For Quick Alerts
  ALLOW NOTIFICATIONS  
  For Daily Alerts

  ಬೆಂಕಿಗೆ ಬಿತ್ತು ಫೋಟೋಗಳು: 'ಬಿಗ್ ಬಾಸ್' ಮನೆಯಲ್ಲಿನ್ನೂ ಯುದ್ಧ ಶುರು.!

  |

  'ಬಿಗ್ ಬಾಸ್' ಮನೆ ಅಂದ್ಮೇಲೆ ಅಲ್ಲಿ ಪ್ರತಿ ವಾರ ನಾಮಿನೇಶನ್ ಪ್ರಕ್ರಿಯೆ ನಡೆಯಲೇಬೇಕು, ಪ್ರತಿ ವಾರಾಂತ್ಯದಲ್ಲಿ ಯಾರಾದರೂ ಒಬ್ಬರು ಹೊರಗೆ ಹೋಗಲೇಬೇಕು. ಸಾಮಾನ್ಯವಾಗಿ ನಾಮಿನೇಶನ್ ಪ್ರಕ್ರಿಯೆ ಗುಪ್ತವಾಗಿ ನಡೆಯುತ್ತೆ. ಕನ್ಫೆಶನ್ ರೂಮ್ ಒಳಗೆ ಹೋಗಿ 'ಬಿಗ್ ಬಾಸ್' ಮುಂದೆ ಕೂತು ಇತರೆ ಸ್ಪರ್ಧಿಗಳನ್ನು ಎಲಿಮಿನೇಶನ್ ಗೆ ನಾಮಿನೇಟ್ ಮಾಡಬೇಕಾಗುತ್ತೆ. ಇದೆಲ್ಲ ಸೀಕ್ರೆಟ್ ಆಗಿ ಇರುವಷ್ಟು ಹೊತ್ತು 'ಬಿಗ್ ಬಾಸ್' ಮನೆಯಲ್ಲಿ ಎಲ್ಲವೂ ಸರಿ ಇರುತ್ತೆ.

  ಒಮ್ಮೆ ಓಪನ್ ನಾಮಿನೇಶನ್ ಆದರೆ ಸಾಕು.. ಸ್ಪರ್ಧಿಗಳ ನಿಜವಾದ ಬಂಡವಾಳ ಬಯಲಿಗೆ ಬರುತ್ತೆ. ಯಾರು ಯಾರಿಗೆ ನಿಜವಾದ ಸ್ನೇಹಿತರು, ಯಾರು ಯಾರ ದುಶ್ಮನ್ ಎಂಬ ಕ್ಲಾರಿಟಿ ಸಿಗುತ್ತೆ. ಅಲ್ಲಿಯವರೆಗೂ ಬೂದಿ ಮುಚ್ಚಿದ ಕೆಂಡದಂತೆ ಇದ್ದ 'ಬಿಗ್ ಬಾಸ್' ಮನೆಯೊಳಗೆ ಬೆಂಕಿಯ ಕಿಡಿ ಹೊತ್ತಿಕೊಳ್ಳುತ್ತೆ.

  ನಿನ್ನೆ 'ಬಿಗ್ ಬಾಸ್' ಮನೆಯೊಳಗೆ ಆಗಿದ್ದು ಇದೇ.! ಮೂರು ವಾರ ಗುಟ್ಟು ಗುಟ್ಟಾಗಿ ನಡೆದ ನಾಮಿನೇಶನ್ ಪ್ರಕ್ರಿಯೆ ನಿನ್ನೆ ಓಪನ್ ಆಗಿ ನೆರವೇರಿತು. ಪರಿಣಾಮ, ಯಾರು ಯಾರ ಟಾರ್ಗೆಟ್ ಅನ್ನೋದು ಸ್ಪಷ್ಟವಾಯ್ತು.

