For Quick Alerts
  ALLOW NOTIFICATIONS  
  For Daily Alerts

  ಜಡೆ ಜಗಳ ಶುರು: ಪ್ರಿಯಾಂಕಾ ಕಂಡ್ರೆ ಭೂಮಿ ಶೆಟ್ಟಿಗೆ ಯಾಕೆ ಹೊಟ್ಟೆ ಉರಿ.?

  |

  'ಬಿಗ್ ಬಾಸ್' ಮನೆಯೇ ಹಾಗೆ.. ಇಂದು ದೋಸ್ತ್ ಗಳಾಗಿದ್ದವರು, ನಾಳೆ ದುಶ್ಮನ್ ಆಗಬಹುದು. ನಾಳೆ ದುಶ್ಮನ್ ಆಗಿರುವವರು, ನಾಡಿದ್ದು ದೋಸ್ತ್ ಆಗಬಹುದು. ಸದ್ಯ ಇದಕ್ಕೆ ಉತ್ತಮ ಉದಾಹರಣೆ ಅಂದ್ರೆ ಪ್ರಿಯಾಂಕಾ ಮತ್ತು ಭೂಮಿ ಶೆಟ್ಟಿ.

  ಮೊದಲೆರಡು ವಾರ ಗಳಸ್ಯಕಂಟಸ್ಯದಂತೆ ಇದ್ದವರು ಪ್ರಿಯಾಂಕಾ ಮತ್ತು ಭೂಮಿ ಶೆಟ್ಟಿ. ಹೇಳಿ ಕೇಳಿ ಇವರಿಬ್ಬರು ಕಿರುತೆರೆ ಲೋಕದಿಂದ ಬಂದವರು. 'ಬಿಗ್ ಬಾಸ್' ಮನೆಯೊಳಗೆ ಬರುವ ಮುನ್ನವೇ ಇವರಿಬ್ಬರಿಗೂ ಪರಿಚಯ, ಸ್ನೇಹ ಇತ್ತು. ಅದು 'ಒಂಟಿ ಮನೆ'ಯೊಳಗೆ ಸ್ವಲ್ಪ ಜಾಸ್ತಿನೇ ಆಯ್ತು.

  ಮೊದಲ ವಾರ ಭೂಮಿ ಶೆಟ್ಟಿ ಕೈಗೆ ಪೆಟ್ಟು ಮಾಡಿಕೊಂಡು ಬ್ಯಾಂಡೇಜ್ ಹಾಕಿಕೊಂಡಾಗ, ಆಕೆಗೆ ಸ್ನಾನ ಮಾಡಿಸುತ್ತಿದ್ದವರು ಇದೇ ಪ್ರಿಯಾಂಕಾ. ಯಾವಾಗಲೂ ಅಂಟಿಕೊಂಡೇ ಓಡಾಡುತ್ತಿದ್ದ ಇವರಿಬ್ಬರು ಇದೀಗ ಹಾವು-ಮುಂಗುಸಿಯಂತೆ ಆಡುತ್ತಿದ್ದಾರೆ.

  ಭೂಮಿ ಶೆಟ್ಟಿ ಮತ್ತು ಪ್ರಿಯಾಂಕಾ ಸ್ನೇಹವನ್ನು ಕಂಡು ''ಯಾರ ಕಣ್ಣು ಬೀಳದೆ ಇರಲಿ'' ಅಂತ ಹಿಂದೊಮ್ಮೆ ಸುದೀಪ್ ಹೇಳಿದ್ದರು. ಆದರೀಗ ಇವರಿಬ್ಬರ ಮಧ್ಯೆ ಬೆಂಕಿ ಹೊತ್ತಿಕೊಂಡಿದೆ. ಒಬ್ಬರನ್ನು ಕಂಡರೆ ಮತ್ತೊಬ್ಬರು ಬುಸುಗುಡುತ್ತಿದ್ದಾರೆ. ಒಬ್ಬರ ಬೆನ್ನು ಹಿಂದೆ ಮತ್ತೊಬ್ಬರು ಮಾತನಾಡುತ್ತಿದ್ದಾರೆ. ಅಷ್ಟಕ್ಕೂ, ಇವರಿಬ್ಬರ ಮಧ್ಯೆ ಅಂಥದ್ದೇನಾಯ್ತು ಅಂತೀರಾ.? ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ..

  ಜಡೆ ಜಗಳಕ್ಕೆ ಕಾರಣ ಏನು.?

  ಜಡೆ ಜಗಳಕ್ಕೆ ಕಾರಣ ಏನು.?

