For Quick Alerts
  ALLOW NOTIFICATIONS  
  For Daily Alerts

  ಕುಂದಾಪುರದ ಮೀನು ರಾಯಲ್ ಶೆಟ್ರನ್ನ ಮೆಚ್ಚಿದ ಕಿಚ್ಚ ಸುದೀಪ್.!

  |

  Recommended Video

  Bigg Boss Kannada 7 : Sudeep appreciated Bhoomi for task.

  'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಪ್ರತಿ ವಾರವೂ ಗಮನ ಸೆಳೆಯುವ ಆಟ ಆಡುವವರಿಗೆ, ಕಿಚ್ಚ ಸುದೀಪ್ 'ಮೆಚ್ಚುಗೆಯ ಚಪ್ಪಾಳೆ' ತಟ್ಟುತ್ತಾರೆ. ಅದರಂತೆ ಈ ವಾರ 'ಕಿಚ್ಚನ ಮೆಚ್ಚುಗೆಯ ಚಪ್ಪಾಳೆ' ಪಾಲಾಗಿದ್ದು ರಾಯಲ್ ಶೆಟ್ಟಿ ಅಲಿಯಾಸ್ ಭೂಮಿ ಶೆಟ್ಟಿಗೆ.

  ಪಟ ಪಟ ಅಂತ ಮಾತನಾಡುವ ಕಿರುತೆರೆ ನಟಿ ಭೂಮಿ ಶೆಟ್ಟಿ ತುಂಬಾ ಸ್ಟ್ರೈಟ್ ಫಾರ್ವರ್ಡ್. ಯಾರಿಗೂ ಹೆದರದೆ.. ಅನಿಸಿದ್ದನ್ನ ನೇರವಾಗಿ ಮಾತನಾಡುವ ಹುಡುಗಿ ಭೂಮಿ ಶೆಟ್ಟಿ.

  'ಒಂದು ಆಪಲ್ ಕಿತ್ತಾಟ'ದಲ್ಲಿ ಇಡೀ ಅಡುಗೆ ಮನೆ ಡಿಪಾರ್ಟ್ಮೆಮೆಂಟ್ ಚೈತ್ರ ಕೋಟೂರು ವಿರುದ್ಧ ತಿರುಗಿ ಬಿದ್ದಿದ್ದಾಗ, ಚಂದನ್ ಆಚಾರ್ ಮಾಡಿದ್ದ ತಪ್ಪನ್ನು ಎತ್ತಿ ತೋರಿಸಿದ್ದು ಇದೇ ಭೂಮಿ ಶೆಟ್ಟಿ. ಅಲ್ಲದೇ, 'ಸೇಬು ಬೇಕಾ ಸೇಬು' ಟಾಸ್ಕ್ ನಲ್ಲಿ ಕುಂದಾಪುರದ ಶೈಲಿಯಲ್ಲಿ ಆಪಲ್ ಮಾರಾಟ ಮಾಡಿ ಹೆಚ್ಚು ಲಕ್ಷುರಿ ಬಜೆಟ್ ಪಾಯಿಂಟ್ ಗಳನ್ನು ತಂದು ಕೊಟ್ಟವರು ಭೂಮಿ ಶೆಟ್ಟಿ.

  'ಬಿಗ್ ಬಾಸ್': ಇಡೀ ಸಂಚಿಕೆಯನ್ನು ಕೊಂದ ಒಂದು ಆಪಲ್.!'ಬಿಗ್ ಬಾಸ್': ಇಡೀ ಸಂಚಿಕೆಯನ್ನು ಕೊಂದ ಒಂದು ಆಪಲ್.!

  ಈ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿರುವ ಕಿಚ್ಚ ಸುದೀಪ್ ಈ ವಾರದ 'ಮೆಚ್ಚುಗೆಯ ಚಪ್ಪಾಳೆ'ಯನ್ನ ಭೂಮಿ ಶೆಟ್ಟಿಗೆ ನೀಡಿದ್ದಾರೆ.

  ''ಆಪಲ್ ಸಿಚ್ಯುಯೇಷನ್ ನ ಚೆನ್ನಾಗಿ ಅನಲೈಸ್ ಮಾಡಿದ್ರಿ. ಟಾಸ್ಕ್ ನ ಅದ್ಭುತವಾಗಿ ಮಾಡಿದ್ರಿ. ಸೂಪರ್ ಆಗಿ ಆಪಲ್ ಮಾರಾಟ ಮಾಡಿದ್ರಿ. ಮನೆಗೆ ತುಂಬಾ ಪಾಯಿಂಟ್ಸ್ ತಂದುಕೊಟ್ರಿ. ಆಗದೇ ಇರುವವರನ್ನು ಮೆಚ್ಚಿಕೊಂಡ್ರಿ. ಫ್ರೆಂಡ್ ನ ಎದುರು ಹಾಕಿಕೊಂಡ್ರಿ'' ಎನ್ನುತ್ತ ಭೂಮಿ ಶೆಟ್ಟಿಗೆ ಸುದೀಪ್ ಚಪ್ಪಾಳೆ ತಟ್ಟಿದರು.

  ಎಲ್ಲರ ಕಣ್ಣು ಕುಕ್ಕುವ ಹಾಗೆ ಆಟ ಆಡುವ ಸ್ಪರ್ಧಿಗಳಿಗೆ ಕಿಚ್ಚನ ಕಡೆಯಿಂದ 'ಮೆಚ್ಚುಗೆಯ ಚಪ್ಪಾಳೆ' ಸಿಗುತ್ತಿದೆ. ಮುಂದಿನ ವಾರ ಈ ಚಪ್ಪಾಳೆ ಯಾರಿಗೆ ಸಿಗುತ್ತದೋ, ನೋಡಬೇಕು.

  English summary
  Bigg Boss Kannada 7: Week 2: Sudeep appreciated Bhoomi Shetty.
  Sunday, October 27, 2019, 8:39
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X