For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್': ಅಚ್ಚರಿ ತಂದ ಈ ವಾರದ ನಾಮಿನೇಷನ್

  |
  Bigg Boss kannada 7 : Who All Got Nominated This Week ? | FILMIBEAT KANNADA

  'ಬಿಗ್ ಬಾಸ್ ಕನ್ನಡ-7' ಕಾರ್ಯಕ್ರಮದಲ್ಲಿ ಎರಡನೇ ವಾರ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದು ಕಿರುತೆರೆ ನಟಿ ಸುಜಾತ. ಅಡುಗೆ ಮನೆಯ ಉಸ್ತುವಾರಿ ವಹಿಸಿಕೊಂಡಿದ್ದ ಸುಜಾತ, ಒಂದು ಆಪಲ್ ವಿಷಯವಾಗಿ ಚೈತ್ರ ಕೋಟೂರು ಮೇಲೆ ಕೂಗಾಡಿದ್ದು ಎಲ್ಲರಿಗೂ ಬೇಸರ ತಂದಿತ್ತು. ಇದೇ ವಿಷಯವಾಗಿ ಕಿಚ್ಚ ಸುದೀಪ್ ಮುಂದೆಯೂ ಸುಜಾತ ಕ್ಷಮೆ ಕೇಳಿದ್ದರು.

  ಇತ್ತ ದುನಿಯಾ ರಶ್ಮಿ ಕಳೆದ ವಾರ ಕ್ಯಾಪ್ಟನ್ ಆಗಿದ್ದರು. ಕ್ಯಾಪ್ಟನ್ ಆಗಿ ರಶ್ಮಿ ಇಡೀ ಮನೆಯನ್ನ ಚೆನ್ನಾಗಿಯೇ ನಿಭಾಯಿಸಿದ್ದರು. ಹೀಗಿದ್ದರೂ, ಮೂರನೇ ವಾರ 'ಬಿಗ್ ಬಾಸ್' ಮನೆಯಿಂದ ಹೊರಗೆ ಹೋಗಲು ದುನಿಯಾ ರಶ್ಮಿ ನಾಮಿನೇಟ್ ಆಗಿದ್ದಾರೆ.

  ಸುಜಾತ ಮೇಲೆ ಕೆಲವರಿಗೆ ಕೋಪ ಇದ್ದರೂ, ನಾಮಿನೇಷನ್ ಲಿಸ್ಟ್ ನಲ್ಲಿ ಸುಜಾತ ಹೆಸರು ಇಲ್ಲದಿರುವುದು ಅಚ್ಚರಿಯೇ ಸರಿ.!

  ಅಂದ್ಹಾಗೆ, ಈ ವಾರ ಯಾರ್ಯಾರು ನಾಮಿನೇಟ್ ಆಗಿದ್ದಾರೆ ಅಂತೀರಾ.? ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

  ಟಾರ್ಗೆಟ್ ಆದ ಚಂದನ್ ಆಚಾರ್

  ಟಾರ್ಗೆಟ್ ಆದ ಚಂದನ್ ಆಚಾರ್

  ಆಪಲ್ ವಿಚಾರದಲ್ಲಿ ಡಬಲ್ ಗೇಮ್ ಆಡಿ ದೊಡ್ಡ ಗಲಾಟೆಗೆ ಕಾರಣರಾದ ಚಂದನ್ ಆಚಾರ್ ಈ ವಾರ ಟಾರ್ಗೆಟ್ ಆಗಿದ್ದಾರೆ. ಭೂಮಿ ಶೆಟ್ಟಿ, ಜೈಜಗದೀಶ್, ದೀಪಿಕಾ ದಾಸ್, ವಾಸುಕಿ ವೈಭವ್, ಸುಜಾತ, ಕುರಿ ಪ್ರತಾಪ್ ಮತ್ತು ಹರೀಶ್ ರಾಜ್.. ಚಂದನ್ ಆಚಾರ್ ರನ್ನ ನಾಮಿನೇಟ್ ಮಾಡಿದರು.

