For Quick Alerts
  ALLOW NOTIFICATIONS  
  For Daily Alerts

  ಕಳೆದೆಲ್ಲ ಸೀಸನ್ ವಿನ್ನರ್ ಗಿಂತ ಹೆಚ್ಚು ಬಹುಮಾನ ಪಡೆದ 'ಬಿಗ್ ಬಾಸ್-7' ವಿನ್ನರ್ ಶೈನ್ ಶೆಟ್ಟಿ

  |

  Recommended Video

  Bigg Boss Kannada 07 : Shine receives maximum prize amount compared to previous winners | BBK7

  'ಬಿಗ್ ಬಾಸ್ ಕನ್ನಡ ಸೀಸನ್-7'ಗೆ ಯಶಸ್ವಿ ತೆರೆ ಬಿದ್ದಿದೆ. ಈ ಬಾರಿಯ ಬಿಗ್ ಬಾಸ್ ವಿನ್ನರ್ ಪಟ್ಟ ಯಾರ ಮುಡಿಗೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು. ಶೈನ್ ಶೆಟ್ಟಿ ಬಿಗ್ ಬಾಸ್-7 ಟ್ರೋಫಿ ಗೆಲ್ಲುವ ಮೂಲಕ ಕುತೂಹಲಕ್ಕೆ ತೆರೆ ಬಿದ್ದಿದೆ. ಕನ್ನಡ ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಆರನೆ ಆವೃತ್ತಿಯ ಟಾಪ್ 3ನೇ ಸ್ಥಾನದಲ್ಲಿ ಶೈನ್ ಶೆಟ್ಟಿ, ಕುರಿ ಪ್ರತಾಪ್ ಮತ್ತು ವಾಸುಕಿ ವೈಭವ್ ಇದ್ದರು.

  'ಬಿಗ್ ಬಾಸ್'ನಲ್ಲಿ ಶೈನ್ ಆದ ಶೆಟ್ಟಿ ಕುರಿಯಾದ ಪ್ರತಾಪ್'ಬಿಗ್ ಬಾಸ್'ನಲ್ಲಿ ಶೈನ್ ಆದ ಶೆಟ್ಟಿ ಕುರಿಯಾದ ಪ್ರತಾಪ್

  ಈ ಮೂವರಲ್ಲಿ ಕೊನೆಯದಾಗಿ ಶೈನ್ ವಿಜೇತರಾಗಿ ಹೊರಹೊಮ್ಮಿದ್ದಾರೆ. ಶೈನ್ ವಿನ್ನರ್ ಪಟ್ಟದ ಜೊತೆಗೆ ಲಕ್ಷ ಲಕ್ಷ ಬಹುಮಾನ ಕೂಡ ಗೆದಿದ್ದಾರೆ. ವಿಶೇಷ ಅಂದರೆ ಕಳೆದೆಲ್ಲ ಸೀಸನ್ ಗಿಂತ ಈ ಬಾರಿಯ ವಿನ್ನರ್ ಗೆ ಅತೀ ಹೆಚ್ಚು ಬಹುಮಾನ ಸಿಕ್ಕಿದೆ. ಹಣದ ಜೊತೆಗೆ ಒಂದು ಕಾರ್ ಕೂಡ ಸಿಕ್ಕಿದೆ.

  ಶೈನ್ ಗೆ ಬರ್ಜರಿ ಬಹುಮಾನ

  ಶೈನ್ ಗೆ ಬರ್ಜರಿ ಬಹುಮಾನ

  ಬಿಗ್ ಬಾಸ್ ಮನೆಯಲ್ಲಿ ತನ್ನದೆ ಶೈಲಿಯಲ್ಲಿ ಆಟ ಆಡಿ, ಉಳಿದೆಲ್ಲ ಸ್ಪರ್ಧಿಗಳಿಗಿಂತ ವಿಭಿನ್ನ ಎನಿಸಿಕೊಂಡು ಪ್ರೇಕ್ಷಕರ ಮನಗೆದ್ದು, ಬಿಗ್ ಬಾಸ್ -7 ವಿನ್ನರ್ ಆಗಿ ಹೊರಹೊಮ್ಮಿರುವ ಶೈನ್, ಲಕ್ಷ ಲಕ್ಷ ಬಹುಮಾನ ಪಡೆದಿದ್ದಾರೆ. ಬಿಗ್ ಬಾಸ್ ವಿನ್ನರ್ ಗೆ ಸಿಗುವ 50 ಲಕ್ಷ ಹಣದ ಜೊತೆಗೆ ಇನ್ನು ಹೆಚ್ಚಿನ ಹಣವನ್ನು ಶೈನ್ ಬಿಗ್ ಮನೆಯಲ್ಲಿ ಸಂಪಾದನೆ ಮಾಡಿದ್ದಾರೆ.

