Bigg Boss Kannada Season 8; ಬಿಗ್ ಮನೆಗೆ ಎಂಟ್ರಿಯಾಗ್ತಾರೆ ಎಂದ ಆ ರಾಜಕಾರಣಿ ಎಲ್ಲಿ?

By ಫಿಲ್ಮ್ ಡೆಸ್ಕ್

ಕುತೂಹಲ ಮೂಡಿಸಿದ್ದ 'ಬಿಗ್ ಬಾಸ್ ಕನ್ನಡ ಸೀಸನ್ 8'ಕ್ಕೆ ಗ್ರ್ಯಾಂಡ್ ಓಪನಿಂಗ್ ಸಿಕ್ಕಿದೆ. 17 ಸ್ಪರ್ಧಿಗಳು ಈ ಬಾರಿ ಬಿಗ್ ಮನೆ ಸೇರಿದ್ದಾರೆ. ವಿಭಿನ್ನ ಕ್ಷೇತ್ರದಿಂದ ಬಂದ ಸ್ಪರ್ಧಿಗಳು ಬಿಗ್ ಬಾಸ್ ಮನೆಯ ಪಯಣ ಪ್ರಾರಂಭಿಸಿದ್ದಾರೆ. ವಿಶೇಷ ಎಂದರೆ ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ರಾಜಕಾರಣಿ ಒಬ್ಬರು ಇರಲಿದ್ದಾರೆ ಎನ್ನುವ ಮಾತನ್ನು ಬಿಗ್ ಬಾಸ್ ನಿರ್ದೇಶಕ ಪರಮೇಶ್ವರ್ ಗುಂಡ್ಕಲ್ ಮಾಹಿತಿ ನೀಡಿದ್ದರು.

ರಾಜಕಾರಣಿ ಎಂಟ್ರಿ ಎನ್ನುತ್ತಿದ್ದಂತೆ ಈ ಬಾರಿ ಬಿಗ್ ಮನೆ ಪ್ರವೇಶ ಮಾಡುವ ಆ ರಾಜಕಾರಣಿ ಯಾರು ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಮನೆ ಮಾಡಿತ್ತು. ನಿನ್ನೆಯ (ಫೆಬ್ರವರಿ 28) ಕಾರ್ಯಕ್ರಮದಲ್ಲಿ ಸ್ಪರ್ಧಿಗಳನ್ನು ವೇದಿಕೆ ಮೇಲೆ ಕರೆದು ಮನೆಯೊಳಗೆ ಕಳುಹಿಸುತ್ತಿದ್ದಂತೆ ಈ ಬಾರಿ ಬಿಗ್ ಮನೆ ಪ್ರವೇಶ ಮಾಡುವ ಆ ರಾಜಕಾರಣಿ ಯಾರು ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಹೆಚ್ಚಾಗುತ್ತಿತ್ತು. ಆದರೆ ಕೊನೆಗೂ ಆ ರಾಜಕಾರಣಿಯ ಪ್ರವೇಶ ಆಗಲೇ ಇಲ್ಲ. ಮುಂದೆ ಓದಿ...

ಬಿಗ್ ಬಾಸ್ ಮನೆಯಲ್ಲಿಲ್ಲ ರಾಜಕಾರಣಿ

ಬಿಗ್ ಬಾಸ್ ಮನೆಯಲ್ಲಿಲ್ಲ ರಾಜಕಾರಣಿ

ಕೊನೆಯ 17ನೇ ಸ್ಪರ್ಧಿ ಬಿಗ್ ಮನೆಗೆ ಎಂಟ್ರಿಯಾಯಿತು. ಆದರೆ 17 ಸ್ಪರ್ಧಿಗಳಲ್ಲಿ ಆ ಕುತೂಹಲದ ರಾಜಕಾರಣಿ ಕಾಣಿಸಿಲ್ಲ. ಕೊನೆಗೂ ಆ ರಾಜಕಾರಣಿ ಯಾರು ಎನ್ನುವ ಪ್ರಶ್ನೆಗೆ ಪ್ರೇಕ್ಷಕರಿಗೆ ಉತ್ತರ ಸಿಕ್ಕಿಲ್ಲ. ಹಾಗೆಂದ ಮೇಲೆ ಬಿಗ್ ಬಾಸ್ ಆಯೋಜಕರು ಯಾಕೆ ರಾಜಕಾರಣಿ ಇರ್ತಾರೆ ಎಂದರು? ಇದರ ಹಿಂದೆ ಪ್ರೇಕ್ಷಕರನ್ನು ಸೆಳೆಯುವ ಉದ್ದೇಶವಿತ್ತಾ? ಇದಕ್ಕೆ ಅವರೇ ಉತ್ತರಿಸಬೇಕು.

ಪ್ರಶಾಂತ್ ಸಂಬರ್ಗಿ ರಾಜಕಾರಣಿನಾ?

ಪ್ರಶಾಂತ್ ಸಂಬರ್ಗಿ ರಾಜಕಾರಣಿನಾ?

