ಬಿಗ್‌ಬಾಸ್: ಪ್ರಶಾಂತ್ ಸಂಬರ್ಗಿ ಮೇಲೆ ಉರಿದು ಬಿದ್ದ ಮನೆ ಸದಸ್ಯರು

ಬಿಗ್‌ಬಾಸ್ ಮನೆಯ ಬಹುತೇಕ ಸದಸ್ಯರು ಪ್ರಶಾಂತ್ ಸಂಬರ್ಗಿ ಮೇಲೆ ಉರಿದು ಬಿದ್ದ ಘಟನೆ ಬಿಗ್‌ಬಾಸ್ ಮನೆಯಲ್ಲಿ ನಡೆದಿದೆ.

ಮಹಿಳಾ ದಿನಚಾರಣೆ ಪ್ರಯುಕ್ತ ಬಿಗ್‌ಬಾಸ್ ಮನೆಯಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದು ಸ್ಪರ್ಧಿಗಳು ಕಾರ್ಯಕ್ರಮ ನೀಡುವಂತೆ ಬಿಗ್‌ಬಾಸ್ ಸೂಚಿಸಿದರು. ಅದರಂತೆಯೇ ಬಿಗ್‌ಬಾಸ್ ಮನೆಯ ಸದಸ್ಯರೆಲ್ಲರೂ ಕೂತು ಏನು ಕಾರ್ಯಕ್ರಮ ನೀಡಬೇಕು, ಥೀಮ್ ಏನಿರಬೇಕು ಎಂಬ ಬಗ್ಗೆ ಚರ್ಚೆ ನಡೆಸಲು ಆರಂಭಿಸಿದರು.

ರಘು ಗೌಡ ಅವರು ಮೊದಲಿಗೆ ಐಡಿಯಾ ಒಂದನ್ನು ನೀಡಿದರು, ಆ ನಂತರ ಬ್ರೋ ಗೌಡ, 'ಒಳ್ಳೆಯ ಹೆಣ್ಣು, ಫ್ಲರ್ಟ್ ಮಾಡುವ ಹೆಣ್ಣು' ಇಬ್ಬರ ನಡುವಿನ ವ್ಯತ್ಯಾಸ ತೋರಿಸುವ ಎಂದರು. ದಿವ್ಯಾ ಯು ಮಾತನಾಡಿ, 'ಮಹಿಳೆಯು ಸಣ್ಣ ವಯಸ್ಸಿನಿಂದ ಶಾಲೆ, ಕಾಲೇಜು, ಮದುವೆ ಆದಮೇಲೆ ಹೀಗೆ ವಿವಿಧ ಹಂತದಲ್ಲಿ ಹೇಗೆ ಅವರ ಮೇಲೆ ದೌರ್ಜನ್ಯ ನಡೆಯುತ್ತದೆ' ಎಂಬುದರ ಬಗ್ಗೆ ನಾಟಕ ಮಾಡೋಣ ಎಂದರು. ಹೀಗೆ ಇನ್ನೂ ಕೆಲವು ಸ್ಪರ್ಧಿಗಳು ತಮಗೆ ತೋಚಿದ ರೀತಿಯಲ್ಲಿ ಐಡಿಯಾಗಳನ್ನು ಕೊಟ್ಟರು.

ಎಲ್ಲರ ಐಡಿಯಾ ಕೇಳುತ್ತಾ ಅಲ್ಲಿಯೇ ಕುಳಿತಿದ್ದ ಪ್ರಶಾಂತ್ ಸಂಬರ್ಗಿ ಒಮ್ಮೆಲೆ ಸಿಡುದು ನಿಂತರು. 'ನೀವೆಲ್ಲರೂ ಹೇಳುತ್ತಿರುವ ಐಡಿಯಾಗಳು ಔಟ್‌ಡೇಟೆಡ್. ತುಳಿತಕ್ಕೊಳಗಾದವರ ಬಗ್ಗೆ ಹೇಳುತ್ತಿದ್ದೀರಾ. ಸಾಧಿಸಿದವರ ಬಗ್ಗೆ ಹೇಳುತ್ತಿಲ್ಲ' ಎಂದು ತಮ್ಮ ವಾದ ಸರಣಿ ಆರಂಭಿಸಿದರು.

