ಬಿಗ್‌ಬಾಸ್ ಮನೆಗೆ ಬಂದರು 'ಮಿಸ್ ಇಂಡಿಯಾ ಸೌತ್' ದಿವ್ಯಾ

ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿರುವ ನಟಿ ದಿವ್ಯಾ ಅವರು ಬಿಗ್‌ಬಾಸ್ ಮನೆ ಪ್ರವೇಶಿಸಿದ್ದಾರೆ. 'ಮಿಸ್ ಇಂಡಿಯಾ ಸೌತ್' ಸಹ ಆಗಿರುವ ಈ ಚೆಲುವೆ ಬಿಗ್‌ಬಾಸ್‌ ಮನೆಯ ಮೂಲಕ ಕನ್ನಡಿಗರ ಹೃದಯ ಕದಿಯಲು ಸಜ್ಜಾಗಿದ್ದಾರೆ.

ಜೀವನದಲ್ಲಿ ಸುಖಕ್ಕೂ ಹೆಚ್ಚು ಕಷ್ಟವನ್ನೇ ನೊಡಿರುವ ದಿವ್ಯಾ, 'ನಾನು ಬಹಳ ಹಠಮಾರಿ, ಕೋಪದ ಪ್ರವೃತ್ತಿಯವಳು. ಬಹಳ ಮಾತನಾಡುತ್ತೇನೆ. ಆದರೆ ಅದೆಲ್ಲವನ್ನೂ ಕಡಿಮೆ ಮಾಡಿಕೊಳ್ಳಲು ಬಿಗ್‌ಬಾಸ್ ಅನ್ನು ವೇದಿಕೆಯಾಗಿ ಬಳಸಿಕೊಳ್ಳಲಿದ್ದೇನೆ' ಎಂದಿದ್ದಾರೆ.

ಅಪ್ಪ ಇದ್ದರೂ ಅಮ್ಮನ ನೆರಳಿನಲ್ಲೇ ಬೆಳೆದಿದ್ದಾರೆ ನಟಿ ದಿವ್ಯಾ. ದಿವ್ಯಾ ಬಹಳ ಎಳವೆಯಲ್ಲಿದ್ದಾಗಲೇ ಅಪ್ಪ ಬಿಟ್ಟುಹೋಗಿದ್ದರಂತೆ. ಅಮ್ಮ ಒಬ್ಬರೇ ಸಿಂಗಲ್ ಪೇರೆಂಟ್ ಆಗಿ ನನ್ನನ್ನು ಬೆಳೆಸಿದ್ದಾರೆ. ಮುಂಚೆ ಅಪ್ಪ ಇದ್ದಾಗ ಬಹಳ ಚೆನ್ನಾಗಿ ನೋಡಿಕೊಂಡರು, ಆದರೆ ಈಗ ಅದೆಲ್ಲಾ ಸುಳ್ಳು ಪ್ರೇಮ ಎಂದು ಗೊತ್ತಾಗಿ ಬಹಳ ಬೇಸರವಾಗುತ್ತದೆ ಎಂದು ಬಿಗ್‌ಬಾಸ್ ವೇದಿಕೆಯಲ್ಲಿ ಕಣ್ಣೀರು ಹಾಕಿದರು ದಿವ್ಯಾ.

Bigg Boss Kannada 8 Contestant Actress Divya Profile

2017ರಲ್ಲಿ ರಿಲೀಸ್ ಆಗಿದ್ದ ಕನ್ನಡ ಸಿನಿಮಾ 'ಹಿಲ್ಟನ್ ಹೌಸ್' ಚಿತ್ರದ ಮೂಲಕ ದಿವ್ಯ ರಾವ್ ಸ್ಯಾಂಡಲ್‌ವುಡ್ ಪ್ರವೇಶಿಸಿದ್ದರು. ನರೇಂದ್ರ ಬಾಬು ನಿರ್ದೇಶಿಸಿದ್ದ ಈ ಚಿತ್ರದಲ್ಲಿ ಪ್ರಮುಖ ನಟಿಯಾಗಿ ಬಣ್ಣ ಹಚ್ಚಿದ್ದರು. 2019ರಲ್ಲಿ ತೆರೆಕಂಡ ''ಡಿಗ್ರಿ ಕಾಲೇಜ್'' ಮೂಲಕ ಟಾಲಿವುಡ್ ಇಂಡಸ್ಟ್ರಿ ಪ್ರವೇಶಿಸಿದರು.

ಮಾಡಲಿಂಗ್ ಕ್ಷೇತ್ರ ಹಾಗೂ ಸಿನಿಮಾದಲ್ಲಿ ಖ್ಯಾತಿ ಗಳಿಸಿಕೊಂಡ ದಿವ್ಯ ರಾವ್ ನಂತರ ಕನ್ನಡ ಕಿರುತೆರೆ ಲೋಕಕ್ಕೆ ಪರಿಚಯವಾದರು. ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ''ನನ್ನ ಹೆಂಡ್ತಿ ಎಂಬಿಬಿಎಸ್'' ಹಾಗೂ ''ಜೋಡಿಹಕ್ಕಿ'' ಎಂಬ ಧಾರಾವಾಹಿಗಳಲ್ಲಿಯೂ ದಿವ್ಯ ಅಭಿನಯಿಸಿದ್ದಾರೆ.

More from Filmibeat

English summary
Here is the Bigg Boss Kannada Season 8 contestant Actress Divya detailed profile, biography, photos and video. Read on.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X