ಜೀವನ ಸಾಗಿಸಲು ಟ್ಯಾಕ್ಸಿ ಓಡಿಸುತ್ತಿದ್ದ ನಟ ಶಂಕರ್ ಅಶ್ವತ್ಥ್ ಬಿಗ್‌ಬಾಸ್ ಸ್ಪರ್ಧಿ
ಕನ್ನಡದ ಮೇರು ನಟ ಚಾಮಯ್ಯ ಮೇಷ್ಟ್ರು ಖ್ಯಾತಿಯ ಕೆ.ಎಸ್.ಅಶ್ವತ್ಥ್ ಅವರ ಪುತ್ರ ಶಂಕರ್ ಅಶ್ವತ್ಥ್ ತಮ್ಮ ಜೀವನದಲ್ಲಿ ಹಲವು ಏಳು ಬೀಳುಗಳನ್ನು ಕಂಡವರು.
ಅಪ್ಪ ಕೆ.ಎಸ್.ಅಶ್ವತ್ಥ್ ಮೇರು ನಟನಾಗಿದ್ದರು. ಶಂಕರ್ ಅಶ್ವತ್ಥ್ ಸಹ ಹಲವು ಸಿನಿಮಾ ಧಾರಾವಾಹಿಗಳಲ್ಲಿ ನಟಿಸಿ ಹೆಸರು ಮಾಡಿದ್ದವರು. ಆದರೆ ಜೀವನ ಹೊರಳಿದಾಗ ಸಿನಿಮಾದಲ್ಲಿ ಅವಕಾಶ ಕಡಿಮೆ ಆಗಿ ಬದುಕು ಕಷ್ಟಕ್ಕೆ ಸಿಲುಕಿಕೊಂಡು ಜೀವನ ನಡೆಸಲು ಟ್ಯಾಕ್ಸಿ ಡ್ರೈವರ್ ಆಗಿ ಕೆಲಸ ಮಾಡಲು ಆರಂಭಿಸಿದ್ದರು. ಇದೇ ಶಂಕರ್ ಅಶ್ವತ್ಥ್ ಇಂದು ಬಿಗ್‌ಬಾಸ್ ಕನ್ನಡ ಸೀಸನ್ 08 ಗೆ ಮೂರನೇ ಸ್ಪರ್ಧಿಯಾಗಿ ಬಂದಿದ್ದಾರೆ.
ಶಂಕರ್ ಅಶ್ವತ್ಥ್ ತಮ್ಮ ಜೀವನದಲ್ಲಿ ಹಲವು ಏಳು-ಬೀಳುಗಳನ್ನು ಕಂಡವರು. ಸಾಕಷ್ಟು ಜೀವನಾನುಭವ ಹೊಂದಿರುವವರು. ಈವರೆಗೆ ಬಿಗ್‌ಬಾಸ್ ಪ್ರವೇಶಿಸಿರುವ ಸ್ಪರ್ಧಿಗಳಲ್ಲಿ ಹಿರಿಯ ಸ್ಪರ್ಧಿ ಸಹ ಅವರೇ.

ಶಂಕರ್ ಅವರು ಜೀವನ ನಡೆಸಲು ಟ್ಯಾಕ್ಸಿ ಆರಂಭಿಸಲು ಪ್ರಾರಂಭಿಸಿದಾಗ ಅವರ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದವು. ಆ ನಂತರ ಮತ್ತೆ ಅವರಿಗೆ ಅವಕಾಶಗಳು ಸಿಗಲು ಆರಂಭವಾದವು. ಇತ್ತೀಚೆಗೆ ಬಿಡುಗಡೆ ಆದ 'ಪೊಗರು' ಸಿನಿಮಾದಲ್ಲಿ ಶಂಕರ್ ಅಶ್ವತ್ಥ್ ಅವರು ನಾಯಕಿಯ ತಂದೆಯ ಪಾತ್ರದಲ್ಲಿ ನಟಿಸಿದ್ದಾರೆ.


Click it and Unblock the Notifications