  'ಬಿಗ್ ಬಾಸ್' ಹಾಕಿದ್ದ ನಾಮಿನೇಶನ್ ಬೆಂಕಿಯೊಳಗೆ ಫೋಟೋಗಳು ಬೀಳುತ್ತಿದ್ದಂತೆಯೇ, ಯುದ್ಧ ಶುರುವಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿತ್ತು. ಹಾಗಾದ್ರೆ, ಈ ವಾರ ಡೇಂಜರ್ ಝೋನ್ ನಲ್ಲಿ ಇರುವವರು ಯಾರು.? ತಿಳಿದುಕೊಳ್ಳುವ ಆಸಕ್ತಿ ಇದ್ದರೆ, ಫೋಟೋ ಸ್ಲೈಡ್ ಗಳತ್ತ ಕಣ್ಣಾಡಿಸಿ...

  ಸೇಫ್ ಆಗಿದ್ದವರಿವರು...

  ಸೇಫ್ ಆಗಿದ್ದವರಿವರು...

  'ಬಿಗ್ ಬಾಸ್' ಕೊಟ್ಟಿದ್ದ ಚಟುವಟಿಕೆಯಲ್ಲಿ ವಿಜೇತರಾಗಿ ಹರೀಶ್ ರಾಜ್ ಕ್ಯಾಪ್ಟನ್ ಆದರು. ಹೀಗಾಗಿ ನಾಮಿನೇಶನ್ ಪ್ರಕ್ರಿಯೆಯಲ್ಲಿ ಹರೀಶ್ ರಾಜ್ ಸೇಫ್ ಆಗಿದ್ದರು. ಇನ್ನೂ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ 'ಬಿಗ್ ಬಾಸ್' ಮನೆಗೆ ಕಾಲಿಟ್ಟ ರೇಡಿಯೋ ಜಾಕಿ ಪೃಥ್ವಿಯನ್ನೂ ಯಾರೂ ನಾಮಿನೇಟ್ ಮಾಡುವ ಹಾಗೆ ಇರಲಿಲ್ಲ. ಹಾಗೇ, 'ಬಿಗ್ ಬಾಸ್' ಮನೆಯಿಂದ ಗೇಟ್ ಪಾಸ್ ಪಡೆದಾಗ, ತಮಗೆ ಸಿಕ್ಕ ಅಧಿಕಾರವನ್ನು ಉಪಯೋಗಿಸಿಕೊಂಡ ದುನಿಯಾ ರಶ್ಮಿ.. ಪ್ರಿಯಾಂಕಾ ರನ್ನ ನೇರವಾಗಿ ನಾಮಿನೇಟ್ ಮಾಡಿದ್ದರು. ಹೀಗಾಗಿ, ಪ್ರಿಯಾಂಕಾ ಹೆಸರನ್ನು ಇಲ್ಲಿ ಬೇರೆ ಯಾರೂ ತೆಗೆದುಕೊಳ್ಳುವ ಹಾಗೆ ಇರಲಿಲ್ಲ.

  ರಶ್ಮಿಗಿಂತ ಕಳಪೆ ಸ್ಪರ್ಧಿಗಳು 'ಬಿಗ್ ಬಾಸ್' ಮನೆಯಲ್ಲಿ ಇದ್ದಾರೆ.!ರಶ್ಮಿಗಿಂತ ಕಳಪೆ ಸ್ಪರ್ಧಿಗಳು 'ಬಿಗ್ ಬಾಸ್' ಮನೆಯಲ್ಲಿ ಇದ್ದಾರೆ.!

