ಡ್ರಗ್ಸ್ ಪ್ರಕರಣದ ಕಹಿ ಮರೆಯಲು ಬಿಗ್‌ಬಾಸ್ ಮನೆಗೆ ಬಂದರು ನಟಿ ಗೀತಾ ಭಟ್
ಬ್ರಹ್ಮಗಂಟು ಧಾರಾವಾಹಿ ಖ್ಯಾತಿಯ ನಟಿ ಗೀತಾ ಭಟ್ ಅವರು ಬಿಗ್‌ಬಾಸ್ ಮನೆ ಪ್ರವೇಶಿಸಿದ್ದಾರೆ. ಗೀತಾ ಭಟ್ ಅವರು ಬಿಗ್‌ಬಾಸ್ ಮನೆಗೆ ಬರುತ್ತಾರೆಂದು ಈ ಹಿಂದೆಯೇ ಸುದ್ದಿಯಾಗಿತ್ತು. ಅಂತೆಯೇ ಈಗ ಬಿಗ್‌ಬಾಸ್ ಮನೆಗೆ ಬಂದಿದ್ದಾರೆ ಗೀತಾ.
ಗೀತಾ ಭಟ್ ಕಳೆದ ಕೆಲವು ತಿಂಗಳಿನಿಂದಲೂ ಸಖತ್ ಸುದ್ದಿಯಲ್ಲಿದ್ದಾರೆ. ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣದಲ್ಲಿ ಗೀತಾ ಭಟ್ ಹೆಸರು ಕೇಳಿಬಂದಿತ್ತು. ಸಿಸಿಬಿ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದ ಈ ನಟಿ, ಪ್ರಕರಣದಲ್ಲಿ ತಮ್ಮ ಹಸ್ತಕ್ಷೇಪವಿಲ್ಲ ಎಂದು ಹೇಳಿ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದರು.
ಉತ್ತಮ ಹಾಡುಗಾರ್ತಿ ಆಗಿರುವ ಗೀತಾ ಭಟ್, ಹಾಡುಗಾರ್ತಿಯಾಗುವ ಕನಸು ಹೊಂದಿದ್ದ ಗೀತಾ ಭಟ್, ಕೊನೆಗೆ ನಟಿಯಾಗಿ ಹೆಚ್ಚು ಗುರುತಿಸಿಕೊಂಡಿದ್ದಾರೆ.

ಸಣ್ಣ ವಯಸ್ಸಿನಿಂದಲೂ ಬಹಳವಾಗಿ ಚೂಟಿಯಾಗಿದ್ದ ಗೀತಾ ಭಟ್, ಸಣ್ಣ ವಯಸ್ಸಿನಲ್ಲಿದ್ದಾಗ ಆಪರೇಷನ್ ಒಂದಕ್ಕೆ ಒಳಗಾದ ಬಳಿಕ ದಪ್ಪವಾಗುತ್ತಾ ಹೋದರಂತೆ. ತಮ್ಮ ಆಕಾರದ ಬಗ್ಗೆ ಗೀತಾ ಭಟ್ ಗೆ ಹೆಮ್ಮೆಯೇ ಇದೆಯಂತೆ. ಸಾಕಷ್ಟು ಮಂದಿ ಗೀತಾ ಅವರಿಗೆ ಆಕಾರದ ಬಗ್ಗೆ ವ್ಯಂಗ್ಯ ಮಾಡಿದ್ದಾರಂತೆ ಆದರೆ ಅದೆಲ್ಲವನ್ನೂ ಮರೆತು ಮುನ್ನಡೆಯುತ್ತಿರುವುದಾಗಿ ಹೇಳಿದರು ಗೀತಾ ಭಟ್.
ಬಿಗ್‌ಬಾಸ್ ವಿಶೇಷ ವಿಡಿಯೋದಲ್ಲಿ ಡ್ರಗ್ಸ್ ಪ್ರಕರಣದ ಬಗ್ಗೆ ಮಾತನಾಡಿದ ಗೀತಾ ಭಟ್, ''ಡ್ರಗ್ಸ್ ಪ್ರಕರಣದ ಬಗ್ಗೆ ನನಗೆ ವಿಷಯ ಗೊತ್ತಿರಬಹುದಾ ಎಂದು ಸಿಸಿಬಿ ಅವರು ಕರೆದಿದ್ದರು. ಆದರೆ ನಾನೇ ತಪ್ಪು ಮಾಡಿದ್ದೀನಿ ಎಂದು ಬಹಳ ಮಂದಿ ಅಂದು ಕೊಂಡರು' ಎಂದರು ಗೀತಾ ಭಟ್.


Click it and Unblock the Notifications











