ಬಿಗ್ ಬಾಸ್ 6ನೇ ಸ್ಪರ್ಧಿ ರೇಸರ್ ಅರವಿಂದ್ ಸಾಧನೆ ಬಹಳ ದೊಡ್ಡದು
ಬಿಗ್ ಬಾಸ್ ಕನ್ನಡ ಏಂಟನೇ ಆವೃತ್ತಿಯಲ್ಲಿ 6ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ರೇಸರ್ ಅರವಿಂದ್ ಸಾಮಾನ್ಯ ವ್ಯಕ್ತಿಯಲ್ಲ. ಅರವಿಂದ್ ಬೈಕ್ ರೇಸರ್, ಸಾಹಸ ಕಲಾವಿದ. ಹಲವು ಸಿನಿಮಾಗಳಲ್ಲಿ, ಜಾಹೀರಾತುಗಳಲ್ಲಿ ಸಾಹಸ ಕಲಾವಿದನಾಗಿ ಕಾಣಿಸಿಕೊಂಡಿದ್ದಾರೆ.
ಸ್ಟಾರ್ ಕ್ರಿಕೆಟಿಗರಿಗೆ, ಸ್ಟಾರ್ ಹೀರೋಗಳಿಗೆ ಡೂಪ್ ಕಲಾವಿದನಾಗಿ ಕೆಲಸ ಮಾಡಿದ್ದಾರೆ. 300 ಕಿಮೀ ವೇಗದಲ್ಲಿ ಬೈಕ್ ಓಡಿಸುವ ಸಾಹಸಿ ಅರವಿಂದ್. ಈ ಸಾಹಸದಲ್ಲಿ ಅರವಿಂದ್ ಅವರಿಗೆ ಹಲವು ಬಾರಿ ಅಪಘಾತಗಳು ಸಂಭವಿಸಿದೆ.
ಹಲವು ಸಲ ಶಸ್ತ್ರ ಚಿಕಿತ್ಸೆ ಸಹ ಆಗಿದೆ. ಆದರೂ ಅರವಿಂದ್ ಈ ಸಾಹಸದಿಂದ ಹಿಂದೆ ಸರಿದಿಲ್ಲ. ವಿಶ್ವ ಪ್ರಸಿದ್ಧ ಡಕಾರ್ ರ್ಯಾಲಿಯಲ್ಲಿ ಭಾಗವಹಿಸಿರು ಭಾರತದ ಎರಡನೇ ರೇಸರ್ ಎಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

ಅಂದ್ಹಾಗೆ, ಮಲಯಾಳಂ ಭಾಷೆಯ ಸೂಪರ್ ಹಿಟ್ ಸಿನಿಮಾ 'ಬೆಂಗಳೂರು ಡೇಸ್' ಚಿತ್ರದಲ್ಲಿ ಅರವಿಂದ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.
ಬಿಗ್ ಬಾಸ್‌ಗೆ ಆರನೇ ಸ್ಪರ್ಧಿಯಾಗಿ ಪ್ರವೇಶಿಸಿರುವ ಅರವಿಂದ್‌ಗೆ ಮೊದಲ ಎಂಟ್ರಿಯಲ್ಲೇ ಲವರ್ ಬಾಯ್ ಇಮೇಜ್ ನೀಡಿದ್ದಾರೆ ಸುದೀಪ್. ಕೈಯಲ್ಲಿ ಹೂಗುಚ್ಛ ನೀಡಿ ''ನಿಮಗೆ ಇಷ್ಟವಾದ ಹುಡುಗಿಗೆ ಕೊಡಿ'' ಎಂದು ಹೇಳಿ ಕಳುಹಿಸಿದ್ದಾರೆ.


Click it and Unblock the Notifications