ಪರಮೇಶ್ವರ್ ಗುಂಡ್ಕಲ್ ಹೇಳಿದ್ದ ರಾಜಕಾರಣಿ ಪ್ರಶಾಂತ್ ಸಂಬರ್ಗಿ ಇರಬಹುದಾ? ಎನ್ನುವ ಚರ್ಚೆಯು ನಡೆಯುತ್ತಿದೆ. ಯಾಕೆಂದರೆ ವಿಧಾನಸೌಧ ಮುಂಭಾಗದಲ್ಲಿ ಪ್ರಶಾಂತ್ ಸಂಬರ್ಗಿ ಪ್ರೋಮೋ ಶೂಟ್ ಮಾಡಲಾಗಿದೆ. ಅಂದ್ಮೇಲೆ ಬಿಗ್ ಬಾಸ್ ಪ್ರಕಾರ ರಾಜಕಾರಣಿ ಎಂದರೆ ಪ್ರಶಾಂತ್ ಸಂಬರ್ಗಿನಾ ಎನ್ನುವ ಪ್ರಶ್ನೆಯೂ ಕೇಳಿಬರುತ್ತಿದೆ.

ಸಂಬರ್ಗಿ ರಾಜಕೀಯ ವ್ಯಕ್ತಿಯಾಗಿ ಗುರುತಿಸಿಕೊಂಡಿಲ್ಲ

ಸಂಬರ್ಗಿ ರಾಜಕೀಯ ವ್ಯಕ್ತಿಯಾಗಿ ಗುರುತಿಸಿಕೊಂಡಿಲ್ಲ

ಪ್ರಶಾಂತ್ ಸಂಬರ್ಗಿ ಅಧಿಕೃತವಾಗಿ ಯಾವ ರಾಜಕೀಯ ಪಕ್ಷವನ್ನು ಸೇರಿಕೊಂಡಿಲ್ಲ, ರಾಜಕೀಯದಲ್ಲಿ ಸಕ್ರೀಯರಾಗಿಲ್ಲ. ಹಾಗಂದ ಮೇಲೆ ಅವರನ್ನು ರಾಜಕೀಯ ವ್ಯಕ್ತಿ ಎಂದು ಕರೆಯಲು ಸಾಧ್ಯವಿಲ್ಲ. ಅಥವಾ ಮುಂದೊಂದು ದಿನ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆ ಎನ್ನುವ ಕಾರಣಕ್ಕೆ ಹೀಗೆ ಹೇಳಿದ್ರಾ? ಗೊತ್ತಿಲ್ಲ. ಪ್ರೇಕ್ಷಕರ ತಲೆಯಲ್ಲಿ ಹುಳಬಿಟ್ಟಿದ್ದ ರಾಜಕಾರಣಿ ಸ್ಪರ್ಧಿ ಬಗ್ಗೆ ಬಿಗ್ ಬಾಸ್ ಆಯೋಜಕರೇ ಸ್ಪಷ್ಟನೆ ನೀಡಬೇಕು.

ವೈಲ್ಡ್ ಕಾರ್ಡ್ ಎಂಟ್ರಿಯಲ್ಲಿ ಇರ್ತಾರಾ ಆ ರಾಜಕಾರಣಿ

ವೈಲ್ಡ್ ಕಾರ್ಡ್ ಎಂಟ್ರಿಯಲ್ಲಿ ಇರ್ತಾರಾ ಆ ರಾಜಕಾರಣಿ

ಸದ್ಯ ಬಿಗ್ ಮನೆ ಪ್ರವೇಶ ಮಾಡಿದ 17 ಸ್ಪರ್ಧಿಗಲ್ಲಿ ಯಾರು ರಾಜಕೀಯ ವ್ಯಕ್ತಿಗಳಿಲ್ಲ. ಹಾಗಂದ ಮೇಲೆ ವೈಲ್ಡ್ ಕಾರ್ಡ್ ಎಂಟ್ರಿಯಲ್ಲಿ ರಾಜಕಾರಣಿ ಬಿಗ್ ಬಾಸ್ ಮನೆ ಪ್ರವೇಶ ಮಾಡುತ್ತಾರಾ ಎನ್ನುವ ಕುತೂಹಲ ಮೂಡಿಸಿದೆ.

ಪರಮೇಶ್ವರ್ ಗುಂಡ್ಕಲ್ ಹೇಳಿದ್ದೇನು?

ಪರಮೇಶ್ವರ್ ಗುಂಡ್ಕಲ್ ಹೇಳಿದ್ದೇನು?

ಇತ್ತೀಚಿಗೆ ನಡೆದ ಬಿಗ್ ಬಾಸ್ ಪತ್ರಿಕಾಗೋಷ್ಠಿಯಲ್ಲಿ ಬಿಗ್ ಬಾಸ್ ಆಯೋಜಕ ಪರಮೇಶ್ವರ್ ಗುಂಡ್ಕಲ್. 'ಈ ಸಲ ಬಿಗ್ ಮನೆಯಲ್ಲಿ ರಾಜಕಾರಣಿಯೊಬ್ಬರು ಇರಲಿದ್ದಾರೆ, ಆ ರಾಜಕಾರಣಿ ಸುದೀಪ್ ಅವರಿಗೂ ಗೊತ್ತಿದ್ದಾರೆ' ಎಂದು ಹೇಳಿದ್ದರು. ಹಾಗೆಂದ ಮೇಲೆ ಯಾರಿರಬಹುದು ಎನ್ನುವ ಕುತೂಹಲ ಎಲ್ಲರಲ್ಲೂ ಮನೆಮಾಡಿತ್ತು. ಆದರೆ ಕೊನೆಗೂ ಆ ಕುತೂಹಲ ಹಾಗೆ ಉಳಿದಿದೆ.

More from Filmibeat

English summary
Bigg Boss Kannada 8 Contestant: No politicians in this season.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X