'ಸಾಮಾಜಿಕ ಹೋರಾಟಗಾರ' ಪ್ರಶಾಂತ್ ಸಂಬರ್ಗಿ ಬಿಗ್‌ಬಾಸ್ ಮನೆಯಲ್ಲಿ

ತಮ್ಮನ್ನು ತಾವು ಸಾಮಾಜಿಕ ಹೋರಾಟಗಾರ ಎಂದು ಕರೆದುಕೊಳ್ಳುವ ಪ್ರಶಾಂತ್ ಸಂಬರ್ಗಿ ಬಿಗ್‌ಬಾಸ್ ಮನೆಯನ್ನು ಪ್ರವೇಶಿಸಿದ್ದಾರೆ.

ಅರ್ಜುನ್ ಸರ್ಜಾ-ಶ್ರುತಿ ಹರಿಹರನ್, ಡ್ರಗ್ಸ್ ಪ್ರಕರಣ, ಸೇರಿದಂತೆ ಸಿನಿಮಾಕ್ಕೆ ಸಂಭಂದಿಸಿದ ಹಲವು ವಿವಾದಗಳ ಬಗ್ಗೆ ಬಹು ವಾಚ್ಯವಾಗಿ ಮಾತನಾಡುತ್ತಿದ್ದ ಪ್ರಶಾಂತ್ ಸಂಬರ್ಗಿ ಅವರು ಬಿಗ್‌ಬಾಸ್ ಮನೆಯಲ್ಲಿಯೂ ತಮ್ಮ 'ಹೋರಾಟ' ಮುಂದುವರೆಸುತ್ತಾರೆಯೇ ನೋಡಬೇಕಿದೆ.

ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣದ ಬಗ್ಗೆ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳ ಮುಂದೆ ಬಹಳವಾಗಿ ಮಾತನಾಡಿದ್ದರು ಪ್ರಶಾಂತ್ ಸಂಬರ್ಗಿ. ರಾಗಿಣಿ ಹಾಗೂ ಸಂಜನಾ ಸೇರಿದಂತೆ ಹಲವು ರಾಜಕಾರಣಿಗಳ ವಿರುದ್ಧವು ಸತತವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು.

Bigg Boss Kannada 8 Contestant Prashanth Sambargi Profile

ಬಿಜೆಪಿ ಪಕ್ಷವನ್ನು ಬೆಂಬಲಿಸುತ್ತಿರುವ ಪ್ರಶಾಂತ್ ಸಂಬರ್ಗಿ ಸ್ವತಃ ರಾಜಕಾರಣಿಯೂ ಆಗಿದ್ದಾರೆ. ಈ ಹಿಂದೆ ಕೆಲವು ಸಿನಿಮಾಗಳನ್ನು ಕರ್ನಾಟಕದಲ್ಲಿ ವಿತರಣೆ ಸಹ ಮಾಡಿದ್ದರು. ಸುದೀಪ್, ನಟ ಉಪೇಂದ್ರ ಸೇರಿದಂತೆ ಕೆಲವು ನಟರೊಂದಿಗೆ ಜಾಹಿರಾತುಗಳಲ್ಲಿ ಕೆಲಸ ಮಾಡಿದ್ದಾರೆ ಪ್ರಶಾಂತ್ ಸಂಬರ್ಗಿ.

ಸಿನಿಮಾರಂಗದಲ್ಲಿ ಗೆಳೆಯರನ್ನು ಹೊಂದಿರುವ ಪ್ರಶಾಂತ್ ಸಂಬರ್ಗಿ ಸಾಕಷ್ಟು ವಿರೋಧಿಗಳನ್ನು ಸಹ ಹೊಂದಿದ್ದಾರೆ.

ಯಾವುದೇ ವ್ಯಕ್ತಿಯ ವ್ಯಕ್ತಿತ್ವವನ್ನು ಕೇವಲ ಎರಡೇ ಗಂಟೆಯಲ್ಲಿ ಕಂಡು ಹಿಡಿಯುವ ಸಾಮರ್ಥ್ಯ ತಮಗೆ ಇದೆ ಎಂದ ಪ್ರಶಾಂತ್ ಸಂಬರ್ಗಿ. ಎಲ್ಲೇ ಅನ್ಯಾಯ ಕಂಡರೂ ಅದನ್ನು ಖಂಡಿಸುವ ವ್ಯಕ್ತಿತ್ವ ನನ್ನದು ಬಿಗ್‌ಬಾಸ್ ಮನೆಯಲ್ಲಿಯೂ ಸಹ ಹಾಗೆಯೇ ಇರುತ್ತೇನೆ' ಎಂದರು ಪ್ರಶಾಂತ್ ಸಂಬರ್ಗಿ.

More from Filmibeat

English summary
Here is the Bigg Boss Kannada Season 8 contestant Prashanth Sambargi detailed profile, biography, photos and video. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X