Bigg Boss Kannada 7: ದೊಡ್ಮನೆ ಟಿಕೆಟ್ ಪಡೆದ ಸ್ಪರ್ಧಿಗಳ ಸಂಭಾವ್ಯ ಪಟ್ಟಿ ಇಲ್ಲಿದೆ
Recommended Video
ಬಿಗ್ ಬಾಸ್ ಕನ್ನಡ 7ನೇ ಆವೃತ್ತಿಗೆ ದಿನಗಳು ಮಾತ್ರ ಬಾಕಿ ಇದೆ. ಅಕ್ಟೋಬರ್ 13 ರಂದು ಅಧಿಕೃತವಾಗಿ ಬಿಗ್ ಶೋಗೆ ಚಾಲನೆ ದೊರೆಯಲಿದ್ದು, ಹದಿನೈದು ಸ್ಪರ್ಧಿಗಳು ದೊಡ್ಮನೆ ಪ್ರವೇಶ ಮಾಡಲಿದ್ದಾರೆ.
ಈ ಬಾರಿ ಬಿಗ್ ಮನೆಗೆ ಯಾರೆಲ್ಲಾ ಹೋಗಬಹುದು ಎಂಬ ಪಟ್ಟಿ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ. ಆ ಪಟ್ಟಿಯಲ್ಲಿ ಕೆಲವರು 'ನಾನು ಹೋಗಲ್ಲ' ಎಂದು ಸ್ಪಷ್ಟನೆ ಕೂಡ ಕೊಟ್ಟಿದ್ದಾರೆ. ಇದೀಗ, ಬಿಗ್ ಬಾಸ್ ಮನೆಗೆ ಹೋಗುವ ಸಂಭಾವನೀಯ ಪಟ್ಟಿಯೊಂದು ಫಿಲ್ಮಿಬೀಟ್ ಕನ್ನಡಕ್ಕೆ ಲಭ್ಯವಾಗಿದೆ.
ಈ ಪಟ್ಟಿಯಲ್ಲಿರುವ ವ್ಯಕ್ತಿಗಳು ಈ ಸಲ ದೊಡ್ಮನೆಗೆ ಹೋಗೋದು ಬಹುತೇಕ ಪಕ್ಕಾ ಎನ್ನಲಾಗಿದೆ. ಅಷ್ಟಕ್ಕೂ, ಬಿಗ್ ಬಾಸ್ ಅಂತಿಮ ಪಟ್ಟಿಯಲ್ಲಿ ಯಾರೆಲ್ಲಾ ಇರಬಹುದು? ಮುಂದೆ ಓದಿ..

ಜೈಜಗದೀಶ್ ಹೊಸ ಹೆಸರು
ಇಷ್ಟು ದಿನ ಸದ್ದು ಮಾಡ್ತಿದ್ದ ಪಟ್ಟಿಯಲ್ಲಿ ಹಿರಿಯ ನಟ ಜೈಜಗದೀಶ್ ಅವರ ಹೆಸರು ಎಲ್ಲೂ ಚರ್ಚೆಯಾಗಿರಲಿಲ್ಲ. ಆದ್ರೀಗ, ಅಸಲಿ ಆಟ ಶುರುವಾಗಲು ಮೂರು ದಿನಗಳು ಬಾಕಿಯಿರುವಾಗ ಜೈಜಗದೀಶ್ ಬಿಗ್ ಬಾಸ್ ಗೆ ಹೋಗಲಿದ್ದಾರೆ ಎಂಬ ಅಚ್ಚರಿ ಹೊರಬಿದ್ದಿದೆ.

ಕುರಿ ಪ್ರತಾಪ್ ಖಚಿತ
ಕಳೆದ ಕೆಲವು ಆವೃತ್ತಿಯಿಂದಲೂ ಕುರಿ ಪ್ರತಾಪ್ ಹೆಸರು ಬಿಗ್ ಬಾಸ್ ಪಟ್ಟಿಯಲ್ಲಿ ಬರ್ತಿದೆ. ಅಂತಿಮವಾಗಿ ಏಳನೇ ಆವೃತ್ತಿಯಲ್ಲಿ ಬಿಗ್ ಮನೆಗೆ ಪ್ರವೇಶ ಪಡೆದುಕೊಳ್ಳುತ್ತಿದ್ದಾರೆ. ಕುರಿ ಪ್ರತಾಪ್ ಹೋಗೋದು ಪಕ್ಕಾ ಎಂಬ ಮಾಹಿತಿ ಆಪ್ತವಲಯಗಳಿಂದ ಬಹಿರಂಗವಾಗಿದೆ.

