'ವೈನ್ ಸ್ಟೋರ್' ಮೂಲಕ ಸಖತ್ ಫೇಮಸ್ ರಘು ಗೌಡ ಈಗ ಬಿಗ್ ಬಾಸ್‌ಗೆ ಎಂಟ್ರಿ
ಬಿಗ್ ಬಾಸ್ ಮನೆಗೆ ಹದಿಮೂರನೇ ಸ್ಪರ್ಧಿಯಾಗಿ ಸೋಶಿಯಲ್ ಮೀಡಿಯಾ ಸ್ಟಾರ್ ರಘು ಗೌಡ ಎಂಟ್ರಿಯಾಗಿದ್ದಾರೆ. ವೈನ್ ಸ್ಟೋರ್ ಎಂಬ ಯ್ಯೂಟ್ಯೂಬ್ ಚಾನಲ್ ಮೂಲಕ ಜನರನ್ನು ತಲುಪಿರುವ ರಘು ಗೌಡ ಈಗ ದೊಡ್ಮನೆಯಲ್ಲಿ ಸ್ಟಾರ್ ಆಗಲು ಹೊರಟಿದ್ದಾರೆ.
ಐಟಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ರಘು ಗೌಡ ಜೀವನದಲ್ಲಿ ಬೇರೆ ಏನಾದರೂ ಮಾಡಬೇಕೆಂಬ ಆಸೆಯಿಂದ ಆ ಕೆಲಸಕ್ಕೆ ಗುಡ್ ಬೈ ಹೇಳಿ ಎಂಟರ್‌ಟೈನ್‌ಮೆಂಟ್ ಕಡೆ ಮುಖ ಮಾಡಿದರು.
ವೈನ್ ಸ್ಟೋರ್ ಹೆಸರಿನಲ್ಲಿ ಯೂಟ್ಯೂಬ್ ಚಾನಲ್ ಸೃಷ್ಟಿಸಿ, ಅನೇಕ ರೀತಿಯ ವಿಡಿಯೋಗಳನ್ನು ಮಾಡಲು ಶುರು ಮಾಡಿದರು. ಜನರ ದಿನನಿತ್ಯದ ಬದುಕು, ಸಮಾಜದಲ್ಲಿ ನಡೆಯುವ ಆಗುಹೋಗುಗಳನ್ನೇ ಸಣ್ಣ ಸಣ್ಣ ಕಥೆಯನ್ನಾಗಿಸಿ, ಹಾಸ್ಯದ ರೂಪದಲ್ಲಿ ತಲುಪಿಸುವ ಕೆಲಸ ಮಾಡ್ತಾರೆ.

ರಘು ಗೌಡ ಅವರಿಗೆ ಫೇಸ್‌ಬುಕ್, ಯೂಟ್ಯೂಬ್ ಹಾಗೂ ಇನ್ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಇದ್ದಾರೆ. ವೈನ್ ಸ್ಟೋರ್ ಚಾನಲ್‌ಗೆ 1.80 ಲಕ್ಷ ಜನರ ಅನುಯಾಯಿಗಳಾಗಿದ್ದಾರೆ.
ರಘು ಗೌಡ ಅವರಿಗೆ ವಿವಾಹವಾಗಿದ್ದು, ಮಡದಿ ಮತ್ತು ಒಬ್ಬ ಮಗ ಇದ್ದಾನೆ. ರಘು ಪದವಿ ಓದುತ್ತಿದ್ದಾಗಲೇ ತಂದೆ ಮತ್ತು ತಾಯಿ ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡರು. ಅಪ್ಪ ಅಮ್ಮನ ಪ್ರೀತಿ ಕಳೆದುಕೊಂಡಿದ್ದ ರಘು ಬೇಗನೇ ಮದುವೆ ಸಹ ಆದರು.
ಇಷ್ಟು ದಿನ ಸೋಶಿಯಲ್ ಮೀಡಿಯಾದಲ್ಲಿ ಸ್ಟಾರ್ ಆಗಿದ್ದ ರಘು ಗೌಡ ಈಗ ದೊಡ್ಮನೆಯಲ್ಲಿ ಸ್ಟಾರ್ ಆಗಲು ಹೊರಟಿದ್ದಾರೆ.


Click it and Unblock the Notifications











