For Quick Alerts
  ALLOW NOTIFICATIONS  
  For Daily Alerts

  ಒಳಗೊಳಗೆ ಶುರುವಾಗಿದ್ಯಾ ಪ್ರೇಮ್ ಕಹಾನಿ.? ಕಿಚ್ಚನ ಮಾತಿನ ಅರ್ಥವೇನು.?

  |

  'ಬಿಗ್ ಬಾಸ್' ಮನೆಯೊಳಗೆ ಲವ್ ಸ್ಟೋರಿಗಳು ಶುರುವಾಗುವುದು ಹೊಸದೇನಲ್ಲ. ಈಗಾಗಲೇ ಆರು ಸೀಸನ್ ಗಳಲ್ಲಿ ಹಲವು ಪ್ರೇಮ್ ಕಹಾನಿಗಳನ್ನು ಕನ್ನಡ ಕಿರುತೆರೆ ವೀಕ್ಷಕರು ಕಣ್ಣು ತುಂಬಿಕೊಂಡಿದ್ದಾರೆ. ಹಾಗ್ನೋಡಿದ್ರೆ, ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ನಡುವೆ ಪ್ರೀತಿ ಮೊಳಕೆಯೊಡೆದಿದ್ದು ಇದೇ 'ಬಿಗ್ ಬಾಸ್' ಮನೆಯೊಳಗೆ ಅನ್ನೋದು ನಿಮಗೆ ನೆನಪಿರಲಿ.

  ಅಸಲಿಗೆ, 'ಬಿಗ್ ಬಾಸ್' ಮನೆಯೊಳಗಿನ ಪ್ರೇಮ ಕಹಾನಿಗಳ ಬಗ್ಗೆ ನಾವು ಇಷ್ಟೆಲ್ಲಾ ಪೀಠಿಕೆ ಹಾಕುತ್ತಿರುವುದಕ್ಕೆ ಒಂದು ಕಾರಣ ಇದೆ. ಅದೇನಪ್ಪಾ ಅಂದ್ರೆ, ಈ ಸೀಸನ್ ನಲ್ಲೂ... ಅಂದ್ರೆ 'ಬಿಗ್ ಬಾಸ್ ಕನ್ನಡ-7' ನಲ್ಲೂ ಮಿನಿಮಂ ಒಂದು ಲವ್ ಸ್ಟೋರಿ ಶುರುವಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಹಾಗಂತ ನಾವು ಮಾತ್ರ ಊಹೆ ಮಾಡುತ್ತಿಲ್ಲ. ಕಿಚ್ಚ ಸುದೀಪ್ ಬಾಯಿಂದಲೂ ಇದೇ ಮಾತು ಹೊರಬಂದಿದೆ.

  ಸದ್ಯ 'ಬಿಗ್ ಬಾಸ್' ಮನೆಯೊಳಗಿರುವ ಎಲ್ಲಾ ಸ್ಪರ್ಧಿಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಕೆಲವರ ಮಧ್ಯೆ ಸಂಥಿಂಗ್ ಸಂಥಿಂಗ್ ನಡೆಯುತ್ತಿರುವ ಹಾಗಿದೆ. ಎಲ್ಲದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ, ಓದಿರಿ...

  ವಾಸುಕಿ ವೈಭವ್-ಭೂಮಿ ಮಧ್ಯೆ ಏನಿದೆ.?

  ವಾಸುಕಿ ವೈಭವ್-ಭೂಮಿ ಮಧ್ಯೆ ಏನಿದೆ.?

  'ಬಿಗ್ ಬಾಸ್ ದರ್ಬಾರ್' ಚಟುವಟಿಕೆಯಲ್ಲಿ ತಾವು ಮದುವೆ ಆಗುವ ಹುಡುಗಿ ಹೇಗಿರಬೇಕು ಎಂಬುದನ್ನ ವಾಸುಕಿ ವೈಭವ್ ವಿವರಿಸಿದ್ದರು. ಆ ವಿವರಣೆಯಲ್ಲಿದ್ದ ಎಲ್ಲಾ ಕ್ವಾಲಿಟಿಗಳು ಭೂಮಿ ಶೆಟ್ಟಿಯನ್ನೇ ಬೆಟ್ಟು ಮಾಡಿ ತೋರಿಸುತ್ತಿತ್ತು. ಅದು ಟಾಸ್ಕ್ ಗಾಗಿ ಮಾತ್ರ ಅಂತ ವೀಕ್ಷಕರು ಭಾವಿಸಿದರೂ.. ವಾಸುಕಿ ವೈಭವ್ ಮತ್ತು ಭೂಮಿ ಒಬ್ಬರನ್ನೊಬ್ಬರು ಒಳಗೊಳಗೆ ಇಷ್ಟ ಪಡುತ್ತಿರಬಹುದು ಎಂಬ ಅನುಮಾನ ಕಿಶನ್ ಗೆ ಬಂದಿದೆ. ಹಾಗಾದ್ರೆ, ಭೂಮಿ ಶೆಟ್ಟಿ ಮೇಲೆ ವಾಸುಕಿ ವೈಭವ್ ಗೆ ಮನಸ್ಸಾಗಿದ್ಯಾ.? ಸದ್ಯಕ್ಕೆ ಇಬ್ಬರೂ ''ಹಾಗೇನಿಲ್ಲ'' ಅಂತಿದ್ದಾರೆ.

