ಬಿಗ್‌ಬಾಸ್‌ಗಾಗಿ ಹಿರಿತೆರೆಯಿಂದ ಕಿರುತೆರೆಗೆ ಬಂದ ಗ್ಲಾಮರ್ ಕ್ವೀನ್
ಖ್ಯಾತ ನಟಿ ಶುಭಾ ಪೂಂಜಾ ಅವರು ಬಿಗ್‌ಬಾಸ್‌ನ ಎರಡನೇ ಸ್ಪರ್ಧಿಯಾಗಿ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದಾರೆ.
ಕನ್ನಡ ಸೇರಿದಂತೆ ಇನ್ನೂ ಕೆಲವು ಭಾಷೆಗಳಲ್ಲಿ ನಟಿಸಿರುವ ಶುಭಾ ಪೂಂಜಾ ಅವರು 'ಮೊಗ್ಗಿನ ಮನಸ್ಸು' ಸಿನಿಮಾ ಮೂಲಕ ಸಿನಿಜೀವನ ಆರಂಭಿಸಿದ್ದರು. ಒಂದು ದಶಕಕ್ಕಿಂತಲೂ ಹೆಚ್ಚು ಕಾಲ ಸಿನಿಮಾಗಳಲ್ಲಿ ನಟಿಸಿರುವ ಶುಭಾ ಅವರು ಇದೀಗ ಬಿಗ್‌ಬಾಸ್‌ಗೆ ಬಂದಿದ್ದಾರೆ.
ಶುಭಾ ಪೂಂಜಾ ಅವರಿಗೆ ಹಲವು ಬಾರಿ ಬಿಗ್‌ಬಾಸ್ ಇಂದ ಆಫರ್ ಬಂದಿದ್ದವು. ಸುದೀಪ್ ಅವರೇ ಹೇಳಿದಂತೆ ಸುಮಾರು ಏಳು ಸೀಸನ್‌ಗೂ ಶುಭಾ ಪೂಂಜಾ ಅವರಿಗೆ ಅವಕಾಶ ಸಿಕ್ಕಿತ್ತು ಆದರೆ ಶುಭಾ ಅವರು ಅವಕಾಶ ನಿರಾಕರಿಸಿದ್ದರು. ಇದೀಗ ಎಂಟನೇ ಸೀಸನ್‌ಗೆ ಶುಭಾ ಅವರು ಬಂದಿದ್ದಾರೆ.

ಶುಭಾ ಪೂಂಜಾ ಅವರು ಬಿಗ್‌ಬಾಸ್‌ಗೆ ಬರಲು ಕಾರಣ ಅವರ ಭಾವಿ ಪತಿ ಸುಮಂತ್ ಅವರೇ ಅಂತೆ. ಶುಭಾ ಅವರೇ ಬಿಗ್‌ಬಾಸ್ ನಲ್ಲಿ ಹೇಳಿರುವಂತೆ ನನ್ನ ಭಾವಿ ಪತಿಯೇ ನನ್ನನ್ನು ಬಿಗ್‌ಬಾಸ್‌ಗೆ ಹೋಗುವಂತೆ ಹೇಳಿದರಂತೆ.
'ಈ ವರ್ಷ ಹೇಗೋ ಮದುವೆ ಆಗುತ್ತೇವೆ, ಅದಾದ ಮೇಲೆ ನನ್ನ ಗಂಡ ನನ್ನನ್ನು ಗಂಡ ಬಿಡೊಲ್ಲ, ಈಗಾದರೂ ಹೋಗಿ, ನಿನ್ನಷ್ಟದ್ದಂತೆ ಇದ್ದು ಬಾ' ಎಂದು ಬೆಂಬಲ ನೀಡಿದರಂತೆ ಸುಂಮತ್.
'ನನ್ನ ಜೀವನದಲ್ಲಿ ಸರಿಯಾದ ಸಮಯದಲ್ಲಿ ಸರಿಯಾದ ಅವಕಾಶ ಒದಗಿ ಬಂದಿದೆ. ಈ ಅವಕಾಶವನ್ನು ತೆಗೆದುಕೊಂಡು, ನನ್ನನ್ನು ನಾನು ಮತ್ತೊಮ್ಮೆ ಪ್ರೋವ್ ಮಾಡಿಕೊಂಡು ಇನ್ನು ಮುಂದಿನ ಜೀವನ ಸಾಗಿಸಲಿದ್ದೇನೆ' ಎಂದರು ಶುಭಾ ಪೂಂಜಾ.
ಬಿಗ್‌ಬಾಸ್ ಮನೆಗೆ ಬರಲು ಸಾಕಷ್ಟು ಹೆದರಿಕೆ ಇದೆ ಎಂದು ಶುಭಾ ಪೂಂಜಾ, 'ನಾನು ಸಾಕಷ್ಟು ನರ್ವಸ್ ಆಗಿದ್ದೇನೆ. ನಾನು ಮೊದಲ ಬಾರಿಗೆ ಸಿನಿಮಾಕ್ಕೆ ಬಂದಾಗ ಎಷ್ಟು ವರ್ವಸ್ ಆಗಿದ್ದೆನೋ ಬಿಗ್‌ಬಾಸ್ ಮನೆಹೂ ಅಷ್ಟೇ ನರ್ವಸ್ ಆಗಿದ್ದೇನೆ. ನನಗೆ ಸಿಟ್ಟು ಬಹಳ ಬೇಗ ಬರುತ್ತದೆ, ಅದೇ ನನ್ನ ಭಯ' ಎಂದರು ಶುಭಾ ಪೂಂಜಾ.


Click it and Unblock the Notifications











