ಬಿಗ್ ಬಾಸ್‌ ನಾಲ್ಕನೇ ಸ್ಪರ್ಧಿ: ಧಾರಾವಾಡ ಗಾಯಕ ವಿಶ್ವನಾಥ್ ಯಾರು?

ಬಿಗ್ ಬಾಸ್ ಕನ್ನಡ 8ನೇ ಆವೃತ್ತಿ ಅತ್ಯಂತ ಕಿರಿಯ ಸ್ಪರ್ಧಿಯಾಗಿ 'ಹಾಡು ಕರ್ನಾಟಕ' ಖ್ಯಾತಿಯ ವಿಶ್ವನಾಥ್ ಮನೆ ಪ್ರವೇಶಿಸಿದ್ದಾರೆ. ನಾಲ್ಕನೇ ಸ್ಪರ್ಧಿಯಾಗಿ ಬಿಗ್ ಮನೆಗೆ ಎಂಟ್ರಿ ಪಡೆದ ವಿಶ್ವ ದೊಡ್ಡ ಗಾಯಕನಾಗಬೇಕೆಂಬ ಮಹಾದಾಸೆ ಹೊಂದಿದ್ದಾರೆ.

ಮೂಲತಃ ಧಾರಾವಾಡದ ಯುವ ಪ್ರತಿಭೆ ವಿಶ್ವ ಸಣ್ಣ ವಯಸ್ಸಿನಿಂದಲೂ ಸಂಗೀತದ ಮೇಲೆ ಆಸಕ್ತಿ ಹೊಂದಿದ್ದಾರೆ. 19 ವರ್ಷದ ವಿಶ್ವನಾಥ್ ಹಾಡು ಬರೆಯುತ್ತಾರೆ, ಕಂಪೋಸ್ ಮಾಡ್ತಾರೆ ಹಾಗೂ ಹಾಡುಗಳನ್ನು ಹಾಡುತ್ತಾರೆ.

ಧಾರಾವಾಡದಲ್ಲಿ ಹುಟ್ಟಿ ಬೆಳೆದಿರುವ ವಿಶ್ವನಾಥ್ ತಮ್ಮ ಅಜ್ಜ-ಅಜ್ಜಿಯ ಪ್ರಭಾವದಿಂದ ಸಂಗೀತ ಕಲಿತಿದ್ದಾರೆ. ಅವರ ಹೆಸರು ವಿಶ್ವನಾಥ್, ಅಜ್ಜನ ಹೆಸರನ್ನೇ ಇವರಿಗೆ ಇಡಲಾಗಿದೆ. ಹದಿಮೂರು ವರ್ಷದಿಂದ ಸಂಗೀತ ಅಭ್ಯಾಸ ಮಾಡ್ತಿದ್ದಾರೆ. ತಮ್ಮದೇ ಒಂದು ತಂಡವನ್ನು ಕಟ್ಟಿಕೊಂಡಿದ್ದಾರೆ.

Bigg Boss Kannada 8 Contestant Haadu Karnataka fame Vishwa Profile, Biography, Photos and Videos

''ಬಿಗ್ ಬಾಸ್‌ಗೆ ಬರಬೇಕೆನ್ನುವುದು ಬಹಳ ದಿನಗಳ ಆಸೆಯಾಗಿತ್ತು. ಆದರೆ, ಅವಕಾಶ ಸಿಕ್ಕಿರಲಿಲ್ಲ. ಆದ್ರೀಗ, ಅವಕಾಶ ಬಂದಾಗ ತುಂಬಾ ಖುಷಿ ಆಯ್ತು'' ಎಂದು ವಿಶ್ವನಾಥ್ ಸಂತಸ ಹಂಚಿಕೊಂಡಿದ್ದಾರೆ.

''ನನ್ನ ಜೀವನದಲ್ಲಿ ಅತಿ ದೊಡ್ಡ ವೇದಿಕೆಯಲ್ಲಿ ಸ್ಪರ್ಧೆ ಮಾಡಲು ಬಂದಿದ್ದೇನೆ. ಇಲ್ಲಿಂದ ನನ್ನ ಲೈಫ್ ಬದಲಾಗುತ್ತೆ ಎಂಬ ಆಶಯ ಹೊಂದಿದ್ದೇನೆ. ಬೆಳೆಯಬೇಕು ಎಂಬ ಛಲ ಹೊಂದಿರುವವರಿಗೆ ಇಂತಹ ಅವಕಾಶ ಸಿಕ್ಕಿದಾಗ ಯಾರೂ ಬಿಡಲ್ಲ. ನಾನಂತೂ ಬಿಡಲ್ಲ, ನಾನು ಚಾಲೆಂಜಿಂಗ್ ಪರ್ಸನ್'' ಎಂದು ವಿಶ್ವ ಹೇಳಿಕೊಂಡಿದ್ದಾರೆ.

More from Filmibeat

English summary
Here is the Bigg Boss Kannada Season 8 contestant Haadu Karnataka fame Vishwa detailed profile, biography, photos and video. Read on.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X