  ಮೊದಲೆರಡು ವಾರ ಭೂಮಿ ಶೆಟ್ಟಿಗೆ ಪ್ರಿಯಾಂಕಾ ಅತ್ಯಾಪ್ತರಾಗಿದ್ದರು. ಆಗ ದುನಿಯಾ ರಶ್ಮಿ ಸೇರಿದಂತೆ ಕೆಲವರಿಗೆ ಪ್ರಿಯಾಂಕಾ ಕಂಡ್ರೆ ಅಷ್ಟಕಷ್ಟೆ. ಸುದೀಪ್ ಮುಂದೆ ''ಪ್ರಿಯಾಂಕಾ ಸೋಮಾರಿ'' ಅಂತ ಬಹುತೇಕರು ಕಾಮೆಂಟ್ ಮಾಡಿಬಿಟ್ಟರು. ಇದರಿಂದ ಎಚ್ಚೆತ್ತುಕೊಂಡ ಪ್ರಿಯಾಂಕಾ ತಮ್ಮ ಗೇಮ್ ಪ್ಲಾನ್ ನಲ್ಲಿ ಕೊಂಚ ಬದಲಾವಣೆ ಮಾಡಿಕೊಂಡರು. ಆಗಲೇ ಪ್ರಿಯಾಂಕಾ-ಭೂಮಿ ಫ್ರೆಂಡ್ ಶಿಪ್ ನಲ್ಲಿ ಸಣ್ಣ ಬಿರುಕು ಕಾಣಿಸಿಕೊಂಡಿದ್ದು.

  ಕಿರುತೆರೆ ಲೋಕದ ಈ ಸುಂದರಿಯರು ಮೇಕಪ್ ಇಲ್ಲದೆ ಹೇಗೆ ಕಾಣ್ತಾರೆ ನೋಡಿಕಿರುತೆರೆ ಲೋಕದ ಈ ಸುಂದರಿಯರು ಮೇಕಪ್ ಇಲ್ಲದೆ ಹೇಗೆ ಕಾಣ್ತಾರೆ ನೋಡಿ

  ಭೂಮಿ ಶೆಟ್ಟಿಗೆ ಬೇಸರ ಏನು.?

  ಭೂಮಿ ಶೆಟ್ಟಿಗೆ ಬೇಸರ ಏನು.?

  ಮುಂಚೆ ದುನಿಯಾ ರಶ್ಮಿ ಮತ್ತು ದೀಪಿಕಾ ದಾಸ್ ಗೆ ಪ್ರಿಯಾಂಕಾ ಕ್ಲೋಸ್ ಆಗಿರಲಿಲ್ಲ. ಆದ್ರೀಗ ಈಗೀಗ ರಶ್ಮಿ ಮತ್ತು ದೀಪಿಕಾ ಜೊತೆಗೆ ಪ್ರಿಯಾಂಕಾ ಮಾತನಾಡುತ್ತಿದ್ದಾರೆ. ಇದು ಭೂಮಿ ಶೆಟ್ಟಿಗೆ ಬೇಸರ ತರಿಸಿದೆ. ಅಲ್ಲದೇ, ಮುಂಚಿನ ಹಾಗೆ ಭೂಮಿ ಶೆಟ್ಟಿ ಜೊತೆಗೆ ಪ್ರಿಯಾಂಕಾ ಹೆಚ್ಚು ಸಮಯ ಕಳೆಯುತ್ತಿಲ್ಲ. ಹೀಗಾಗಿ, ಪ್ರಿಯಾಂಕಾ ಮೇಲೆ ಭೂಮಿ ಶೆಟ್ಟಿಗೆ ಕೋಪ ಇದೆ.

  ಸೆಲೆಬ್ರಿಟಿ ಸ್ಪರ್ಧಿಗಳಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಯಾವುದು ಅಂತ್ಲೇ ಗೊತ್ತಿಲ್ಲ.!ಸೆಲೆಬ್ರಿಟಿ ಸ್ಪರ್ಧಿಗಳಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಯಾವುದು ಅಂತ್ಲೇ ಗೊತ್ತಿಲ್ಲ.!

