'ಬಿಗ್ ಬಾಸ್ ಕನ್ನಡ 8'ರ ಮೊದಲ ಪಂಚಾಯಿತಿ: ಮಂಜು ಪಾವಗಡ ಕಾಲೆಳೆದ ಸುದೀಪ್
ಬಿಗ್ ಬಾಸ್ ಮನೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. 17 ಸ್ಪರ್ಧಿಗಳ ಮೊದಲ ವಾರ ಯಶಸ್ವಿಯಾಗಿ ಮುಗಿಸಿದ್ದಾರೆ. ಕಿತ್ತಾಟ, ಜಗಳ, ನಗು, ಸಂತೋಷ, ಹರಟೆಗಳ ಜೊತೆಗೆ ಟಾಸ್ಕ್ ಗಳಲ್ಲೂ ಅದ್ಭುತವಾಗಿ ಭಾಗಿಯಾಗಿ ಇದೀಗ ವಾರದ ಮೊದಲ ಪಂಚಾಯಿತಿಯಲ್ಲಿ ಕುಳಿತಿದ್ದಾರೆ.
ಬಿಗ್ ಬಾಸ್ ಮನೆಯೊಳಗೆ ಹೋದ ಬಳಿಕ ಸ್ಪರ್ಧಿಗಳು ಮೊದಲ ಬಾರಿಗೆ ಕಿಚ್ಚ ಸುದೀಪ್ ಅವರನ್ನು ನೋಡುತ್ತಿದ್ದಾರೆ. ಈ ಬಾರಿ ಬಿಗ್ ಬಾಸ್ ನ ಮೊದಲ ಪಂಚಾಯಿತಿಯ ಪ್ರೋಮೋ ಈಗಾಗಲೇ ರಿಲೀಸ್ ಆಗಿದೆ. ಇಲ್ಲಿ ಸುದೀಪ್, ಮಂಜು ಪಾವಗಡ ಅವರ ಕಾಲೆಳೆದು ಎಲ್ಲರ ಮೊಗದಲ್ಲೂ ನಗು ತರಿಸಿದ್ದಾರೆ.
ಇಷ್ಟು ಸೀಸನ್ ಗಳನ್ನು ನೋಡಿಕೊಂಡು ಬಂದಿದ್ದೀನಿ, ಎಲ್ಲರೂ ಮನೆಯೊಳಗೆ ಹೋಗುತ್ತಿದ್ದಂತೆ ಸ್ನೇಹಿತರನ್ನಾಗಿ ಮಾಡಿಕೊಳ್ಳುತ್ತಾರೆ, ಗರ್ಲ್ ಫ್ರೆಂಡ್ ಸಿಗುತ್ತಾರೆ ಆದರೆ ನೀಮಗೆ ಮಾವ ಸಿಕ್ಕಿದ್ದಾರಲ್ಲಾ ಎಂದು ಕೇಳಿದ್ದಾರೆ. ಸುದೀಪ್ ಮಾತನ್ನು ಕೇಳಿ ಬಿಗ್ ಮನೆಯ ಸ್ಪರ್ಧಿಗಳು ಜೋರಾಗಿ ನಕ್ಕಿದ್ದಾರೆ.

ಇನ್ನು ನಿಧಿ ಸುಬ್ಬಯ್ಯ, ಬಿಗ್ ಮನೆಯಲ್ಲಿ ಕ್ಯಾಮರಾ ಇರುವದನ್ನೇೆ ಮರೆತಿದ್ದೇವೆ ಎಂದು ಹೇಳಿದ್ದಾರೆ. ಅದಕ್ಕೆ ಸುದೀಪ್, ಸದ್ಯ ಕ್ಯಾಮರಾ ಇರುವುದನ್ನು ಮರೆತಿದ್ದೀರಿ, ಬಳಿಕ ನಿಮ್ಮನ್ನೆ ನೀವು ಮರೆಯುತ್ತೀರಿ ಎಂದಿದ್ದಾರೆ. ಅಂದಹಾಗೆ ಈ ಬಾರಿ ಬಿಗ್ ಬಾಸ್ ಮೊದಲ ವೀಕೆಂಡ್ ಕಾರ್ಯಕ್ರಮ ಇದಾಗಿದ್ದು, ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.
ಇನ್ನು ಮೊದಲ ವಾರ ಬಿಗ್ ಬಾಸ್ ಮನೆಯಿಂದ ಹೊರಹೋಗುವ ಸ್ಪರ್ಧಿ ಯಾರು ಎನ್ನುವ ಕುತೂಹಲ ಎಲ್ಲರಲ್ಲಿದೆ. ಸದ್ಯ ಮನೆಯಿಂದ ಹೊರಹೋಗಲು ನಾಮಿನೇಟ್ ಆದವರಲ್ಲಿ, ಶುಭಾ ಪೂಂಜಾ, ವಿಶ್ವ, ರಘು ಗೌಡ, ನಿರ್ಮಲಾ ಮತ್ತ ಧನುಶ್ರೀ. ಇವರಲ್ಲಿ ಬಿಗ್ ಬಾಸ್ ಪಯಣ ಮುಗಿಸಿ ಯಾರು ಹೊರ ಬರ್ತಾರೆ ಎಂದು ಕಾದು ನೋಡಬೇಕು.


Click it and Unblock the Notifications











