For Quick Alerts
  ALLOW NOTIFICATIONS  
  For Daily Alerts

  ರಶ್ಮಿಗಿಂತ ಕಳಪೆ ಸ್ಪರ್ಧಿಗಳು 'ಬಿಗ್ ಬಾಸ್' ಮನೆಯಲ್ಲಿ ಇದ್ದಾರೆ.!

  |
  Bigg Boss Kannada 7 | Exclusive interview with Duniya Rashmi

  'ಬಿಗ್ ಬಾಸ್' ಮನೆಯೊಳಗೆ ದುನಿಯಾ ರಶ್ಮಿ ಸ್ಪರ್ಧಿಯಾಗಿ ಕಾಲಿಟ್ಟಾಗ, ಈಕೆ ಫಿನಾಲೆ ತಲುಪಬಹುದು ಎಂದು ವೀಕ್ಷಕರು ಅಂದಾಜಿಸಿದ್ದರು. ನೋಡಲು ಸೈಲೆಂಟ್ ಆಗಿ ಕಂಡುಬಂದರೂ, 'ಬಿಗ್ ಬಾಸ್' ಕೊಟ್ಟ ಎಲ್ಲಾ ಟಾಸ್ಕ್ ಗಳಲ್ಲಿ ದುನಿಯಾ ರಶ್ಮಿ ಪರ್ಫಾಮೆನ್ಸ್ ಉತ್ತಮವಾಗಿತ್ತು. ಜೊತೆಗೆ ಕ್ಯಾಪ್ಟನ್ ಪಟ್ಟಕ್ಕೂ ರಶ್ಮಿ ಏರಿದ್ದರು.

  ಇಷ್ಟೆಲ್ಲಾ ಇದ್ದರೂ, ಮೂರನೇ ವಾರದ ಅಂತ್ಯಕ್ಕೆ 'ಬಿಗ್ ಬಾಸ್' ಮನೆಯಿಂದ ದುನಿಯಾ ರಶ್ಮಿ ಹೊರಬಂದಿದ್ದಾರೆ. ಇದು ರಶ್ಮಿಗೆ ಮಾತ್ರ ಅಲ್ಲ, ಕೆಲ ವೀಕ್ಷಕರಿಗೂ ಬೇಸರ ತಂದಿದೆ.

  ''ರಶ್ಮಿಗಿಂತ ಕಳಪೆ ಸ್ಪರ್ಧಿಗಳು 'ಬಿಗ್ ಬಾಸ್' ಮನೆಯಲ್ಲಿ ಇದ್ದಾರೆ. ಹರಟೆ ಹೊಡೆಯುವವರಿಗೆ, ಜಗಳ ಮಾಡುವವರಿಗೆ ಮಾತ್ರ 'ಬಿಗ್ ಬಾಸ್' ಮನೆಯಲ್ಲಿ ಜಾಗ. ರಶ್ಮಿ ಒಳ್ಳೆಯ ಹುಡುಗಿ. ಆಕೆ ಔಟ್ ಆಗಬಾರದಿತ್ತು'' ಎಂದೆಲ್ಲ ಪ್ರತಿ ದಿನ ತಪ್ಪದೆ 'ಬಿಗ್ ಬಾಸ್' ನೋಡುವ ವೀಕ್ಷಕರು ಕಲರ್ಸ್ ಕನ್ನಡ ಅಫೀಶಿಯಲ್ ಫೇಸ್ ಬುಕ್ ಪುಟದಲ್ಲೇ ಕಾಮೆಂಟ್ ಮಾಡುತ್ತಿದ್ದಾರೆ.

  ದುನಿಯಾ ರಶ್ಮಿ ಔಟ್ ಆಗಿದ್ದಕ್ಕೆ ವೀಕ್ಷಕರ ಪ್ರತಿಕ್ರಿಯೆ ಹೇಗಿದೆ ಅಂತೀರಾ.? ಹಾಗಾದ್ರೆ, ನೀವೇ ನೋಡಿ ಕೆಳಗಿರುವ ಫೋಟೋ ಸ್ಲೈಡ್ ಗಳಲ್ಲಿ...

  ಸರಿಯಾದ ಆಯ್ಕೆ ಅಲ್ಲ.!

  ಸರಿಯಾದ ಆಯ್ಕೆ ಅಲ್ಲ.!