ಹಾಸ್ಯ ನಟ ರಾಜುತಾಳಿಕೋಟೆ
ಹಾಸ್ಯ ನಟ ರಾಜುತಾಳಿ ಕೋಟೆ ಕೂಡ ಈ ಸಲ ಬಿಗ್ ಬಾಸ್ ಗೆ ಎಂಟ್ರಿ ಕೊಡಲಿದ್ದಾರಂತೆ. ರಾಜು ತಾಳಿಕೋಟೆ ಹೆಸರು ಕೂಡ ಈ ಹಿಂದಿನ ಆವೃತ್ತಿಗಳಲ್ಲಿ ಸದ್ದು ಮಾಡಿತ್ತು. ಆದರೆ, ಬಿಗ್ ಬಾಸ್ ಬಂದಿರಲಿಲ್ಲ. ಈ ಸಲ ಗ್ರೀನ್ ಸಿಗ್ನಲ್ ಕೊಟ್ಟು ಆಟ ಆಡಲಿದ್ದಾರಂತೆ.

ಪಂಕಜ್ ನಾರಾಯಣ್
ಹಿರಿಯ ನಿರ್ದೇಶಕ, ನಟ ಎಸ್ ನಾರಾಯಣ್ ಅವರ ಪುತ್ರ ಪಂಕಜ್ ನಾರಾಯಣ್ ಕೂಡ ಬಿಗ್ ಬಾಸ್ ಮನೆಗೆ ಎಂಟ್ರಿಯಾಗುತ್ತಿದ್ದಾರಂತೆ. ಈ ಹೆಸರು ಕೂಡ ಅಚ್ಚರಿ ತಂದಿದೆ. ಈಗಷ್ಟೇ ದರ್ಶನ್ ನಟನೆಯ ಒಡೆಯ ಚಿತ್ರದಲ್ಲಿ ನಟಿಸಿದ್ದರು ಪಂಕಜ್.

ರಾಧಾ ರಮಣ ವಿಲನ್
ಇಷ್ಟು ದಿನ ರಾಧಾ ರಮಣ ಧಾರಾವಾಹಿ ಖ್ಯಾತಿಯ ಶ್ವೇತಾ ಪ್ರಸಾದ್ ಅವರು ಬಿಗ್ ಬಾಸ್ ಮನೆಗೆ ಹೋಗ್ತಾರೆ ಎಂಬ ಸುದ್ದಿ ಇತ್ತು. ಈಗ ಸರ್ಪ್ರೈಸ್ ಏನಪ್ಪಾ ಅಂದ್ರೆ ರಾಧಾ ರಮಣ ಧಾರಾವಾಹಿಯಲ್ಲಿ ವಿಲನ್ ಆಗಿ ನಟಿಸುತ್ತಿದ್ದ ಸುಜಾತ ಅವರು ದೊಡ್ಮನೆ ಪ್ರವೇಶ ಮಾಡಲಿದ್ದಾರಂತೆ.

ಚೈತ್ರಾ ವಾಸುದೇವ
ಕಿರುತೆರೆ ವಾಹಿನಿಗಳಲ್ಲಿ ಕೆಲವು ಶೋಗಳನ್ನ ನಿರೂಪಣೆ ಮಾಡಿರುವ ಚೈತ್ರಾ ವಾಸುದೇವ್ ಅವರು ಹೆಸರು ಕೂಡ ಬಿಗ್ ಬಾಸ್ ಸಂಭವನೀಯ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಇದು ಕೂಡ ಅಚ್ಚರಿ ಹೆಸರು.

ಶೈನ್ ಶೆಟ್ಟಿ ಹೆಸರಿದೆ
ಕಿರುತೆರೆ ನಟ ಶೈನ್ ಶೆಟ್ಟಿಯ ಹೆಸರು ಬಿಗ್ ಬಾಸ್ ಕನ್ನಡ ಏಳನೇ ಆವೃತ್ತಿಯ ಸಂಭವನೀಯ ಪಟ್ಟಿಯಲ್ಲಿದೆ. ಈ ಹೆಸರು ಕೂಡ ಅಚ್ಚರಿ ಉಂಟು ಮಾಡಿದೆ.

ಕಿನ್ನರಿ ನಟಿ ಭೂಮಿ ಶೆಟ್ಟಿ
ಕಿನ್ನರಿ ಖ್ಯಾತಿಯ ನಟಿ ಭೂಮಿ ಶೆಟ್ಟಿ ಅವರು ಹೆಸರು ಕೂಡ ಬಿಗ್ ಬಾಸ್ ಕನ್ನಡ ಏಳನೇ ಆವೃತ್ತಿಯ ಸಂಭವನೀಯ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.

