'ಮೂಡಲ ಮನೆ'ಯ ಚಂದ್ರಕಲಾ ಮೋಹನ್ ಈಗ ಬಿಗ್‌ಬಾಸ್ ಮನೆಯಲ್ಲಿ

'ಪುಟ್ಟಗೌರಿ ಮದುವೆ' ಧಾರಾವಾಹಿಯಲ್ಲಿ 'ಅಜ್ಜಮ್ಮ'ನ ಪಾತ್ರದಲ್ಲಿ ನಟಿಸಿದ್ದ ಚಂದ್ರಕಲಾ ಮೋಹನ್ ಅವರು ಈ ಬಾರಿ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದಾರೆ.

'ಪುಟ್ಟಗೌರಿ ಮದುವೆ' ಧಾರಾವಾಹಿಯಂತೆಯೇ ಚಂದ್ರಕಲಾ ಅವರಿಗೂ ಬಹಳ ಸಣ್ಣ ವಯಸ್ಸಿಗೆ ಮದುವೆಯಾಯಿತು. ಶಾಲೆಯ ಮೆಟ್ಟಿಲೂ ಸಹ ಏರದ ಚಂದ್ರಕಲಾ ತಮ್ಮ ಹತ್ತನೇ ವಯಸ್ಸಿನಲ್ಲಿಯೇ ಕಂಪೆನಿ ನಾಟಕಗಳಲ್ಲಿ ನಟಿಸಲು ಆರಂಭಿಸಿದರು.

ಬಹಳ ಸಣ್ಣ ವಯಸ್ಸಿಗೆ ಮದುವೆ, ಮಕ್ಕಳೂ ಆದ ಬಳಿಕ ಚಂದ್ರಕಲಾ ಜೀವನ ಬಹಳ ಕಷ್ಟವಾಗಿತ್ತು. ಆದರೆ ನಟನೆಯ ಹವ್ಯಾಸವನ್ನು ಕಷ್ಟದ ಸಮಯದಲ್ಲೂ ಬಿಡದೇ ಇದ್ದ ಚಂದ್ರಕಲಾ ಗೆ ಕೊನೆಗೆ ನಟನೆಯೇ ಕೈ ಹಿಡಿಯಿತು.

Bigg Boss Kannada 8 Contestant Chandrakala Mohan Profile

ಚಂದ್ರಕಲಾ ಅವರು ಮೊದಲ ಬಾರಿಗೆ ನಾಟಕದಲ್ಲಿ ನಟಿಸಲು ಆರಂಭವಾದಾಗ ಅವರ ಬಳಿ ಸರಿಯಾದ ಸೀರೆಗಳು ಸಹ ಇರಲಿಲ್ಲವಂತೆ. ಕೊನೆಗೆ ಬಾಡಿಗೆ ಲೆಕ್ಕದಲ್ಲಿ ಸೀರೆಗಳನ್ನು ಖರೀದಿಸಿ ಧರಿಸುತ್ತಿದ್ದರಂತೆ ಈ ನಟಿ.

'ಮಗ ಐಸಿಯು ನಲ್ಲಿ ಇದ್ದಾಗಲೂ ನಟನೆ ಮಾಡಲು ಹೋಗಿದ್ದಂಥಹಾ ದಿನಗಳನ್ನು ನೆನಪಿಸಿಕೊಂಡ ಚಂದ್ರಕಲಾ. ಇಂದು ತಮ್ಮ ಈ ಏಳ್ಗೆಗೆ ತಮ್ಮ ಪತಿ ನೀಡಿದ ಬೆಂಬಲವೇ ಕಾರಣ ಎಂದರು ಚಂದ್ರಕಲಾ ಮೋಹನ್.

ಇಬ್ಬರು ಮಕ್ಕಳನ್ನು ಹೊಂದಿರುವ ಈ ನಟಿಯ ಎರಡನೇ ಮಗ ಅಪಘಾತಕ್ಕೆ ಈಡಾಗಿ ಬುದ್ಧಿಭ್ರಮಣೆ ಆಗಿದೆ. ಕಳೆದ ಹತ್ತು ವರ್ಷಗಳಿಂದಲೂ ಮಗನನ್ನು ಲಕ್ಷಾಂತರ ವೆಚ್ಚ ಮಾಡಿ ಸಾಕುತ್ತಿದ್ದಾರಂತೆ ನಟಿ ಚಂದ್ರಕಲಾ.

ನಾನು ಸಾಧ್ಯವಾದಷ್ಟು ತಾಳ್ಮೆಯಿಂದಲೇ ಇರುತ್ತೇನೆ, ಆದರೆ ಯಾರಾದರೂ ವಿನಾಕರಣ ನನ್ನನ್ನು ಕೆಣಕಿದರೆ, ಸುಳ್ಳು ಆರೋಪ ಮಾಡಿದರೆ ನನ್ನ ಕೈಯಿಂದ ತಡೆದುಕೊಳ್ಳಲು ಆಗುವುದಿಲ್ಲ ಎಂದರು ಚಂದ್ರಕಲಾ. ಮೂಡಲ ಮನೆಯಿಂದ ನಟನೆ ಆರಂಭಿಸಿದ ಚಂದ್ರಕಲಾ ಈಗ ಬಿಗ್‌ಬಾಸ್ ಮನೆಯಲ್ಲಿದ್ದಾರೆ.

More from Filmibeat

English summary
Here is the Bigg Boss Kannada Season 8 contestant Chandrakala Mohan detailed profile, biography, photos and video. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X