  ಚೈತ್ರಾಗೆ ಸಿಕ್ಕ ವಿಶೇಷ ಅಧಿಕಾರದಿಂದ ವಾಸುಕಿ ವೈಭವ್ ಗೆ ಸಂಕಷ್ಟಚೈತ್ರಾಗೆ ಸಿಕ್ಕ ವಿಶೇಷ ಅಧಿಕಾರದಿಂದ ವಾಸುಕಿ ವೈಭವ್ ಗೆ ಸಂಕಷ್ಟ

  ಮಿಸ್ ಆಗದ ಪ್ರಿಯಾಂಕಾ

  ಮಿಸ್ ಆಗದ ಪ್ರಿಯಾಂಕಾ

  ಕಳೆದ ವಾರ ನಾಮಿನೇಟ್ ಆಗಿದ್ದ ಪ್ರಿಯಾಂಕಾ ಈ ವಾರವೂ ಮಿಸ್ ಆಗಲಿಲ್ಲ.

  ದೀಪಿಕಾ ದಾಸ್, ಜೈಜಗದೀಶ್, ಚಂದನಾ, ಶೈನ್ ಶೆಟ್ಟಿ, ಕಿಶನ್ ಮತ್ತು ದುನಿಯಾ ರಶ್ಮಿ.. ಪ್ರಿಯಾಂಕಾರನ್ನ ನಾಮಿನೇಟ್ ಮಾಡಿದರು. ಅದಕ್ಕೆ ಬಹುತೇಕ ಎಲ್ಲರೂ ಕೊಟ್ಟ ಕಾರಣ.. 'ಪ್ರಿಯಾಂಕಾ ಸೋಮಾರಿ' ಅಂತ.

  ಚಂದನ್ ಆಚಾರ್ ಗೆ ಡೀಸೆನ್ಸಿ ಪಾಠ ಮಾಡಿದ 'ಪೈಲ್ವಾನ್' ಸುದೀಪ್ಚಂದನ್ ಆಚಾರ್ ಗೆ ಡೀಸೆನ್ಸಿ ಪಾಠ ಮಾಡಿದ 'ಪೈಲ್ವಾನ್' ಸುದೀಪ್

  ಡೇಂಜರ್ ಝೋನ್ ಗೆ ಬಂದ ದುನಿಯಾ ರಶ್ಮಿ

  ಡೇಂಜರ್ ಝೋನ್ ಗೆ ಬಂದ ದುನಿಯಾ ರಶ್ಮಿ

  ಮೊದಲೇ ಪ್ರಿಯಾಂಕಾಗೆ ದುನಿಯಾ ರಶ್ಮಿ ಮೇಲೆ ಸಿಟ್ಟಿತ್ತು. ಆ ಸಿಟ್ಟನ್ನ ನಾಮಿನೇಷನ್ ಮುಖಾಂತರ ಪ್ರಿಯಾಂಕಾ ತೀರಿಸಿಕೊಂಡರು. ಪ್ರಿಯಾಂಕಾ ಜೊತೆಗೆ ಚೈತ್ರ ಕೋಟೂರು, ಚಂದನ್ ಆಚಾರ್ ಕೂಡ ದುನಿಯಾ ರಶ್ಮಿರನ್ನ ಡೇಂಜರ್ ಝೋನ್ ಗೆ ತಳ್ಳಿದರು.

  ತಪ್ಪಿನ ಅರಿವಾದ ಮೇಲೆ ಸುದೀಪ್ ಮುಂದೆ ಚೈತ್ರಗೆ ಕ್ಷಮೆ ಕೇಳಿದ ಸುಜಾತ.!ತಪ್ಪಿನ ಅರಿವಾದ ಮೇಲೆ ಸುದೀಪ್ ಮುಂದೆ ಚೈತ್ರಗೆ ಕ್ಷಮೆ ಕೇಳಿದ ಸುಜಾತ.!

  ರಾಜು ತಾಳಿಕೋಟೆಗೆ ಬಿಸಿ ಮುಟ್ಟಿಸಿದ ಸ್ಪರ್ಧಿಗಳು.!

  ರಾಜು ತಾಳಿಕೋಟೆಗೆ ಬಿಸಿ ಮುಟ್ಟಿಸಿದ ಸ್ಪರ್ಧಿಗಳು.!