ದೀಪಿಕಾ ದಾಸ್ ಪಕ್ಕಾ
ನಾಗಿಣಿ ಧಾರಾವಾಹಿ ಮೂಲಕ ಹೆಚ್ಚು ಖ್ಯಾತಿ ಗಳಿಸಿಕೊಂಡಿರುವ ನಟಿ ದೀಪಿಕಾ ದಾಸ್ ಅವರು, ಈ ಸಲ ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಲಿದ್ದಾರಂತೆ.

ದುನಿಯಾ ರಶ್ಮಿ
ದುನಿಯಾ ಚಿತ್ರದ ಮೂಲಕ ಸ್ಟಾರ್ ನಟಿ ಎನಿಸಿಕೊಂಡ ರಶ್ಮಿ ಅವರು ಹೆಸರು ಬಿಗ್ ಬಾಸ್ ಪಟ್ಟಿಯಲ್ಲಿ ಸದ್ದು ಮಾಡ್ತಿದೆ. ಈಗ ಅಂತಿಮ ಸಂಭವನೀಯ ಪಟ್ಟಿಯಲ್ಲೂ ಕೂಡ ದುನಿಯಾ ರಶ್ಮಿಕಾ ಹೆಸರು ಉಳಿದುಕೊಂಡಿದೆ.

ಕಿರಣ್ ರಾಜ್
ಕಿರುತೆರೆ ನಟ ಕಿರಣ್ ರಾಜ್ ಕೂಡ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂಬ ವಿಷಯ ಚರ್ಚೆಯಾಗ್ತಿದೆ. ಅಂತಿಮ ಹದಿನೈದರ ಸಂಭವನೀಯ ಪಟ್ಟಿಯಲ್ಲಿ ಕಿರಣ್ ರಾಜ್ ಹೆಸರು ಕೂಡ ಇದೆ.

ವಾಸುಕಿ ವೈಭವ್ ಹೆಸರೂ ಇದೆ
ರಾಮಾ ರಾಮಾ ರೇ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದ ವಾಸುಕಿ ವೈಭವ್ ಅವರು ಕೂಡ ಬಿಗ್ ಬಾಸ್ ಗೆ ಹೋಗುವ ಸಾಧ್ಯತೆ ಇದೆ. ಸದ್ಯ ರಿಲೀಸ್ ಆಗಿರುವ ಸಂಭವನೀಯ ಪಟ್ಟಿಯಲ್ಲಿ ಇವರ ಹೆಸರು ಕೂಡ ಇದೆ.

ರವಿ ಬೆಳಗೆರೆ ಕಥೆ ಏನು?
ಹಿರಿಯ ಪತ್ರಕರ್ತ ರವಿ ಬೆಳಗೆರೆ ಅವರು ಬಿಗ್ ಬಾಸ್ ಮನೆಗೆ ಹೋಗುವ ಸಾಧ್ಯತೆಯನ್ನ ಅಲ್ಲೆಗಳೆಯುವಂತಿಲ್ಲ. ಈ ಬಗ್ಗೆ ಬೆಳಗೆರೆ ಅವರನ್ನ ಸಂಪರ್ಕಿಸಿದ್ದಾಗ 'ಹೋಗಲ್ಲ' ಎಂದಿದ್ದರು. ಈಗ ಅಂತಿಮ ಸಂಭವನೀಯ ಪಟ್ಟಿಯಲ್ಲೂ ಬೆಳಗೆರೆ ಹೆಸರು ಉಳಿದುಕೊಂಡಿದೆ.

ಚಂದನ ಅನಂತಸ್ವಾಮಿ ಯಾರು?
ಈ ಮೇಲಿನವರ ಜೊತೆಯಲ್ಲಿ ಚಂದನ ಅನಂತಸ್ವಾಮಿ, ಕಾರ್ಕಳದ ಡ್ಯಾನ್ಸರ್ ಒಬ್ಬರು, ಗುರುಲಿಂಗ ಸ್ವಾಮೀಜಿ ಹೆಸರುಗಳಿವೆ. ಆದರೆ, ಇವರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಇದು ಕೇವಲ ಸಂಭವನೀಯ ಪಟ್ಟಿ ಮಾತ್ರ. ಅಂತಿಮವಾಗಿ ವೇದಿಕೆ ಮೇಲೆ ಅಧಿಕೃತವಾಗಬೇಕಿದೆ.


Click it and Unblock the Notifications