  ''ಬಿಗ್ ಬಾಸ್' ಯೋಗ್ಯತೆ, ಗಿಮಿಕ್, ಮೋಸದಾಟ.. ಎಲ್ಲವೂ ವೀಕ್ಷಕರಿಗೆ ತಿಳಿದಿದೆ. 'ಬಿಗ್ ಬಾಸ್' ಮನೆಯೊಳಗೆ ಇರುವವರಲ್ಲಿ ರಶ್ಮಿ ಗಿಂತ ಕಳಪೆ ಆಗಿರುವವರು ತುಂಬಾ ಜನ ಇದ್ದಾರೆ. ಅಂಥದ್ರಲ್ಲಿ ರಶ್ಮಿಯನ್ನು ಔಟ್ ಮಾಡಿದ್ದು ಸರಿ ಅಲ್ಲ. ನಿಮಗಿಷ್ಟ ಬಂದವರನ್ನು ಸೇಫ್ ಮಾಡುವುದಾದರೆ, ಜನರಿಂದ ಯಾಕೆ ವೋಟ್ ಮಾಡಿಸುತ್ತೀರಾ.? ವೋಟಿಂಗ್ ನ ತೆಗೆದು ಹಾಕಿ. ನಿಮಗಿಷ್ಟ ಬಂದವರನ್ನು ಗೆಲ್ಲಿಸಿ'' ಎಂದು ವೀಕ್ಷಕರೊಬ್ಬರು ನೇರವಾಗಿ ಕಲರ್ಸ್ ಕನ್ನಡ ಮತ್ತು ಬಿಗ್ ಬಾಸ್ ಗೆ ಛೀಮಾರಿ ಹಾಕಿದ್ದಾರೆ.

  'ಬಿಗ್ ಬಾಸ್' ಮನೆಯಿಂದ ದುನಿಯಾ ರಶ್ಮಿ ಔಟ್, ರೇಡಿಯೋ ಜಾಕಿ ಪೃಥ್ವಿ ಇನ್.!'ಬಿಗ್ ಬಾಸ್' ಮನೆಯಿಂದ ದುನಿಯಾ ರಶ್ಮಿ ಔಟ್, ರೇಡಿಯೋ ಜಾಕಿ ಪೃಥ್ವಿ ಇನ್.!

  ಮೊದಲು ಇವರನ್ನೆಲ್ಲ ಆಚೆ ಕಳುಹಿಸಿ.!

  ಮೊದಲು ಇವರನ್ನೆಲ್ಲ ಆಚೆ ಕಳುಹಿಸಿ.!

  ''ಬರೀ ಹರಟೆ ಹೊಡೆಯುವವರಿಗೆ ಮತ್ತು ಜಗಳ ಮಾಡುವವರಿಗೆ ಮಾತ್ರ 'ಬಿಗ್ ಬಾಸ್' ಮನೆಯಲ್ಲಿ ಜಾಗ ಅಂದ್ರೆ ಟಾಸ್ಕ್ ಯಾಕೆ ಕೊಡ್ತೀರಾ.? ರಶ್ಮಿ ಹೋಗಿದ್ದು ಬೇಸರ ಆಯ್ತು. ಒಳ್ಳೆಯ ಸ್ಪರ್ಧಿಗಳಿಗೆ ಅಲ್ಲಿ ಜಾಗ ಇಲ್ಲ. ರಶ್ಮಿ ಬದಲು ಸುಜಾತ ಅವರನ್ನು ಹೊರಗೆ ಕಳುಹಿಸಬೇಕಿತ್ತು'' ಎನ್ನುವುದು ವೀಕ್ಷಕರ ಅಭಿಪ್ರಾಯವಾಗಿದೆ.

  'ಅವರು ನನ್ನನ್ನೂ ಬಿಟ್ಟಿಲ್ಲ': ರವಿ ಬೆಳಗೆರೆ ಬಗ್ಗೆ ದುನಿಯಾ ರಶ್ಮಿ ಹೇಳಿದ್ದೇನು.?'ಅವರು ನನ್ನನ್ನೂ ಬಿಟ್ಟಿಲ್ಲ': ರವಿ ಬೆಳಗೆರೆ ಬಗ್ಗೆ ದುನಿಯಾ ರಶ್ಮಿ ಹೇಳಿದ್ದೇನು.?

