ಬಿಗ್ ಬಾಸ್ ಟ್ವಿಸ್ಟ್: ಹೊಸದಾಗಿ ನಾಮಿನೇಷನ್ ಆದ ನಾಲ್ಕು ಸ್ಪರ್ಧಿಗಳು

ಬಿಗ್ ಬಾಸ್ ಕನ್ನಡ ಎಂಟನೇ ಆವೃತ್ತಿಯ ಮೊದಲ ವಾರದಲ್ಲಿ ಮನೆಯಿಂದ ಹೊರಹೋಗಲು ಐದು ಮಂದಿ ನಾಮಿನೇಟ್ ಆಗಿದ್ದರು. ಸೋಮವಾರ ನಾಮಿನೇಷನ್ ಪ್ರಕ್ರಿಯೆ ನಡೆದಿತ್ತು. ಈ ಪ್ರಕ್ರಿಯೆಯಲ್ಲಿ ಮಂಜು ಪಾವಗಡ, ಪ್ರಶಾಂತ್ ಸಂಬರ್ಗಿ, ಧನುಶ್ರೀ, ನಿರ್ಮಲಾ ಚೆನ್ನಪ್ಪ ಹಾಗೂ ನಿಧಿ ಸುಬ್ಬಯ್ಯ ನಾಮಿನೇಟ್ ಆಗಿದ್ದರು.

ಆದ್ರೆ, ಬಿಗ್ ಬಾಸ್ ನೀಡಿದ ಟ್ವಿಸ್ಟ್ ಬಳಿಕ ಈಗ ನಾಮಿನೇಟ್ ಆದ ಸ್ಪರ್ಧಿಗಳು ಬದಲಾಗಿದ್ದಾರೆ. ಗುರುವಾರದ ಎಪಿಸೋಡ್‌ನ ಪ್ರಕಾರ ಈ ವಾರ ದೊಡ್ಮನೆಯಿಂದ ಹೊರಹೋಗಲು ಧನುಶ್ರೀ, ರಘು ಗೌಡ, ವಿಶ್ವನಾಥ್, ಶುಭ ಪೂಂಜಾ ನಾಮಿನೇಟ್ ಆದರು.

ಈ ನಾಲ್ವರ ಪೈಕಿ ಶುಭ ಪೂಂಜಾ, ರಘು ಗೌಡ, ವಿಶ್ವನಾಥ್ ಸೋಮವಾರದ ನಾಮಿನೇಷನ್ ಪ್ರಕ್ರಿಯೆಲ್ಲಿ ಡೇಂಜರ್ ಝೋನ್‌ನಲ್ಲಿ ಇರಲಿಲ್ಲ. ಆದರೆ, ನಾಮಿನೇಷನ್ ವರ್ಗಾವಣೆ ಟಾಸ್ಕ್‌ನಲ್ಲಿ ಸೋಲು ಕಂಡ ಪರಿಣಾಮ ಈ ಮೂವರು ನಾಮಿನೇಟ್ ಆಗಬೇಕಾಯಿತು.

 Bigg Boss Kannada 8: 1st Week Nomination List

ನಾಮಿನೇಟ್ ಸ್ಪರ್ಧಿಗಳು ಸೇಫ್ ಆಗಿದ್ದ ಸ್ಪರ್ಧಿಗಳನ್ನು ಆಯ್ಕೆ ಮಾಡಿಕೊಂಡು ಬಿಗ್ ಬಾಸ್ ನೀಡುವ ಆಟ ಆಡಬೇಕಿತ್ತು. ಇದರಲ್ಲಿ ಗೆದ್ದವರು ಸೇಫ್ ಆದರೆ ಸೋತವರು ಡೇಂಜರ್ ಝೋನ್ ಪ್ರವೇಶಿಸುತ್ತಾರೆ ಎಂದು ತಿಳಿಸಲಾಗಿತ್ತು.

ಈ ನಿಯಮದ ಅನ್ವಯ ಮಂಜು ಪಾವಗಡ ವಿರುದ್ಧ ಸೋಲು ಕಂಡ ರಘು ಗೌಡ, ಪ್ರಶಾಂತ್ ಸಂಬರ್ಗಿ ವಿರುದ್ಧ ಸೋಲು ಕಂಡ ವಿಶ್ವನಾಥ್, ನಿಧಿ ಸುಬ್ಬಯ್ಯ ವಿರುದ್ಧ ಸೋಲು ಕಂಡ ಶುಭ ಪೂಂಜಾ ನಾಮಿನೇಟ್ ಆದರು. ಗೀತಾ ಭಟ್ ಹಾಗೂ ದಿವ್ಯಾ ಸುರೇಶ್ ವಿರುದ್ಧ ಎರಡು ಸಲ ಆಟ ಸೋತು ಧನುಶ್ರೀ ಹಾಗೂ ನೇರವಾಗಿ ನಾಮಿನೇಟ್ ಆಗಿದ್ದ ನಿರ್ಮಲಾ ನಾಮಿನೇಷನ್ ಪ್ರಶಾಂತ್ ಸಂಬರ್ಗಿಗೆ ಸಿಕ್ಕ ವಿಶೇಷ ಅಧಿಕಾರದ ಹಿನ್ನೆಲೆ ಸೇಫ್ ಆದರು.

ಶನಿವಾರ ಸಂಜೆ ಕಿಚ್ಚನ ಮೊದಲ ಪಂಚಾಯಿತಿ ನಡೆಯಲಿದ್ದು, ಈ ವಾರ ದೊಡ್ಮನೆಯಿಂದ ಯಾರು ಗೇಟ್ ಪಾಸ್ ಪಡೆಯಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.

More from Filmibeat

English summary
Bigg Boss Kannada 8: shubha poonja, Dhanushree, Raghu Gowda, Vishwanath is Nominated in first week.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X