For Quick Alerts
  ALLOW NOTIFICATIONS  
  For Daily Alerts

  ಬಿಗ್‌ಬಾಸ್ ಮನೆಯ ಅಗ್ನಿಕುಂಡ ಪ್ರವೇಶಿಸಿದ ಅಗ್ನಿಸಾಕ್ಷಿಯ ವೈಷ್ಣವಿ

  |

  ಜನಪ್ರಿಯ ಧಾರಾವಾಹಿ 'ಅಗ್ನಿಸಾಕ್ಷಿ'ಯಲ್ಲಿ ಸನ್ನಿಧಿ ಪಾತ್ರ ನಿರ್ವಹಿಸುವ ವೈಷ್ಣವಿ ಅವರು ಬಿಗ್‌ಬಾಸ್ ಮನೆಯನ್ನು ಪ್ರವೇಶಿಸಿದ್ದಾರೆ.

  ಸೂಕ್ಷ್ಮ ಸ್ವಭಾವದ, ಮಿತ ಭಾಷಿ ಆಗಿರುವ ವೈಷ್ಣವಿ ಅವರು 'ಅಗ್ನಿಕುಂಡ' ಎನಿಸಿಕೊಂಡಿರುವ ಬಿಗ್‌ಬಾಸ್ ಮನೆ ಪ್ರವೇಶ ಮಾಡಿರುವುದು ಹಲವರಿಗೆ ಶಾಕ್ ನೀಡಿದೆ.

  ಅತ್ಯುತ್ತಮ ಭರತನಾಟ್ಯ ನೃತ್ಯಗಾರ್ತಿ ಆಗಿರುವ ವೈಷ್ಣವಿ ಅವರು 'ಅಗ್ನಿಸಾಕ್ಷಿ' ಧಾರಾವಾಹಿ ಮೂಲಕ ಕೋಟ್ಯಂತರ ಜನರ ಮನ ಗೆದ್ದಿದ್ದಾರೆ. ಈ ನಟಿಯು ಬಿಗ್‌ಬಾಸ್ ನೀಡಿದ ಆಫರ್ ಅನ್ನು ಕೊನೆಯ ವರೆಗೆ ಒಪ್ಪಿಕೊಂಡಿರಲಿಲ್ಲವಂತೆ. ಇದಕ್ಕೆ ಕಾರಣ ಹಲವರು ವೈಷ್ಣವಿಗೆ ಸಲಹೆ ನೀಡಿದ್ದರಂತೆ, 'ಬಿಗ್‌ಬಾಸ್ ಶೋ ಗೆ ಹೋಗಬೇಡ, ನಿನಗೆ ಸರಿಬರುವುದಿಲ್ಲ, ಹೆಸರು ಕೆಡಿಸಿಕೊಳ್ಳುತ್ತೀಯಾ' ಎಂದು. ಆದರೆ ನಂತರ ಬಿಗ್‌ಬಾಸ್ ತಂಡದವರೊಂದಿಗೆ ಖಾಸಗಿಯಾಗಿ ಮಾತನಾಡಿದ ಬಳಿಕ ಬಿಗ್‌ಬಾಸ್ ಮನೆಗೆ ಬರಲು ಒಪ್ಪಿದರಂತೆ ಈ ನಟಿ.

  ವೈಷ್ಣವಿ ತಮ್ಮ ತಾಯಿಗೆ ಬಹುವಾಗಿ ಹೆದರುತ್ತಾರಂತೆ. 'ತಾಯಿ ಬಹಳ ಶಿಸ್ತಿನಿಂದ ಬೆಳೆಸಿದ್ದಾರೆ ನನ್ನನ್ನು' ಎಂದು ಬಿಗ್‌ಬಾಸ್ ವೇದಿಕೆ ಮೇಲೆ ಹೇಳಿದ ವೈಷ್ಣವಿ. ಆದರೆ ಅಪ್ಪ ಬಹಳ ಮುದ್ದಾಗಿ ಸಾಕಿದ್ದಾರೆ. ಇಬ್ಬರನ್ನೂ ಸಹ ಬಹುವಾಗಿ ನಾನು ಮಿಸ್ ಮಾಡಿಕೊಳ್ಳಲಿದ್ದೇನೆ ಎಂದಿದ್ದಾರೆ ವೈಷ್ಣವಿ.

  ಬಿಗ್‌ಬಾಸ್ ಸೀಸನ್ 08 ಈಗಾಗಲೇ ಆರಂಭವಾಗಿದ್ದು.ಬಿಗ್‌ಬಾಸ್ ಮನೆಯಲ್ಲಿ ಟಿಕ್‌ಟಾಕ್ ಸ್ಟಾರ್ ಧನುಶ್ರಿ. ನಟ ಶಂಕರ್ ಅಶ್ವತ್ಥ್ , ನಟಿ ಶುಭಾ ಪೂಂಜಾ, ಗಾಯಕ ವಿಶ್ವ, ಬೈಕ್ ರೇಸರ್ ಅರವಿಂದ್, ಸಿನಿಮಾ ನಟಿ ನಿಧಿ ಸುಬ್ಬಯ್ಯ ಅವರುಗಳು ಮನೆ ಪ್ರವೇಶಿಸಿದ್ದಾರೆ.

  English summary
  Here is the Bigg Boss Kannada Season 8 contestant Actress Vaishnavi Gowda detailed profile, biography, photos and video. Read on

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X