'ನಾವಿನ್ನೂ ಹಳೆಯ ಕಾಲದ ಮಾದರಿಯಲ್ಲಿ ಯೋಚಿಸುತ್ತಿದ್ದೇವೆ'

'ನಾವಿನ್ನೂ ಹಳೆಯ ಕಾಲದ ಮಾದರಿಯಲ್ಲಿ ಯೋಚಿಸುತ್ತಿದ್ದೇವೆ'

''ಇಲ್ಲಿರುವವರು ಎದೆ ಮುಟ್ಟಿ ಹೇಳಿಕೊಳ್ಳಿ ನಿಮ್ಮ ಮನೆಗಳಲ್ಲಿ ಹಣ್ಣುಮಕ್ಕಳನ್ನು ನೀವು ತುಳಿಯುತ್ತಿದ್ದೀರಾ? ಎದೆ ಮುಟ್ಟಿ ಹೇಳಿ ನೋಡೋಣ? ಇದೆಲ್ಲ ಹಳೆ ಕಾಲದ ಸಮಸ್ಯೆಗಳು ಪ್ರಪಂಚ ಈಗ ಬದಲಾಗಿದೆ. ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ, ಭ್ರೂಣ ಹತ್ಯೆ ಎಂಬುದು ಈಗ ಇಲ್ಲ. ಅದಕ್ಕೆಲ್ಲಾ ಕಾನೂನು ಬಂದಿದೆ. ನಾವಿನ್ನೂ ಹಳೆಯ ಕಾಲದಲ್ಲೇ ಇದ್ದೀವಿ' ಈಗ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಲೇ ಇಲ್ಲ ಎಂಬಂತೆ ಪ್ರಶಾಂತ್ ಸಂಬರ್ಗಿ ಮಾತನಾಡಿದರು.

ಇದಕ್ಕೆ ಮನೆಯ ಸದಸ್ಯರು ಒಪ್ಪಲಿಲ್ಲ

ಇದಕ್ಕೆ ಮನೆಯ ಸದಸ್ಯರು ಒಪ್ಪಲಿಲ್ಲ

ಇದಕ್ಕೆ ಮನೆಯ ಹಲವರು ಒಪ್ಪಲಿಲ್ಲ. 'ದಿವ್ಯಾ ಯು ಅಂತೂ ನೀವು ಹೇಳುತ್ತಿರುವುದು ಖಂಡಿತ ತಪ್ಪು. ಸ್ವತಃ ನಿಮ್ಮ ಮನೆಯಲ್ಲಿ ನಿಮ್ಮ ಹೆಂಡತಿಯನ್ನೇ ಒಮ್ಮೆ ಕೇಳಿನೋಡಿ, ಮಹಿಳೆ ಈಗಲೂ ಹೇಗೆ ತುಳಿತಕ್ಕೊಳಗಾಗಿದ್ದಾಳೆ ಎಂದು ಅವರೇ ಹೇಳುತ್ತಾರೆ' ಎಂದು ದಿಟ್ಟವಾಗಿ ಹೇಳಿದರು. ನಟಿ ನಿಧಿ ಸುಬ್ಬಯ್ಯ ಸಹ ಇದಕ್ಕೆ ದನಿಗೂಡಿಸಿದರು.