  ಓಹ್.. ವಾಸುಕಿ ವೈಭವ್ ಮದುವೆ ಆಗುವ ಹುಡುಗಿ ಭೂಮಿ ಶೆಟ್ಟಿ ತರಹ ಇರ್ಬೇಕು.!ಓಹ್.. ವಾಸುಕಿ ವೈಭವ್ ಮದುವೆ ಆಗುವ ಹುಡುಗಿ ಭೂಮಿ ಶೆಟ್ಟಿ ತರಹ ಇರ್ಬೇಕು.!

  ಮದುವೆ ಮಾಡಿ ಮುಗಿಸಿದರು.!

  ಮದುವೆ ಮಾಡಿ ಮುಗಿಸಿದರು.!

  'ಬಿಗ್ ಬಾಸ್' ದರ್ಬಾರ್ ಟಾಸ್ಕ್ ನಲ್ಲಿ ವಾಸುಕಿ ವೈಭವ್ ಮತ್ತು ಭೂಮಿ ಶೆಟ್ಟಿಗೆ ಮದುವೆ ಮಾಡಲಾಯಿತು. ಟಾಸ್ಕ್ ಅಂತ ಇಬ್ಬರೂ ಸ್ಫೋರ್ಟಿವ್ ಆಗಿ ತೆಗೆದುಕೊಂಡು ಮದುವೆಯಲ್ಲಿ ಪಾಲ್ಗೊಂಡರು. ಇದರಿಂದ 'ಬಿಗ್ ಬಾಸ್' ಮನೆಯಲ್ಲಿ ಇಬ್ಬರಿಗೂ ಕಾಲೆಳೆಯುವವರ ಸಂಖ್ಯೆ ಜಾಸ್ತಿ ಆಗಿದೆ.

  ಆಪಲ್ ಆಯ್ತು.. ಈಗ ಲಾಟೀನ್ ಗಾಗಿ ಗೊಂದಲ, ಗದ್ದಲ, ಗುಸುಗುಸು.!ಆಪಲ್ ಆಯ್ತು.. ಈಗ ಲಾಟೀನ್ ಗಾಗಿ ಗೊಂದಲ, ಗದ್ದಲ, ಗುಸುಗುಸು.!

  ವಾಸುಕಿ ವೈಭವ್-ಚಂದನಾ ಮಧ್ಯೆ ಏನುಂಟು.?

  ವಾಸುಕಿ ವೈಭವ್-ಚಂದನಾ ಮಧ್ಯೆ ಏನುಂಟು.?

  ವಾಸುಕಿ ವೈಭವ್ ಮತ್ತು ಚಂದನಾ ಒಳ್ಳೆಯ ಫ್ರೆಂಡ್ಸ್. ಚಂದನಾಗೆ ಹಲವು ಬಾರಿ ವಾಸುಕಿ ವೈಭವ್ ಸಹಾಯ ಮಾಡಿದ್ದಾರೆ. ಇನ್ನೂ ಚಂದನಾ ಕೂಡ ವಾಸುಕಿ ವೈಭವ್ ಗೆ ಆಗಾಗ ಊಟ ಮಾಡಿಸಿದ್ದಾರೆ. ವಾಸುಕಿ ವೈಭವ್ ಬೇರೆಯವರ ಜೊತೆ ಮಾತನಾಡಿದಾಗ ಚಂದನಾ ಬೇಸರ ಮಾಡಿಕೊಳ್ಳುತ್ತಾರೆ ಅಂತ ಕಿಶನ್ ಹೇಳಿದ್ದಾರೆ. ಹಾಗಾದ್ರೆ, ವಾಸುಕಿ ವೈಭವ್ ಮತ್ತು ಚಂದನಾ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದ್ಯಾ.?

