವ ಮುನ್ನ ಗುರುಲಿಂಗ ಸ್ವಾಮೀಜಿ ಅವರಿಗೆ ವಿಶೇಷ ಅಧಿಕಾರ ಲಭಿಸಿತ್ತು. ಅದರ ಅನ್ವಯ ಚಂದನ್ ಆಚಾರ್ ರನ್ನ ಗುರುಲಿಂಗ ಸ್ವಾಮೀಜಿ ಡೈರೆಕ್ಟಾಗಿ ನಾಮಿನೇಟ್ ಮಾಡಿದರು.

ಟಾರ್ಗೆಟ್ ಆದ ಸುಜಾತಾ
''ಅವಶ್ಯಕತೆ ಇಲ್ಲದೆ ಹೋದರೂ ತುಂಬಾ ಕಿರುಚಾಡುತ್ತಾರೆ'' ಎಂಬ ಕಾರಣ ಕೊಟ್ಟು ಭೂಮಿ ಶೆಟ್ಟಿ, ರಾಜು ತಾಳಿಕೋಟೆ, ಚೈತ್ರ ಕೋಟೂರು ಮತ್ತು ಪ್ರಿಯಾಂಕಾ.. ಸುಜಾತಾ ರನ್ನ ನಾಮಿನೇಟ್ ಮಾಡಿದರು.

ಈ ವಾರವೂ ಚೈತ್ರ ವಾಸುದೇವನ್ ಮಿಸ್ ಆಗಲಿಲ್ಲ.!
ದೀಪಿಕಾ ದಾಸ್, ಜೈಜಗದೀಶ್, ಕುರಿ ಪ್ರತಾಪ್, ಪ್ರಿಯಾಂಕಾ, ಶೈನ್ ಶೆಟ್ಟಿ, ಸುಜಾತಾ ಮತ್ತು ವಾಸುಕಿ ವೈಭವ್.. ಚೈತ್ರ ವಾಸುದೇವನ್ ರನ್ನ ನಾಮಿನೇಟ್ ಮಾಡಿದರು. ಅದಕ್ಕೆ ಎಲ್ಲರೂ ಕೊಟ್ಟ ಕಾರಣ ''ಚೈತ್ರ ವಾಸುದೇವನ್ ಎಲ್ಲರೊಂದಿಗೆ ಬೆರೆಯುವುದಿಲ್ಲ. ಮಿಸ್ ಅಂಡರ್ ಸ್ಟ್ಯಾಂಡ್ ಮಾಡಿಕೊಳ್ಳುತ್ತಾರೆ'' ಅಂತ.

ಮತ್ತೆ ಲಿಸ್ಟ್ ನಲ್ಲಿ ಚೈತ್ರ ಕೋಟೂರು
ಚೈತ್ರ ಕೋಟೂರು ನಾಟಕ ಮಾಡುತ್ತಿದ್ದಾರಂತೆ. ಹೀಗಾಗಿ ದೀಪಿಕಾ ದಾಸ್, ಕಿಶನ್, ಕುರಿ ಪ್ರತಾಪ್, ಸುಜಾತಾ ಮತ್ತು ವಾಸುಕಿ ವೈಭವ್... ಚೈತ್ರ ಕೋಟೂರು ರನ್ನ ನಾಮಿನೇಟ್ ಮಾಡಿದರು.

ದೀಪಿಕಾ ದಾಸ್ ಮೇಲೆ ಕಣ್ಣು
ದೀಪಿಕಾ ದಾಸ್ ಎಲ್ಲರೊಂದಿಗೆ ಮಿಂಗಲ್ ಆಗುತ್ತಿಲ್ಲವಂತೆ. ಹೀಗಾಗಿ ಭೂಮಿ ಶೆಟ್ಟಿ, ಚೈತ್ರ ಕೋಟೂರು ಮತ್ತು ಶೈನ್ ಶೆಟ್ಟಿ ಟಾರ್ಗೆಟ್ ಮಾಡಿದರು.

ಅಷ್ಟರಲ್ಲೇ ಜಸ್ಟ್ ಮಿಸ್ ಆದವರು
ಜೈಜಗದೀಶ್, ಕಿಶನ್, ಭೂಮಿ ಶೆಟ್ಟಿ ಮತ್ತು ರಾಜು ತಾಳಿಕೋಟೆಗೆ ತಲಾ ಎರಡು ವೋಟ್ ಗಳು ಬಿದ್ದಿದ್ದವು. ಇನ್ನೂ ಶೈನ್ ಶೆಟ್ಟಿ ಮತ್ತು ಚಂದನಾಗೆ ಕೇವಲ ಒಂದು ಮತ ಬಿದ್ದಿತ್ತು. ಹೀಗಾಗಿ ಇವರೆಲ್ಲರೂ ನಾಮಿನೇಷನ್ ನಿಂದ ಬಚಾವ್ ಆಗಿದ್ದಾರೆ.

ನಿಮ್ಮ ಮತ ಯಾರಿಗೆ.?
ಚೈತ್ರ ವಾಸುದೇವನ್, ಚೈತ್ರ ಕೋಟೂರು, ಸುಜಾತಾ, ದೀಪಿಕಾ ದಾಸ್, ಚಂದನ್ ಆಚಾರ್ ಮತ್ತು ಪ್ರಿಯಾಂಕಾ... ಈ ಆರು ಮಂದಿ ಪೈಕಿ ನಿಮ್ಮ ಮತ ಯಾರಿಗೆ.? ಯಾರು ಔಟ್ ಆಗಬೇಕು ಅಂತ ನೀವು ಬಯಸುತ್ತೀರಾ.? ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ.. ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.
ಚಿತ್ರ ಕೃಪೆ: ಕಲರ್ಸ್ ಕನ್ನಡ/ವೂಟ್


Click it and Unblock the Notifications