  ಮಹಾರಾಣಿ ಆದ ಪ್ರಿಯಾಂಕಾ

  ಮಹಾರಾಣಿ ಆದ ಪ್ರಿಯಾಂಕಾ

  ಇನ್ನೂ 'ಬಿಗ್ ಬಾಸ್ ದರ್ಬಾರ್' ಚಟುವಟಿಕೆಯಲ್ಲಿ ಪ್ರಿಯಾಂಕಾ ಮಹಾರಾಣಿ ಆದ್ಮೇಲೆ ಇಬ್ಬರ ನಡುವಿನ ಭಿನ್ನಾಭಿಪ್ರಾಯ ಕೊಂಚ ಜಾಸ್ತಿನೇ ಆಯ್ತು. 'ಸ್ತ್ರೀ ಸಾಮ್ರಾಜ್ಯ' ಅಂತ ಪ್ರಿಯಾಂಕಾ ಘೋಷಣೆ ಮಾಡಿದ್ದು ಭೂಮಿ ಶೆಟ್ಟಿಗೆ ಇಷ್ಟ ಆಗಲಿಲ್ಲ. ಅಲ್ಲದೇ, ಪ್ರಿಯಾಂಕಾ ತೆಗೆದುಕೊಂಡ ಕೆಲ ನಿರ್ಧಾರಗಳ ಬಗ್ಗೆ ಭೂಮಿ ಶೆಟ್ಟಿಗೆ ಆಕ್ಷೇಪ ಇತ್ತು. ಇದೇ ಕಾರಣಕ್ಕೋ ಏನೋ, 'ರಾಜಾಧಿರಾಜ'ನ ಆಯ್ಕೆ ಸಂದರ್ಭದಲ್ಲಿ ಪ್ರಿಯಾಂಕಾ ಬದಲು ಜೈಜಗದೀಶ್ ಗೆ ಭೂಮಿ ಶೆಟ್ಟಿ ಹಾರ ಹಾಕಿದರು. ಇನ್ನೂ ಭೂಮಿ ಶೆಟ್ಟಿ ತಮಗೆ ಹಾರ ಹಾಕಲಿಲ್ಲ ಎನ್ನುವ ಬಗ್ಗೆ ಪ್ರಿಯಾಂಕಾಗೂ ಅಸಮಾಧಾನ ಇದೆ.

  ಹಿಂದೆ-ಮುಂದೆ ಮಾತು.!

  ಹಿಂದೆ-ಮುಂದೆ ಮಾತು.!

  ಒಂದ್ಕಡೆ ಪ್ರಿಯಾಂಕಾ ಆಡಳಿತ ವೈಖರಿ ಬಗ್ಗೆ ಆಕೆಯ ಬೆನ್ನ ಹಿಂದೆ ಭೂಮಿ ಶೆಟ್ಟಿ ಮಾತನಾಡುತ್ತಾರೆ. ಇನ್ನೊಂದು ಕಡೆ ಭೂಮಿ ಶೆಟ್ಟಿ ಸೇಫ್ ಗೇಮ್ ಆಡ್ತಿಲ್ವಾ ಅಂತ ಕುರಿ ಪ್ರತಾಪ್ ಬಳಿ ಪ್ರಿಯಾಂಕಾ ಪ್ರಶ್ನೆ ಮಾಡುತ್ತಾರೆ. ಒಟ್ನಲ್ಲಿ, ಮೊದಲೆರಡು ವಾರ ಎರಡು ದೇಹ ಒಂದು ಆತ್ಮದಂತೆ ಇದ್ದವರು ಇದೀಗ ಒಡೆದು ಚೂರು ಚೂರು ಆಗುವ ಹಂತ ತಲುಪಿರುವ ಹಾಗಿದೆ.

  ನಂಬಿಕೆ ಇರಬೇಕು.!

  ನಂಬಿಕೆ ಇರಬೇಕು.!

  ಭೂಮಿ ಶೆಟ್ಟಿಯನ್ನ ಸಮಾಧಾನ ಪಡಿಸಲು ಪ್ರಿಯಾಂಕಾ ಎರಡ್ಮೂರು ಬಾರಿ ಪ್ರಯತ್ನ ಪಟ್ಟಿದ್ದಾರೆ. ಆದ್ರೆ, ಪ್ರಿಯಾಂಕಾ ಮೇಲಿನ ಮುನಿಸು ಮಾತ್ರ ಭೂಮಿಗೆ ಕಮ್ಮಿ ಆಗಿಲ್ಲ. ಚಿಕ್ಕ ಪುಟ್ಟ ವಿಷಯಕ್ಕೆಲ್ಲ ಸಿಟ್ಟು ಮಾಡಿಕೊಳ್ಳುವ ಭೂಮಿಗೆ 'ನಮ್ಮವರ ನಂಬಿಕೆ ಇರಬೇಕು' ಅಂತ ಪ್ರಿಯಾಂಕಾ ಪಾಠ ಬೇರೆ ಮಾಡಿದ್ದಾರೆ. ಇನ್ನೂ ಸುದೀಪ್ ಕೂಡ ಇದೇ ಟಾಪಿಕ್ ಬಗ್ಗೆ ವೀಕೆಂಡ್ ನಲ್ಲಿ ಮಾತನಾಡಿದರು. ಇನ್ನಾದರೂ ಭೂಮಿ ಶೆಟ್ಟಿ-ಪ್ರಿಯಾಂಕಾ ಫ್ರೆಂಡ್ ಶಿಪ್ ಮುಂದುವರೆಯುತ್ತಾ.? 'ಬಿಗ್ ಬಾಸ್' ಆಟ ಬಲ್ಲವರ್ಯಾರು.?

  English summary
  Bigg Boss Kannada 7: Week 3: Fight between Priyanka and Bhoomi Shetty.
  Sunday, November 3, 2019, 13:28
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X