ಹಲವರು ಪ್ರಶಾಂತ್ ಸಂಬರ್ಗಿ ಮಾತನ್ನು ವಿರೋಧಿಸಿದರು

ಹಲವರು ಪ್ರಶಾಂತ್ ಸಂಬರ್ಗಿ ಮಾತನ್ನು ವಿರೋಧಿಸಿದರು

ರಾಜೇಶ್, ಲ್ಯಾಗ್ ಮಂಜು, ರಘು ಗೌಡ, ಶುಭಾ ಪೂಂಜಾ, ದಿವ್ಯಾ ಸುರೇಶ್, ಅರವಿಂದ್ ಇನ್ನೂ ಹಲವರು ಪ್ರಶಾಂತ್ ಸಂಬರ್ಗಿ ಮಾತಿಗೆ ತಮ್ಮ ತೀವ್ರ ವಿರೋಧ ವ್ಯಕ್ತಪಡಿಸಿದರು. ಆ ನಂತರ ಮನೆಯ ಹಾಲ್‌ನಲ್ಲಿ ಎಲ್ಲರೂ ಸೇರಿದ್ದಾಗ ಮತ್ತೊಮ್ಮೆ ಪ್ರಶಾಂತ್ ಸಂಬರ್ಗಿ ಅವರು ಅದೇ ವಾದವನ್ನು ಮುಂದಿಟ್ಟರು ಆಗಲೂ ರಾಜೇಶ್ ಹಾಗೂ ಇತರರು ಪ್ರಶಾಂತ್ ವಾದವನ್ನು ಸಾರಾಸಗಟಾಗಿ ನಿರಾಕರಿಸಿದರು.

ಮಹಿಳೆಯರನ್ನು ವಿಲನ್‌ಗಳಂತೆ ನೋಡುತ್ತಾರೆ: ನಿಧಿ ಸುಬ್ಬಯ್ಯ

ಮಹಿಳೆಯರನ್ನು ವಿಲನ್‌ಗಳಂತೆ ನೋಡುತ್ತಾರೆ: ನಿಧಿ ಸುಬ್ಬಯ್ಯ

ಅಂತಿಮವಾಗಿ ಕನ್‌ಫೆಷನ್‌ ರೂಂನಲ್ಲಿ ಸೀಕ್ರೆಟ್ ನಾಮಿನೇಷನ್ ನಡೆದಾಗ ನಟಿ ನಿಧಿ ಸುಬ್ಬಯ್ಯ ಅವರು, 'ಇಂದು ಪ್ರಶಾಂತ್ ಸಂಬರ್ಗಿ ಮಾಡಿದ ವಾದ ಬಹಳ ಕೆಟ್ಟದಾಗಿತ್ತು. ಹೆಣ್ಣುಮಕ್ಕಳನ್ನು ಅವರು ವಿಲನ್‌ಗಳಂತೆ ನೋಡುತ್ತಾರೆ. ಡಾಮಿನೇಷನ್ ಮಾಡಲು ಪ್ರಯತ್ನಿಸುತ್ತಾರೆ, ಅವರಿಂದ ದೂರ ಇರುವುದೇ ಒಳ್ಳೆಯದು ಎನಿಸುತ್ತದೆ' ಎಂದು ಕಾರಣ ನೀಡಿ ಪ್ರಶಾಂತ್ ಅವರನ್ನು ನಾಮಿನೇಟ್ ಮಾಡಿದರು.

ಪ್ರಶಾಂತ್ ಸಂಬರ್ಗಿ ಮಹಿಳಾ ವಿರೋಧಿಯೇ?

ಪ್ರಶಾಂತ್ ಸಂಬರ್ಗಿ ಮಹಿಳಾ ವಿರೋಧಿಯೇ?

ಬಿಗ್‌ಬಾಸ್ ಮನೆಗೆ ಹೋಗುವ ಮುನ್ನವೂ ಪ್ರಶಾಂತ್ ಸಂಬರ್ಗಿ ಅವರು ಮಹಿಳಾ ವಿರೋಧಿ ಎಂಬ ಆರೋಪಗಳು ಬಂದಿದ್ದವು. ಡ್ರಗ್ಸ್ ಪ್ರಕರಣದಲ್ಲಿ ಸಂಜನಾ ಹಾಗೂ ರಾಗಿಣಿ ಅವರನ್ನೇ ಗುರಿ ಮಾಡಿ ಅವರು ಬಹಳವಾಗಿ ಮಾತನಾಡಿದ್ದರು ಮತ್ತು ಪೋಸ್ಟ್‌ಗಳನ್ನು ಹಾಕಿದ್ದರು, ಯಾವೊಬ್ಬ ನಟನ ವಿರುದ್ಧ ಅವರು ಮಾತನಾಡಿರಲಿಲ್ಲ. ಹೀಗಾಗಿಯೇ ಅವರನ್ನು ಮಹಿಳಾ ವಿರೋಧಿ ಎಂದು ಕೆಲವರು ಆರೋಪಿಸಿದ್ದರು.

More from Filmibeat

English summary
Bigg Boss Kannada 8: Contestants Angry On Prashanth Sambargi's Words About Women in Bigg Boss house.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X