  ಮತ್ತೆ ಟಾರ್ಗೆಟ್ ಆದ ಚೈತ್ರ ಕೋಟೂರು

  ಮತ್ತೆ ಟಾರ್ಗೆಟ್ ಆದ ಚೈತ್ರ ಕೋಟೂರು

  ಕಳೆದ ವಾರ ನಾಮಿನೇಶನ್ ನಿಂದ ಸೇಫ್ ಆಗಿದ್ದ ಚೈತ್ರ ಕೋಟೂರು ಈ ವಾರ ಮತ್ತೆ ಟಾರ್ಗೆಟ್ ಆದರು. 'ಬಿಗ್ ಬಾಸ್' ಮನೆಯೊಳಗೆ ಚೈತ್ರ ಕೋಟೂರು ಒಂಥರಾ ಈಸಿ ಟಾರ್ಗೆಟ್ ಇದ್ದ ಹಾಗೆ. ಓಪನ್ ಆಗಿ ಹೆಸರುಗಳನ್ನು ತೆಗೆದುಕೊಳ್ಳುವ ಸಂದರ್ಭ ಎದುರಾದಾಗ ಕೆಲವರು ವಿನಾಕಾರಣ ಚೈತ್ರ ಕೋಟೂರು ಕಡೆ ಬೆಟ್ಟು ಮಾಡಿ ತೋರಿಸುತ್ತಾರೆ. ನಿನ್ನೆ ನಡೆದ ನಾಮಿನೇಶನ್ ಪ್ರಕ್ರಿಯೆಯಲ್ಲೂ ಹೀಗೇ ಆಯ್ತು. ವಾಸುಕಿ ವೈಭವ್, ಶೈನ್ ಶೆಟ್ಟಿ, ಜೈಜಗದೀಶ್, ದೀಪಿಕಾ ದಾಸ್, ಚಂದನಾ ಮತ್ತು ಚಂದನ್ ಆಚಾರ್ ಚೈತ್ರ ಕೋಟೂರು ರನ್ನ ನಾಮಿನೇಟ್ ಮಾಡಿಬಿಟ್ಟರು. ಸೀಕ್ರೆಟ್ ಆಗಿ ನಾಮಿನೇಶನ್ ಪ್ರಕ್ರಿಯೆ ನಡೆದಿದ್ದರೆ, ಚೈತ್ರ ಕೋಟೂರು ಡೇಂಜರ್ ಝೋನ್ ಗೆ ಬರ್ತಿದ್ರೋ, ಇಲ್ವೋ.?!

  ಪ್ರಿಯಾಂಕಾ 'ನೆಗೆಟಿವ್' ಇಮೇಜ್ ಬದಲಿಸಿದ ಒಂದೇ ಒಂದು ಟಾಸ್ಕ್.!ಪ್ರಿಯಾಂಕಾ 'ನೆಗೆಟಿವ್' ಇಮೇಜ್ ಬದಲಿಸಿದ ಒಂದೇ ಒಂದು ಟಾಸ್ಕ್.!

  ಬೆಂಕಿಯಲ್ಲಿ ಬೆಂದ ಶೈನ್ ಶೆಟ್ಟಿ ಫೋಟೋ

  ಬೆಂಕಿಯಲ್ಲಿ ಬೆಂದ ಶೈನ್ ಶೆಟ್ಟಿ ಫೋಟೋ

  ಕಳೆದ ವಾರದ 'ಬಿಗ್ ಬಾಸ್ ದರ್ಬಾರ್' ಟಾಸ್ಕ್ ನಲ್ಲಿ ಶೈನ್ ಶೆಟ್ಟಿ ದಬ್ಬಾಳಿಕೆ ಜಾಸ್ತಿ ಇತ್ತು. ಇನ್ನೂ ಲಾಟೀನ್ ಹಿಡಿಯುವ ಚಟುವಟಿಕೆಯಲ್ಲಿ ಹೆಚ್ಚು ಗಮನ ಸೆಳೆಯದ ಶೈನ್ ಶೆಟ್ಟಿ ಗ್ರೂಪಿಸಂ ಮಾಡ್ತಾರೆ ಅಂತೆಲ್ಲಾ ಕಾರಣಗಳನ್ನು ನೀಡಿ ಕುರಿ ಪ್ರತಾಪ್, ಪ್ರಿಯಾಂಕಾ, ಕಿಶನ್, ರಾಜು ತಾಳಿಕೋಟೆ, ಜೈಜಗದೀಶ್, ಚಂದನ್ ಆಚಾರ್ ಮತ್ತು ಚೈತ್ರ ಕೋಟೂರು ನಾಮಿನೇಟ್ ಮಾಡಿದರು.

  ಅತಿ ಬುದ್ಧಿವಂತಿಕೆ ಪ್ರದರ್ಶಿಸಿದ ಶೈನ್ ವಿರುದ್ಧ ಗುಟುರು ಹಾಕಿದ ಸುದೀಪ್.!ಅತಿ ಬುದ್ಧಿವಂತಿಕೆ ಪ್ರದರ್ಶಿಸಿದ ಶೈನ್ ವಿರುದ್ಧ ಗುಟುರು ಹಾಕಿದ ಸುದೀಪ್.!

