ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟ ಸೋಶಿಯಲ್ ಮೀಡಿಯಾ ಸ್ಟಾರ್ 'ಬ್ರೋ ಗೌಡ'
ಬಿಗ್ ಬಾಸ್ ಕನ್ನಡ ಏಂಟನೇ ಆವೃತ್ತಿಯಲ್ಲಿ ಏಂಟನೇ ಸ್ಪರ್ಧಿಯಾಗಿ ಮನೆ ಪ್ರವೇಶ ಮಾಡಿದ್ದು ಬ್ರೋ ಗೌಡ. ಮೂಲ ಹೆಸರು ಶಮಂತಾ. ಆದರೆ, ಬ್ರೋ ಗೌಡ ಎಂದೇ ಖ್ಯಾತಿ ಗಳಿಸಿಕೊಂಡಿದ್ದಾರೆ.
ಕಮರ್ಷಿಯಲ್ ಸಿನಿಮಾ, ಧಾರಾವಾಹಿಯಲ್ಲಿ ಆಕ್ಟ್ ಮಾಡಿಲ್ಲ. ಆದರೂ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಸೋಶಿಯಲ್ ಮೀಡಿಯಾ ಸ್ಟಾರ್ ಎನ್ನಬಹುದು. ವೆಬ್ ಸಿರೀಸ್‌ನಲ್ಲಿ ನಟಿಸಿದ್ದಾರೆ. ನಿರ್ದೇಶಕರೂ ಹೌದು, ಕಂಪೋಸ್ ಮಾಡ್ತಾರೆ, ಗಾಯಕರಾಗಿಯೂ ಗುರುತಿಸಿಕೊಂಡಿದ್ದಾರೆ.
ಒಂದೊಳ್ಳೆ ಅವಕಾಶಕ್ಕಾಗಿ ಕಾಯುತ್ತಿದ್ದ ಬ್ರೋ ಗೌಡ, ಕೊನೆಗೆ ತಮಗೆ ತಾವೇ ವೇದಿಕೆಯನ್ನು ಸೃಷ್ಟಿಸಿಕೊಂಡರು. ಜೀವನದಲ್ಲಿ ಹಲವು ಕನಸುಗಳನ್ನು ಕಂಡಿದ್ದು, ಒಂದಲ್ಲ ಒಂದು ದಿನ ಯಶಸ್ಸು ಸಿಗುತ್ತದೆ ಎಂಬ ಭರವಸೆಯೊಂದಿಗೆ ಬಿಗ್ ಬಾಸ್‌ಗೆ ಬಂದಿದ್ದಾರೆ.

ಅಂದ್ಹಾಗೆ, ಹೆಸರು ಶಮಂತಾ, ಆದರೆ ಬ್ರೋ ಗೌಡ ಏಕೆ? ಎನ್ನುವುದಕ್ಕೆ ಉತ್ತರಿಸಿದ ಅವರು ''ವೆಬ್ ಸಿರೀಸ್‌ವೊಂದರಲ್ಲಿ ನಟಿಸಿದ್ದರಂತೆ. ಅಲ್ಲಿ ಬ್ರೋ ಗೌಡ ಎಂಬ ಪಾತ್ರ ನಿರ್ವಹಿಸಿದ್ದರಂತೆ. ಆ ಪಾತ್ರದ ಮೂಲಕವೇ ಗುರುತಿಸಿಕೊಳ್ಳಬೇಕೆಂದು ಬ್ರೋ ಗೌಡ ಎಂದೇ ಹೇಳಿಕೊಳ್ಳುತ್ತಾರೆ.
ಬ್ರೋ ಗೌಡ ಅವರ ಜೀವನದಲ್ಲಿ ಬರಿ ಖುಷಿ ಮಾತ್ರವಲ್ಲ, ಅನೇಕ ನೋವುಗಳಿವೆ. ಆದರೆ, ಅದನ್ನು ಯಾರೊಂದಿಗೆ ಹಂಚಿಕೊಳ್ಳಲುವ ಅವಕಾಶ ಸಿಕ್ಕಿಲ್ಲ ಎಂದು ಸುದೀಪ್ ಬಳಿ ಹೇಳಿದರು.
ಸ್ಫೂರ್ತಿದಾಯಕ ಮಾತು, ಮೋಟಿವೇಶನಲ್ ಭಾಷಣಗಳ ಮೂಲಕ ಇನ್ಸ್ಟಾಗ್ರಾಂ ಹಾಗೂ ಫೇಸ್‌ಬುಕ್‌ನಲ್ಲಿ ಗಮನ ಸೆಳೆದಿದ್ದಾರೆ.


Click it and Unblock the Notifications











