ಹುಟ್ಟುಹಬ್ಬದಂದು ಕಣ್ಣೀರು ಹಾಕುತ್ತಾ 'ಬಿಗ್ ಬಾಸ್' ಮನೆಯಿಂದ ಆಚೆ ಬಂದ ಚೈತ್ರ ಕೋಟೂರು

Recommended Video

Bigg Boss Kannada 7 : Chaithra Kottur Eliminated.

'ಬಿಗ್ ಬಾಸ್ ಕನ್ನಡ-7' ಕಾರ್ಯಕ್ರಮದಲ್ಲಿ ನಾಲ್ಕನೇ ವಾರದ ಅಂತ್ಯಕ್ಕೆ ನಟಿ, ಬರಹಗಾರ್ತಿ ಚೈತ್ರ ಕೋಟೂರುಗೆ ಗೇಟ್ ಪಾಸ್ ಸಿಕ್ಕಿದೆ. ಹಾಗ್ನೋಡಿದ್ರೆ, ಚೈತ್ರ ಕೋಟೂರು ಜನ್ಮದಿನದ ಸಂಭ್ರಮದಲ್ಲಿದ್ದರು. ಬರ್ತಡೇ ಮೂಡ್ ನಲ್ಲಿ ಖುಷಿ ಖುಷಿಯಾಗಿ ಇರುವಾಗಲೇ ಚೈತ್ರ ಕೋಟೂರುಗೆ ಎಲಿಮಿನೇಷನ್ ಶಾಕ್ ಲಭಿಸಿದೆ.

ಮೊದಲ ಎರಡು ವಾರಗಳ ಕಾಲ 'ಬಿಗ್ ಬಾಸ್' ಮನೆಯೊಳಗೆ ಚೈತ್ರ ಕೋಟೂರು ಹೆಚ್ಚು ಸೌಂಡ್ ಮಾಡಿದ್ದರು. ನಾಮಿನೇಟ್ ಆದಾಗ ಮಾತ್ರ 'ಡ್ರಾಮಾ' ಮಾಡುವ ಚೈತ್ರ ಕೋಟೂರು ಅವರ ಗೇಮ್ ಪ್ಲಾನ್ ನ ಶೈನ್ ಶೆಟ್ಟಿ ಡೀಕೋಡ್ ಮಾಡಿದ್ದರು.

ಅಂದ್ಹಾಗೆ, ಚೈತ್ರ ಕೋಟೂರು ಜೊತೆಗೆ ಈ ವಾರ ಡೇಂಜರ್ ಝೋನ್ ನಲ್ಲಿದ್ದವರು ರಾಜು ತಾಳಿಕೋಟೆ, ಶೈನ್ ಶೆಟ್ಟಿ, ಪ್ರಿಯಾಂಕಾ, ದೀಪಿಕಾ ದಾಸ್, ಚಂದನ್ ಆಚಾರ್ ಮತ್ತು ಭೂಮಿ ಶೆಟ್ಟಿ. ಇತರರಿಗಿಂತ ಕಮ್ಮಿ ವೋಟ್ಸ್ ಪಡೆದುಕೊಂಡ ಚೈತ್ರ ಕೋಟೂರು ಔಟ್ ಆಗಿದ್ದಾರೆ.

bigg-boss-kannada-7-week-4-chaitra-kotur-eliminated

''ಈ ಮನೆಯಲ್ಲಿ ನನ್ನನ್ನ ಯಾರೂ ಅರ್ಥ ಮಾಡಿಕೊಳ್ಳಲಿಲ್ಲ'' ಎಂದು ಹೇಳುತ್ತ ಕಣ್ಣೀರು ಸುರಿಸುತ್ತಾ ಚೈತ್ರ ಕೋಟೂರು ಹೊರಗೆ ಬಂದಿದ್ದಾರೆ. ತೆರೆ ಮೇಲೆ ಮಿಂಚುವ ಆಫರ್ ಗಳು ಬಂದಿದ್ದರೂ, ಅದನ್ನ ತಿರಸ್ಕರಿಸಿ ಬರವಣಿಗೆ ಬಗ್ಗೆ ಹೆಚ್ಚು ಗಮನ ಹರಿಸಿದ್ದ ಚೈತ್ರ ಕೋಟೂರು ಅದೃಷ್ಟ ಪರೀಕ್ಷೆಗಾಗಿ 'ಬಿಗ್ ಬಾಸ್' ಮನೆಯೊಳಗೆ ಬಂದಿದ್ದರು. ಆದರೆ ನಾಲ್ಕೇ ವಾರಕ್ಕೆ ಚೈತ್ರ ಕೋಟೂರು ಆಟ ಅಂತ್ಯಗೊಂಡಿದೆ.

More from Filmibeat

English summary
Bigg Boss Kannada 7: Week 4: Chaitra Kotur eliminated.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X