Bigg Boss Kannada 8 : ಬಿಗ್ ಮನೆ ಪ್ರವೇಶ ಮಾಡಿದ 17 ಸ್ಪರ್ಧಿಗಳ ವಿವರ

ಭಾರಿ ನಿರೀಕ್ಷೆಗಳೊಂದಿಗೆ ಬಿಗ್ ಬಾಸ್ ಕನ್ನಡ ಏಂಟನೇ ಆವೃತ್ತಿ ಆರಂಭವಾಗಿದೆ. ಭಾನುವಾರ ಸಂಜೆ 6 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ನೇರ ಪ್ರಸಾರ ಪ್ರಾರಂಭವಾಗಿದೆ. ಈ ಸಲ ದೊಡ್ಮನೆಗೆ 17 ಸ್ಪರ್ಧಿಗಳು ಪ್ರವೇಶ ಮಾಡಲಿದ್ದು, ಯಾರೆಲ್ಲ ಇರಲಿದ್ದಾರೆ ಎಂಬ ಚರ್ಚೆಯೂ ಅನೇಕ ದಿನಗಳಿಂದ ನಡೆಯುತ್ತಿತ್ತು. ಇದೀಗ ಆ ಎಲ್ಲಾ ಕುತೂಹಲಕ್ಕೆ ತೆರೆ ಬೀಳುವ ಸಮಯ ಬಂದಿದೆ.

ಎಂದಿನಂತೆ ಕಿಚ್ಚ ಸುದೀಪ್ ಬಿಗ್ ಬಾಸ್ ಮನೆಗೆಯೊಳಗೆ ಎಂಟ್ರಿ ಕೊಟ್ಟಿದ್ದು, ಬಿಗ್ ಬಾಸ್ ಮನೆಯನ್ನು ಪರಿಚಯ ಮಾಡಿಕೊಟ್ಟಿದ್ದಾರೆ. ಬಳಿಕ ಸುದೀಪ್ ಮೊದಲ ಸ್ಪರ್ಧಿಯನ್ನು ವೇದಿಕೆ ಮೇಲೆ ಕರೆಯುವ ಮೂಲಕ ಈ ಬಾರಿಯ ಬಿಗ್ ಬಾಸ್ ನ ಮೊದಲ ಸ್ಪರ್ಧಿ ಎಂಟ್ರಿ ಕೊಟ್ಟಿದ್ದಾರೆ. ಬಿಗ್ ಬಾಸ್ ನ ಮಾಜಿ ಸ್ಪರ್ಧಿ ನಿವೇದಿತಾ ಗೌಡ ಡಾನ್ಸ್ ಮೂಲಕ ಮೊದಲ ಸ್ಪರ್ದಿಯನ್ನು ವೇದಿಕೆ ಮೇಲೆ ಬರಮಾಡಿಕೊಂಡರು. ಮೊದಲ ಸ್ಪರ್ಧಿಯಾಗಿ ಟಿಕ್ ಟಾಕ್ ಸ್ಟಾರ್ ಧನುಶ್ರೀ ಪದಾರ್ಪಣೆ ಮಾಡಿದ್ದಾರೆ.

ಬಿಗ್ ಬಾಸ್ 17ನೇ ಸ್ಪರ್ಧಿ ನಿರ್ಮಲಾ

ಬಿಗ್ ಬಾಸ್ 17ನೇ ಸ್ಪರ್ಧಿ ನಿರ್ಮಲಾ

ಬಿಗ್ ಬಾಸ್ ಮನೆಯ 17ನೇ ಹಾಗೂ ಕೊನೆಯ ಸ್ಪರ್ಧಿಯಾಗಿ ನಿರ್ಮಲಾ ಚೆನ್ನಪ್ಪಾ ಎಂಟ್ರಿ ಕೊಟ್ಟಿದ್ದಾರೆ. ನಟಿ, ನಿರೂಪಕಿ, ನಿರ್ಮಾಪಕಿ ಮತ್ತು ರಾಜ್ಯ ಪ್ರಶಸ್ತಿ ವಿಜೇತೆ ನಿರ್ಮಲಾ ಈ ಬಾರಿ ಬಿಗ್ ಬಾಸ್ ಮನೆಯಲ್ಲಿದ್ದಾರೆ.