  ವಿನ್ನರ್ ಗೆ ಕಾರ್ ಗಿಫ್ಟ್

  ವಿನ್ನರ್ ಗೆ ಕಾರ್ ಗಿಫ್ಟ್

  ಮೊದಲ ಬಾರಿಗೆ ಬಿಗ್ ಬಾಸ್ ವಿನ್ನರ್ ಗೆ ಕಾರ್ ಅನ್ನು ಗಿಫ್ಟಾಗಿ ನೀಡಲಾಗಿದೆ. ಈ ಬಾರಿಯ ವಿನ್ನರ್ ಶೈನ್ ಒಂದು ಕಾರಿನ ಒಡೆಯರಾಗಿದ್ದಾರೆ. ಶೈನ್ ಗೆ ಟಾಟಾ ಆಲ್ಟ್ರೊಜ್ ಕಾರನ್ನು ಬಹುಮಾನವಾಗಿ ನೀಡಲಾಗಿದೆ. 50 ಲಕ್ಷದ ಜೊತೆಗೆ ವಿವಿದ ಪ್ರಯೋಜಕರಿಂದ 11 ಲಕ್ಷ ರೂಪಾಯಿ ಸಿಕ್ಕಿದೆ. ಒಟ್ಟು ಶೈನ್ ಗೆ 61 ಲಕ್ಷ ರೂಪಾಯಿ ವೇದಿಕೆ ಮೇಲೆ ಸಿಕ್ಕಿದೆ.

  ಬಿಗ್ ಬಾಸ್ ಕನ್ನಡ 7: ಫಿನಾಲೆ ವಾರಕ್ಕೆ ಎಂಟ್ರಿ ಕೊಟ್ಟ ಮೊದಲ ಸ್ಪರ್ಧಿ ಇವರೆಬಿಗ್ ಬಾಸ್ ಕನ್ನಡ 7: ಫಿನಾಲೆ ವಾರಕ್ಕೆ ಎಂಟ್ರಿ ಕೊಟ್ಟ ಮೊದಲ ಸ್ಪರ್ಧಿ ಇವರೆ

  ರನ್ನರ್ ಅಪ್ ಗೆ ಏನು?

  ರನ್ನರ್ ಅಪ್ ಗೆ ಏನು?

  'ಬಿಗ್ ಬಾಸ್ ಕನ್ನಡ-7'ನಲ್ಲಿ ಎರಡನೇ ಸ್ಥಾನ ಪಡೆದ ಕುರಿ ಪ್ರತಾಪ್ ಕೂಡ ಸಾಕಷ್ಟು ಹಣ ಗೆದ್ದಿದ್ದಾರೆ. ಬಹುಮಾನ ರೂಪದಲ್ಲಿ ಕುರಿ ಪ್ರತಾಪ್ ಗೆ ಆರು ಲಕ್ಷ ರೂಪಾಯಿ ನೀಡಲಾಗಿದೆ. ಜೊತೆಗೆ ಬಿಗ್ ಮನೆಯಲ್ಲಿ ರಂಜಿಸಿದ್ದಕ್ಕಾಗಿ ಬಿಗ್ ಬಾಸ್ ಒಂದಿಷ್ಟು ಹಣವನ್ನು ನೀಡುತ್ತೆ.

  'ಬಿಗ್ ಬಾಸ್' ಗೆದ್ದವರಿಗೆ ಮಾತ್ರ ಅಲ್ಲ, ಸೋತವರಿಗೂ ಸಿಕ್ಕಿದೆ ಲಕ್ಷ ಲಕ್ಷ ಬಹುಮಾನ.!'ಬಿಗ್ ಬಾಸ್' ಗೆದ್ದವರಿಗೆ ಮಾತ್ರ ಅಲ್ಲ, ಸೋತವರಿಗೂ ಸಿಕ್ಕಿದೆ ಲಕ್ಷ ಲಕ್ಷ ಬಹುಮಾನ.!

  ಹೆಚ್ಚು ಹಣ ಗೆದ್ದ ದೀಪಿಕಾ

  ಹೆಚ್ಚು ಹಣ ಗೆದ್ದ ದೀಪಿಕಾ

  ನಾಲ್ಕನೇ ಸ್ಥಾನ ಪಡೆದ ದೀಪಿಕಾ ದಾಸ್ ಕೂಡ ಹೆಚ್ಚು ಹಣ ಸಂಪಾದನೆ ಮಾಡಿದ್ದಾರೆ. ಆರು ಲಕ್ಷ ರೂಪಾಯಿಯನ್ನು ಬಹುಮಾನವಾಗಿ ಪಡೆದು ಮನೆಗೆ ತೆರಳಿದ್ದಾರೆ. ಬಾಗ್ ಬಾಸ್ ನೀಡುವ ಹಣವನ್ನು ಹೊರತು ಪಡೆಸಿ, ಟಾಸ್ಕ್ ಒಂದರಲ್ಲಿ ಡ್ಯಾನ್ಸ್ ಪರ್ಫಾಮೆನ್ಸ್ ಮಾಡಿ, ಅದರಲ್ಲಿ ಹೆಚ್ಚು ವೋಟ್ ಗಳಿಸಿದ್ದಕ್ಕಾಗಿ ಐದು ಲಕ್ಷ ರೂಪಾಯಿ ನೀಡಲಾಗಿದೆ. ಇನ್ನೂ, ಫೈನಲಿಸ್ಟ್ ಆಗಿದ್ದ ಕಾರಣಕ್ಕೆ ದೀಪಿಕಾ ದಾಸ್ ಗೆ ಒಂದು ಲಕ್ಷ ರೂಪಾಯಿ ಕೊಡಲಾಗಿದೆ. ಒಟ್ಟು 6 ಲಕ್ಷ ವೇದಿಕೆ ಮೇಲೆ ಬಹುಮಾನವಾಗಿ ನೀಡಲಾಗಿದೆ.

  English summary
  Bigg Boss Kannada-7 winner Shine Shetty won 61 lakhs with one Car.
  Monday, February 3, 2020, 12:27
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X