  'ಕಹಿ'ಯಾದ ಚಾಕಲೇಟ್

  'ಕಹಿ'ಯಾದ ಚಾಕಲೇಟ್

  ಭೂಮಿ ಶೆಟ್ಟಿ ಪದೇ ಪದೇ ಚಾಕಲೇಟ್ ಕದ್ದು ತಿಂದಿದ್ದಕ್ಕೆ ಲಕ್ಷುರಿ ಬಜೆಟ್ ಪಾಯಿಂಟ್ಸ್ ಕಟ್ ಆಯ್ತು. ಇದೇ ಕಾರಣಕ್ಕೆ ಮನೆಯವರೆಲ್ಲರೂ ಸೇರಿ ಭೂಮಿ ಶೆಟ್ಟಿಯನ್ನ ಜೈಲಿಗೆ ಕಳುಹಿಸಿದರು. ಇಷ್ಟಾದರೂ, ಕೆಲವರಿಗೆ ಸಮಾಧಾನ ಆಗಿಲ್ಲ. ಮತ್ತೊಂದು ಬಾರಿಗೆ ಅದೇ ಚಾಕಲೇಟ್ ಕಾರಣವನ್ನ ಪ್ರಸ್ತಾಪ ಮಾಡಿ ದೀಪಿಕಾ ದಾಸ್, ಕಿಶನ್ ಮತ್ತು ಪೃಥ್ವಿ.. ಭೂಮಿ ಶೆಟ್ಟಿಯನ್ನ ನಾಮಿನೇಟ್ ಮಾಡಿದರು.

  'ಬಿಗ್ ಬಾಸ್' ಬಗ್ಗೆ ಜೈಜಗದೀಶ್ ಬಹಿರಂಗ ಅಸಮಾಧಾನ: ಸುದೀಪ್ ಏನಂದರು.?'ಬಿಗ್ ಬಾಸ್' ಬಗ್ಗೆ ಜೈಜಗದೀಶ್ ಬಹಿರಂಗ ಅಸಮಾಧಾನ: ಸುದೀಪ್ ಏನಂದರು.?

  ರಾಜು ತಾಳಿಕೋಟೆಗೆ ಮನೆಗೆ ಹೋಗುವಾಸೆ

  ರಾಜು ತಾಳಿಕೋಟೆಗೆ ಮನೆಗೆ ಹೋಗುವಾಸೆ

  ರಾಜು ತಾಳಿಕೋಟೆ ಅವರಿಗೆ ಮನೆಗೆ ಹೋಗುವ ಆಸೆ ಇದೆ. ಅವರಿಗೆ ಸ್ಪರ್ಧಾತ್ಮಕ ಮನೋಭಾವ ಇಲ್ಲ ಅಂತ್ಹೇಳಿ ವಾಸುಕಿ ವೈಭವ್, ಶೈನ್ ಶೆಟ್ಟಿ ಮತ್ತು ಚಂದನಾ ನಾಮಿನೇಟ್ ಮಾಡಿದರು. ರಾಜು ತಾಳಿಕೋಟೆಯನ್ನ ಮನೆಗೆ ಕಳುಹಿಸುವುದೋ, ಬೇಡ್ವೋ ಎಂಬುದನ್ನ ನೀವೇ ನಿರ್ಧರಿಸಿ..