  ಕುಂದಾಪುರದ ಮೀನು ರಾಯಲ್ ಶೆಟ್ರನ್ನ ಮೆಚ್ಚಿದ ಕಿಚ್ಚ ಸುದೀಪ್.!ಕುಂದಾಪುರದ ಮೀನು ರಾಯಲ್ ಶೆಟ್ರನ್ನ ಮೆಚ್ಚಿದ ಕಿಚ್ಚ ಸುದೀಪ್.!

  ಚಂದನಾ ಕಂಡ್ರೆ ಕಿಶನ್ ಗೆ ಇಷ್ಟ.?

  ಚಂದನಾ ಕಂಡ್ರೆ ಕಿಶನ್ ಗೆ ಇಷ್ಟ.?

  ಚಂದನಾ ಕಂಡ್ರೆ ಇಷ್ಟ ಎಂಬುದನ್ನ ಕಿಚ್ಚ ಸುದೀಪ್ ಮುಂದೆಯೇ ಕಿಶನ್ ಒಪ್ಪಿಕೊಂಡಿದ್ದಾರೆ. ಆದರೆ ಕಿಶನ್ ಮೇಲೆ ಚಂದನಾಗೆ ಅಷ್ಟು ಇಂಟ್ರೆಸ್ಟ್ ಇದ್ದ ಹಾಗಿಲ್ಲ. ಮುಂದೆ ಕಿಶನ್ ಮೇಲೆ ಚಂದನಾಗೆ ಪ್ರೀತಿ ಮೂಡಿದರೂ ಅಚ್ಚರಿ ಪಡಬೇಕಿಲ್ಲ.

  ಎರಡು ವಾರ: 'ಬಿಗ್ ಬಾಸ್' ಮನೆಯೊಳಗೆ ಏನ್ ನಡೀತಿದೆ.? ವೀಕ್ಷಕರಿಗೆ ಅರ್ಥ ಆಗ್ತಿಲ್ಲ.!ಎರಡು ವಾರ: 'ಬಿಗ್ ಬಾಸ್' ಮನೆಯೊಳಗೆ ಏನ್ ನಡೀತಿದೆ.? ವೀಕ್ಷಕರಿಗೆ ಅರ್ಥ ಆಗ್ತಿಲ್ಲ.!

  ಚಂದನಾ-ಶೈನ್ ಶೆಟ್ಟಿ ಮಧ್ಯೆ ಏನು ನಡೆಯುತ್ತಿದೆ.?

  ಚಂದನಾ-ಶೈನ್ ಶೆಟ್ಟಿ ಮಧ್ಯೆ ಏನು ನಡೆಯುತ್ತಿದೆ.?

  ಶೈನ್ ಶೆಟ್ಟಿ ಇದ್ದ ಕಡೆ ಚಂದನಾ ಇರುತ್ತಾರೆ. ಚಂದನಾ ಇದ್ದ ಕಡೆ ಶೈನ್ ಶೆಟ್ಟಿ ಇರುತ್ತಾರೆ.. ಇಬ್ಬರ ಮಧ್ಯೆ ಏನೋ ನಡೆಯುತ್ತಿದೆ ಎಂಬ ಡೌಟ್ ಸುಜಾತಗೆ ಬಂದಿದೆ. ಹೀಗಾಗಿ ಈ ಬಾರಿಯ 'ಬಿಗ್ ಬಾಸ್' ಮುಗಿಯುವುದರೊಳಗೆ ಒಂದು ಲವ್ ಸ್ಟೋರಿ ಸ್ಟಾರ್ಟ್ ಆಗಬಹುದು ಅಂತಾರೆ ಸುಜಾತ.

  ಸುದೀಪ್ ಹೇಳಿದ್ದೂ ಅದನ್ನೇ.!

  ಸುದೀಪ್ ಹೇಳಿದ್ದೂ ಅದನ್ನೇ.!

  ''ಈ ಸೀಸನ್ ಮುಗಿಯುವ ಹೊತ್ತಿಗೆ ಒಂದು ಲವ್ ಸ್ಟೋರಿ ಶುರುವಾಗುತ್ತೆ ಅಂತ ಅನಿಸುತ್ತಾ.?'' ಎಂಬ ಪ್ರಶ್ನೆಯನ್ನ ಕಿಚ್ಚ ಸುದೀಪ್ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಕೇಳಿದರು. ಅದಕ್ಕೆ ಆಗುವ ಸಾಧ್ಯತೆ ಇದೆ ಅಂತಲೇ ಬಹುತೇಕ ಸ್ಪರ್ಧಿಗಳು ಉತ್ತರಿಸಿದರು.

  [ಚಿತ್ರಕೃಪೆ: ಕಲರ್ಸ್ ಕನ್ನಡ/ವೂಟ್]

  English summary
  Bigg Boss Kannada 7: Will this season witness new love story.?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X