ರಾತ್ರೋರಾತ್ರಿ ರಾ..ರಾ..ಲುಕ್ ನಲ್ಲಿ ಕಾಣಿಸಿಕೊಂಡ ನಿರ್ಮಲಾ: ಭಯಭೀತರಾಗಿರುವ ಸ್ಪರ್ಧಿಗಳು

ಬಿಗ್ ಬಾಸ್ ಮನೆಯಲ್ಲಿ ಮೊದಲ ವಾರವೇ ಸ್ಪರ್ಧಿಗಳ ನಡುವೆ ವೈಮನಸ್ಸು ಪ್ರಾರಂಭವಾಗಿದೆ. ಬಿಗ್ ಮನೆಯ ಸ್ಪರ್ಧಿಗಳ ನಡುವೆ ಎರಡು ಗುಂಪಾಗಿದ್ದು, ಒಬ್ಬರು ಮತ್ತೊಬ್ಬರ ಬಗ್ಗೆ ಮಾತನಾಡಿಕೊಳ್ಳಲು ಆರಂಭಿಸಿದ್ದಾರೆ. ಸದ್ಯ ಮನೆಯ ಕ್ಯಾಪ್ಟನ್ ಆಗಿರುವ ಬ್ರೋ ಗೌಡ ವಿರುದ್ಧ ಅನೇಕರು ಅಸಮಾಧಾನ ಹೊರಹಾಕುತ್ತಿದ್ರೆ ಇನ್ನು ಕೆಲವರು ಬ್ರೋ ಗೌಡ ಪರ ನಿಂತಿದ್ದಾರೆ.

ಮನೆಯ ಕ್ಯಾಪ್ಟನ್ ಆಗಿ ಎರಡನೇ ವಾರವು ಬ್ರೋ ಗೌಡ ಆಯ್ಕೆಯಾಗಿದ್ದಾರೆ. ಇದು ಮನೆಯ ಕೆಲವು ಸ್ಪರ್ಧಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಈ ಕಿತ್ತಾಟಗಳ ನಡುವೆ ನಿರ್ಮಲಾ ಅವರ ವಿಚಿತ್ರ ವರ್ತನೆ ಉಳಿದ ಸ್ಪರ್ಧಿಗಳ ಭಯಕ್ಕೆ ಕಾರಣವಾಗಿದೆ. ಮನೆಯ ಎಲ್ಲಾ ಸ್ಪರ್ಧಿಗಳಿಂದ ಅಂತರ ಕಾಯ್ದುಕೊಂಡಿರುವ ನಿರ್ಮಲಾ ಒಬ್ಬರೇ ಮಾತನಾಡಲು ಪ್ರಾರಂಭಿಸಿದ್ದಾರೆ.

ನಿರ್ಮಲಾ ನೋಡಿ ತಲೆ ಕೆಟ್ಟೋಗುತ್ತಿದೆ ಎಂದ ಶಮಂತ್

ನಿರ್ಮಲಾ ನೋಡಿ ತಲೆ ಕೆಟ್ಟೋಗುತ್ತಿದೆ ಎಂದ ಶಮಂತ್

ನಿರ್ಮಲಾ ಅವರ ವರ್ತನೆ ಬಿಗ್ ಮನೆಯ ಸ್ಪರ್ಧಿಗಳಿಗೆ ವಿಚಿತ್ರವಾಗಿ ಕಾಣುತ್ತಿದೆ. ರಾತ್ರೋರಾತ್ರಿ ಮೇಕಪ್ ಮಾಡಿಕೊಂಡು ಸೀರೆ ಧರಿಸಿ ಒಬ್ಬೊಬ್ಬರೆ ಮಾತನಾಡುತ್ತಾ ಕುಳಿತಿರುವ ನಿರ್ಮಲಾ ನೋಡಿ ಉಳಿದ ಸ್ಪರ್ಧಿಗಳು ಗಾಬರಿಯಾಗಿದ್ದಾರೆ. ಮನೆಯ ಕ್ಯಾಪ್ಟನ್ ಆಗಿರುವ ಶಮಂತ್, ಇಲ್ಲಿ ಏನು ನಡಿಯುತ್ತಿದೆ ಎಂದು ಗೊತ್ತಾಗುತ್ತಿಲ್ಲ, ತಲೆ ಕೆಡ್ತಿದೆ, ರಾತ್ರಿ ಸೀರೆ ಧರಿಸಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇದು ಪ್ರೇಕ್ಷಕರನ್ನು ಸೆಳೆಯುವ ತಂತ್ರನಾ?