  ಟಾಸ್ಕ್ ಗಳಲ್ಲಿ ಸೀರಿಯಸ್ ಆಗಿರಲ್ಲ ಎಂಬ ಕಾರಣಕ್ಕೆ ಚಂದನ್ ಆಚಾರ್, ಶೈನ್ ಶೆಟ್ಟಿ ಮತ್ತು ಕಿಶನ್.. ರಾಜು ತಾಳಿಕೋಟೆರನ್ನ ನಾಮಿನೇಟ್ ಮಾಡಿದರು.

  ಎರಡು ವಾರ: 'ಬಿಗ್ ಬಾಸ್' ಮನೆಯೊಳಗೆ ಏನ್ ನಡೀತಿದೆ.? ವೀಕ್ಷಕರಿಗೆ ಅರ್ಥ ಆಗ್ತಿಲ್ಲ.!ಎರಡು ವಾರ: 'ಬಿಗ್ ಬಾಸ್' ಮನೆಯೊಳಗೆ ಏನ್ ನಡೀತಿದೆ.? ವೀಕ್ಷಕರಿಗೆ ಅರ್ಥ ಆಗ್ತಿಲ್ಲ.!

  ಅಷ್ಟರಲ್ಲೇ ಜಸ್ಟ್ ಮಿಸ್ ಆದವರು.!

  ಅಷ್ಟರಲ್ಲೇ ಜಸ್ಟ್ ಮಿಸ್ ಆದವರು.!

  ಕುರಿ ಪ್ರತಾಪ್, ಶೈನ್ ಶೆಟ್ಟಿ ವಿರುದ್ಧ ತಲಾ ಎರಡು ವೋಟ್ ಗಳು ಬಿದ್ದಿದ್ದವು. ಭೂಮಿ ಶೆಟ್ಟಿ, ದೀಪಿಕಾ ದಾಸ್, ಸುಜಾತ, ಕಿಶನ್, ಚೈತ್ರ ಕೋಟೂರು, ಜೈಜಗದೀಶ್ ಮತ್ತು ಚಂದನಾ ವಿರುದ್ಧ ತಲಾ ಒಂದೊಂದು ಮತ ಬಿದ್ದ ಕಾರಣ ನಾಮಿನೇಟ್ ಆಗಲಿಲ್ಲ.

  ನೇರವಾಗಿ ನಾಮಿನೇಟ್ ಆಗಿರುವ ವಾಸುಕಿ ವೈಭವ್

  ನೇರವಾಗಿ ನಾಮಿನೇಟ್ ಆಗಿರುವ ವಾಸುಕಿ ವೈಭವ್

  'ಬಿಗ್ ಬಾಸ್' ಮನೆಯಿಂದ ಚೈತ್ರ ವಾಸುದೇವನ್ ಹೊರ ಹೋಗುವ ಮುನ್ನ ವಾಸುಕಿ ವೈಭವ್ ರನ್ನ ನಾಮಿನೇಟ್ ಮಾಡಿದ್ದರು. ಹೀಗಾಗಿ ವಾಸುಕಿ ವೈಭವ್ ಗೆ ಈ ಬಾರಿ ಎಲಿಮಿನೇಷನ್ ತಲೆಬಿಸಿ ಇರಲಿದೆ.

  ಈ ಐವರಲ್ಲಿ ನಿಮ್ಮ ವೋಟು ಯಾರಿಗೆ.?

  ಈ ಐವರಲ್ಲಿ ನಿಮ್ಮ ವೋಟು ಯಾರಿಗೆ.?

  ಚಂದನ್ ಆಚಾರ್, ಪ್ರಿಯಾಂಕಾ, ರಾಜು ತಾಳಿಕೋಟೆ, ದುನಿಯಾ ರಶ್ಮಿ ಮತ್ತು ವಾಸುಕಿ ವೈಭವ್... ಈ ಐವರಲ್ಲಿ ನಿಮ್ಮ ಮತ ಯಾರಿಗೆ.? 'ಬಿಗ್ ಬಾಸ್' ಮನೆಯಿಂದ ಈ ವಾರ ಯಾರು ಔಟ್ ಆಗಬೇಕು ಅನ್ನೋದು ನಿಮ್ಮ ಇಚ್ಛೆ.? ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.. ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.

  English summary
  Bigg Boss Kannada 7 - Priyanka, Chandan Aachar, Raju Talikote, Vasuki Vaibhav and Duniya Rashmi gets nominated in third week.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X