'ಬಿಗ್ ಬಾಸ್' ಮನೆಯಿಂದ ದುನಿಯಾ ರಶ್ಮಿ ಔಟ್, ರೇಡಿಯೋ ಜಾಕಿ ಪೃಥ್ವಿ ಇನ್.!
'ಬಿಗ್ ಬಾಸ್ ಕನ್ನಡ-7' ಕಾರ್ಯಕ್ರಮದಲ್ಲಿ ಮೂರನೇ ವಿಕೆಟ್ ಪತನಗೊಂಡಿದೆ. 'ಬಿಗ್ ಬಾಸ್' ಮನೆಯಿಂದ ಗುರುಲಿಂಗ ಸ್ವಾಮೀಜಿ, ಆಂಕರ್ ಚೈತ್ರ ವಾಸುದೇವನ್ ಹೊರಬಂದ ಬಳಿಕ ಇದೀಗ ಚಿತ್ರನಟಿ ದುನಿಯಾ ರಶ್ಮಿ ಔಟ್ ಆಗಿದ್ದಾರೆ.
'ದುನಿಯಾ'ದಂತಹ ಸೂಪರ್ ಹಿಟ್ ಚಿತ್ರವನ್ನು ನೀಡಿದ ಬಳಿಕ ರಶ್ಮಿ ಅಷ್ಟಾಗಿ ಸಿನಿ ಲೋಕದಲ್ಲಿ ಕಾಣಿಸಿಕೊಂಡಿರಲಿಲ್ಲ. 'ಬಿಗ್ ಬಾಸ್' ಮೂಲಕ ಅದೃಷ್ಟ ಪರೀಕ್ಷೆಗೆ ದುನಿಯಾ ರಶ್ಮಿ ಇಳಿದಿದ್ದರು. 'ಬಿಗ್ ಬಾಸ್' ಶೋದಿಂದ ಸ್ಯಾಂಡಲ್ ವುಡ್ ನಲ್ಲಿ ಭಾಗ್ಯದ ಬಾಗಿಲು ತೆರೆಯಬಹುದು ಎಂದು ದುನಿಯಾ ರಶ್ಮಿ ಭಾವಿಸಿದ್ದರು. ಆದರೆ, ದುರಾದೃಷ್ಟವಶಾತ್ ಮೂರೇ ವಾರಕ್ಕೆ ದುನಿಯಾ ರಶ್ಮಿಯ 'ಬಿಗ್ ಬಾಸ್' ಪಯಣ ಅಂತ್ಯವಾಗಿದೆ.
'ಬಿಗ್ ಬಾಸ್' ಮನೆಯಿಂದ ಹೊರಗೆ ಹೋಗಲು ಈ ವಾರ 'ಅಗ್ನಿಸಾಕ್ಷಿ' ಧಾರಾವಾಹಿಯ ಚಂದ್ರಿಕಾ ಪಾತ್ರಧಾರಿ ಪ್ರಿಯಾಂಕಾ, 'ಕಿರಿಕ್ ಪಾರ್ಟಿ' ಖ್ಯಾತಿಯ ಚಂದನ್ ಆಚಾರ್, ರಾಜು ತಾಳಿಕೋಟೆ, ವಾಸುಕಿ ವೈಭವ್ ಮತ್ತು ದುನಿಯಾ ರಶ್ಮಿ ನಾಮಿನೇಟ್ ಆಗಿದ್ದರು.

ಐವರ ಪೈಕಿ ದುನಿಯಾ ರಶ್ಮಿಗೆ ವೀಕ್ಷಕರ ಬೆಂಬಲ ಲಭ್ಯವಾಗಿಲ್ಲ. ಹೀಗಾಗಿ ದುನಿಯಾ ರಶ್ಮಿಗೆ ಗೇಟ್ ಪಾಸ್ ನೀಡಲಾಗಿದೆ.
ಒಂದ್ಕಡೆ ದುನಿಯಾ ರಶ್ಮಿ ಔಟ್ ಆದರೆ, ಇನ್ನೊಂದು ಕಡೆ ವೈಲ್ಡ್ ಕಾರ್ಡ್ ಎಂಟ್ರಿ ರೂಪದಲ್ಲಿ ರೇಡಿಯೋ ಜಾಕಿ ಪೃಥ್ವಿ 'ಬಿಗ್ ಬಾಸ್' ಮನೆ ಪ್ರವೇಶಿಸಿದ್ದಾರೆ. ಪೃಥ್ವಿ ಕಾಲಿಟ್ಟ ಮೇಲೆ 'ದೊಡ್ಮನೆ'ಯಲ್ಲಿನ ಗೇಮ್ ಪ್ಲಾನ್ ಚೇಂಜ್ ಆಗುತ್ತಾ, ನೋಡಬೇಕು.


Click it and Unblock the Notifications