  ಪ್ರಬಲ ಸ್ಪರ್ಧಿ

  ಪ್ರಬಲ ಸ್ಪರ್ಧಿ

  ''ರಶ್ಮಿ ಪ್ರಬಲ ಸ್ಪರ್ಧಿ. ಆಕೆ ಔಟ್ ಆಗುವುದನ್ನು ನಿರೀಕ್ಷೆ ಮಾಡಿರಲಿಲ್ಲ. ಬಿಗ್ ಬಾಸ್ ಇನ್ನೂ ಕಠಿಣವಾದ ಚಟುವಟಿಕೆಗಳನ್ನು ಸ್ಪರ್ಧಿಗಳಿಗೆ ನೀಡಬೇಕು. ರಶ್ಮಿಯಲ್ಲಿದ್ದ ಡೀಸೆನ್ಸಿ ವರ್ಕ್ ಆಗಲಿಲ್ಲ. ಕ್ಯಾಮರಾಗಳು ಫೋಕಸ್ ಆಗಬೇಕು ಅಂದ್ರೆ ಏನಾದರೂ ಮಾಡುವ ಸ್ಪರ್ಧಿಗಳು ಅಲ್ಲಿ ಬೇಕು'' ಎಂದು ಕಾಮೆಂಟ್ ಮಾಡುತ್ತಿದ್ದಾರೆ ವೀಕ್ಷಕರು.

  'ದುನಿಯಾ' ಹಿಟ್ ಆದರೂ ದುಡ್ಡು ಬರ್ಲಿಲ್ಲ: ರಶ್ಮಿ ಗೋಳು ಕೇಳೋರು ಇರಲಿಲ್ಲ.!'ದುನಿಯಾ' ಹಿಟ್ ಆದರೂ ದುಡ್ಡು ಬರ್ಲಿಲ್ಲ: ರಶ್ಮಿ ಗೋಳು ಕೇಳೋರು ಇರಲಿಲ್ಲ.!

  ವೀಕ್ಷಕರಿಗೆ ನಿರಾಸೆ

  ವೀಕ್ಷಕರಿಗೆ ನಿರಾಸೆ

  ''ರಶ್ಮಿ ಔಟ್ ಆಗಿದ್ದು ನಿರಾಸೆ ಆಗಿದೆ. ಆಕೆ ಉತ್ತಮ ಸ್ಪರ್ಧಿ ಆಗಿದ್ದರು. 'ಬಿಗ್ ಬಾಸ್' ಮನೆಯಲ್ಲಿ ಇರಲು ಆಕೆಗೆ ಅರ್ಹತೆ ಇತ್ತು. ಸ್ಪರ್ಧಿಗಳ ಹಣೆಬರಹ ಸಂಕಲನಕಾರರ ಕೈಯಲ್ಲಿ ಇದೆ. ಆಕ್ಟೀವ್ ಆಗಿದ್ದರೂ, ಕೆಲವರನ್ನ ಸಂಚಿಕೆಯಲ್ಲಿ ಪ್ರೊಜೆಕ್ಟ್ ಮಾಡುವುದಿಲ್ಲ'' ಎಂದು ವೀಕ್ಷಕರೊಬ್ಬರು ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದಾರೆ.

  ಸಮಯ ವ್ಯರ್ಥ ಮಾಡಿದ ರಶ್ಮಿ

  ಸಮಯ ವ್ಯರ್ಥ ಮಾಡಿದ ರಶ್ಮಿ

  ಪ್ರಿಯಾಂಕಾ ರನ್ನ ಟಾರ್ಗೆಟ್ ಮಾಡುವುದರಲ್ಲೇ ರಶ್ಮಿ ಸಮಯ ವ್ಯರ್ಥ ಮಾಡಿಬಿಟ್ಟರು. ಪ್ರಿಯಾಂಕಾ ರನ್ನ ಟಾರ್ಗೆಟ್ ಮಾಡುವ ಬದಲು ಗೇಮ್ ಮೇಲೆ ಗಮನ ಹರಿಸಿದ್ರೆ, ಇವತ್ತು ರಶ್ಮಿ ಹೊರಗಡೆ ಬರುತ್ತಿರಲಿಲ್ಲ'' ಅಂತಿದ್ದಾರೆ ವೀಕ್ಷಕರು. ಒಟ್ನಲ್ಲಿ ರಶ್ಮಿ ಔಟ್ ಆಗಿರುವುದಕ್ಕೆ ಮಿಶ್ರ ಪ್ರತಿಕ್ರಿಯೆ ಲಭ್ಯವಾಗಿದೆ. ರಶ್ಮಿ ಎಲಿಮಿನೇಶನ್ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.. ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.

  English summary
  Bigg Boss Kannada 7: Week 3: Viewers have taken Colors Kannada official Facebook page to express their anger for eliminating Duniya Rashmi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X