  ಅಷ್ಟಾಗಿ ಕಾಣದ ದೀಪಿಕಾ ದಾಸ್

  ಅಷ್ಟಾಗಿ ಕಾಣದ ದೀಪಿಕಾ ದಾಸ್

  'ಬಿಗ್ ಬಾಸ್' ಮನೆಯೊಳಗೆ ದೀಪಿಕಾ ದಾಸ್ ಇದ್ದರೂ ಅಷ್ಟಾಗಿ ಕಾಣುವುದಿಲ್ಲ. ಕಾರಣ, ಆಕೆ ಎಲ್ಲದರಲ್ಲೂ ಅಷ್ಟೊಂದು ಗುರುತಿಸಿಕೊಳ್ಳುತ್ತಿಲ್ಲ. ಹೆಚ್ಚು ಭಾಗವಹಿಸುವುದಿಲ್ಲ ಎಂಬ ಕಾರಣಕ್ಕೆ ಪೃಥ್ವಿ, ಚೈತ್ರ ಕೋಟೂರು ಮತ್ತು ಭೂಮಿ ಶೆಟ್ಟಿ... ದೀಪಿಕಾ ದಾಸ್ ರನ್ನ ನಾಮಿನೇಟ್ ಮಾಡಿದರು.

  ಅಷ್ಟರಲ್ಲೇ ಜಸ್ಟ್ ಮಿಸ್ ಆದವರು.!

  ಅಷ್ಟರಲ್ಲೇ ಜಸ್ಟ್ ಮಿಸ್ ಆದವರು.!

  ವಾಸುಕಿ ವೈಭವ್ ಮತ್ತು ಕಿಶನ್ ಗೆ ತಲಾ ಎರಡು ವೋಟ್ ಗಳು ಬಿದ್ದಿದ್ದವು. ಇನ್ನೊಂದು ವೋಟ್ ಎಕ್ಸ್ ಟ್ರಾ ಬಿದ್ದಿದ್ದರೂ, ಇಬ್ಬರೂ ನಾಮಿನೇಟ್ ಆಗುತ್ತಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಇಬ್ಬರೂ ಬಚಾವ್ ಆಗಿದ್ದಾರೆ.

  ಕ್ಯಾಪ್ಟನ್ ಆಯ್ಕೆ

  ಕ್ಯಾಪ್ಟನ್ ಆಯ್ಕೆ

  ಡಬಲ್ ಗೇಮ್ ಆಡುವ ಕಾರಣಕ್ಕೆ ಮತ್ತು ಕಿರಿಕಿರಿ ಕೊಡುವುದರಿಂದ ಚಂದನ್ ಆಚಾರ್ ಗೆ ಅದಾಗಲೇ ಎರಡು ವೋಟ್ ಬಿದ್ದಿತ್ತು. ಅಷ್ಟರಲ್ಲೇ ಜಸ್ಟ್ ಮಿಸ್ ಅಂತ ಚಂದನ್ ಅಂದುಕೊಳ್ಳುವಾಗಲೇ, ಕ್ಯಾಪ್ಟನ್ ಹರೀಶ್ ರಾಜ್.. ಚಂದನ್ ಆಚಾರ್ ರನ್ನ ನೇರವಾಗಿ ನಾಮಿನೇಟ್ ಮಾಡಿಬಿಟ್ಟರು. ಹೀಗಾಗಿ, ಈ ವಾರವೂ ಚಂದನ್ ಆಚಾರ್ ಗೆ ಎಲಿಮಿನೇಶನ್ ಭೀತಿ ಇದ್ದೇ ಇದೆ.

  ಯಾರು ಔಟ್ ಆಗಬೇಕು.?

  ಯಾರು ಔಟ್ ಆಗಬೇಕು.?

  ಶೈನ್ ಶೆಟ್ಟಿ, ಚೈತ್ರ ಕೋಟೂರು, ರಾಜು ತಾಳಿಕೋಟೆ, ಭೂಮಿ ಶೆಟ್ಟಿ, ದೀಪಿಕಾ ದಾಸ್, ಪ್ರಿಯಾಂಕಾ ಮತ್ತು ಚಂದನ್ ಆಚಾರ್... ಈ ಏಳು ಮಂದಿ ಪೈಕಿ ಯಾರು ಔಟ್ ಆಗಬೇಕು.? ನಿಮ್ಮ ಮತ ಯಾರಿಗೆ.? ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ.. ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.

  English summary
  Bigg Boss Kannada 7: Week 4 - Chaitra Kottur, Priyanka, Chandan Aachar, Deepika Das, Raju Talikote, Shine Shetty and Bhoomi Shetty gets nominated in fourth week.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X