ಇದು ಪ್ರೇಕ್ಷಕರನ್ನು ಸೆಳೆಯುವ ತಂತ್ರನಾ?

ನಿರ್ಮಲಾ ಅಜ್ಜಿ ಸೀರೆ ಎಂದು ಹೇಳುತ್ತಾ ಮೇಕಪ್ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ಉಳಿದ ಸ್ಪರ್ಧಿಗಳು ರಾ..ರಾ.. ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ, 24 ಗಂಟೆ ಮಾತನಾಡುತ್ತಿರುತ್ತಾರೆ, ಆಡಿಯನ್ಸ್ ಕಣ್ಣು ಅವರ ಮೇಲೆ ಬೀಳಲಿ ಎಂದು ಹೀಗೆ ಮಾಡುತ್ತಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ಭಯವಾಗುತ್ತಿದೆ ಎಂದು ಬ್ರೋ ಗೌಡ

ಭಯವಾಗುತ್ತಿದೆ ಎಂದು ಬ್ರೋ ಗೌಡ

ನಿರ್ಮಲಾ ಒಬ್ಬರೇ ಕುಳಿತುಕೊಂಡು, 'ನಾನು ಇಲ್ಲ ಯಾರನ್ನು ಗೆಲ್ಲಲಿಕ್ಕೆ ಬಂದಿಲ್ಲ, ನನ್ನನ್ನು ನಾನು ಗೆಲ್ಲಲು ಬಂದಿದ್ದೀನಿ' ಎಂದು ಹೇಳುತ್ತಿದ್ದಾರೆ. ಭಯಭೀತರಾಗಿರುವ ಶಮಂತ್, ನಿರ್ಮಲಾ ಅವರು ಎಲ್ಲರಿಂದ ಝೋನ್ ಔಟ್ ಆಗಿದ್ದಾರೆ, ತುಂಬಾ ಭಯ ಆಗುತ್ತಿದೆ ಎಂದು ಬಿಗ್ ಬಾಸ್ ಕ್ಯಾಮರಾದಲ್ಲಿ ಹೇಳುತ್ತಿದ್ದಾರೆ.

ನಾಮಿನೇಷನ್ ನಿಂದ ಬಚಾವ್ ಮಾಡಿದ್ದ ಸಂಬರ್ಗಿ

ನಾಮಿನೇಷನ್ ನಿಂದ ಬಚಾವ್ ಮಾಡಿದ್ದ ಸಂಬರ್ಗಿ

ಟಾಸ್ಕ್ ನಲ್ಲಿ ಸೋತು ಈ ಬಾರಿ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದ ನಿರ್ಮಲಾ ಅವರನ್ನು ಪ್ರಶಾಂತ್ ಸಂಬರ್ಗಿ ಬಚಾವ್ ಮಾಡಿದ್ದಾರೆ. ಸಂಬರ್ಗಿ ಅವರಿಗೆ ಬಿಗ್ ಬಾಸ್ ಎರಡು ಆಯ್ಕೆಗಳನ್ನು ಮುಂದಿಟ್ಟಿತ್ತು. ಒಂದು ಕಡೆ ಕಾಫಿ ಪುಡಿ ಪ್ಯಾಕ್ ಗಳು ಮತ್ತೊಂದು ಕಡೆ ನಿರ್ಮಲಾ ಅವರ ಲಗೇಜ್. ಎರಡರಲ್ಲಿ ಯಾವುದನ್ನು ಆಯ್ಕೆ ಮಾಡುತ್ತೀರಿ ಎಂದು ಬಿಗ್ ಬಾಸ್ ಕೇಳಿದಾಗ ಪ್ರಶಾಂತ್ ಸಂಬರ್ಗಿ, ನಿರ್ಮಲಾ ಅವರ ಲಗೇಜ್ ಅನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ನಿರ್ಮಲಾ ಅವರನ್ನು ನಾಮಿನೇಷನ್ ನಿಂದ ಸೇವ್ ಮಾಡಿದ್ದಾರೆ.

More from Filmibeat

English summary
bigg boss kannada 8: Bigg Boss contestants are terrified by the behavior of Nirmala Chennappa.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X