ಬಿಗ್ ಬಾಸ್ 16ನೇ ಸ್ಪರ್ಧಿ ರಾಜೀವ್

ಬಿಗ್ ಬಾಸ್ 16ನೇ ಸ್ಪರ್ಧಿ ರಾಜೀವ್

ಬಿಗ್ ಬಾಸ್ ಮನೆಯ 16ನೇ ಸ್ಪರ್ಧಿಯಾಗಿ ಸಿಸಿಎಲ್ ಆಟಗಾರ ಮತ್ತು ನಟ ರಾಜೀವ್ ಎಂಟ್ರಿ ಕೊಟ್ಟಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಅನೇಕ ಸಿನಿಮಾಗಳಲ್ಲಿ ಮಿಂಚಿರುವ ರಾಜೀವ್ ನಟನಾಗಿ ಹೇಳಿಕೊಳ್ಳುವಷ್ಟು ಖ್ಯಾತಿ ಗಳಿಸಿಲ್ಲ. ಆದರೆ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಮೂಲಕ ಹೆಚ್ಚು ಪ್ರಸಿದ್ಧಿ ಗಳಿಸಿದ್ದ ರಾಜೀವ್ ಈಗ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ.

ಬಿಗ್ ಬಾಸ್ 15ನೇ ಸ್ಪರ್ಧಿ ದಿವ್ಯಾ

ಬಿಗ್ ಬಾಸ್ 15ನೇ ಸ್ಪರ್ಧಿ ದಿವ್ಯಾ

ಬಿಗ್ ಬಾಸ್ ಮನೆಯ 15ನೇ ಸ್ಪರ್ಧಿಯಾಗಿ ನಟಿ ದಿವ್ಯಾ ಉರುಡುಗ ಎಂಟ್ರಿ ಕೊಟ್ಟಿದ್ದಾರೆ. ಹುಲಿರಾಯ ಸಿನಿಮಾ ಮೂಲಕ ಕಿರುತೆರೆಯಿಂದ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ದಿವ್ಯಾ ಬಳಿಕ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಫೇಸ್ ಟು ಫೇಸ್, ಧ್ವಜ ಸಿನಿಮಾಗಳಲ್ಲಿ ದಿವ್ಯಾ ನಟಿಸಿದ್ದಾರೆ. ಇದೀಗ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ.

ಬಿಗ್ ಬಾಸ್ 14ನೇ ಸ್ಪರ್ಧಿ ಪ್ರಶಾಂತ್ ಸಂಬರ್ಗಿ

ಬಿಗ್ ಬಾಸ್ 14ನೇ ಸ್ಪರ್ಧಿ ಪ್ರಶಾಂತ್ ಸಂಬರ್ಗಿ

ಬಿಗ್ ಬಾಸ್ ಮನೆಯ 14ನೇ ಸ್ಪರ್ಧಿಯಾಗಿ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ ಪ್ರವೇಶ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಲಿಂಕ್ ವಿಚಾರವಾಗಿ ಪ್ರಶಾಂತ್ ಸಂಬರ್ಗಿ ಸಖತ್ ಸದ್ದು ಮಾಡಿದ್ದರು. ಇದೀಗ ಬಿಗ್ ಬಾಸ್ ಮನೆ ಪ್ರವೇಶ ಮಾಡುವ ಮೂಲಕ ಕಿರುತೆರೆ ಪ್ರೇಕ್ಷಕರನ್ನು ರಂಜಿಸಲು ರೆಡಿಯಾಗಿದ್ದಾರೆ.

ಬಿಗ್ ಬಾಸ್ 13ನೇ ಸ್ಪರ್ಧಿ ರಘು ಗೌಡ

ಬಿಗ್ ಬಾಸ್ 13ನೇ ಸ್ಪರ್ಧಿ ರಘು ಗೌಡ

ಬಿಗ್ ಬಾಸ್ ಮನೆಯ 13ನೇ ಸ್ಪರ್ಧಿಯಾಗಿ ಸೋಶಿಯಲ್ ಮೀಡಿಯಾ ಸ್ಟಾರ್ ರಘು ಗೌಡ ಎಂಟ್ರಿ ಕೊಟ್ಟಿದ್ದಾರೆ.

ಬಿಗ್ ಬಾಸ್ 12ನೇ ಸ್ಪರ್ಧಿ ನಟಿ ಚಂದ್ರಕಲಾ

ಬಿಗ್ ಬಾಸ್ 12ನೇ ಸ್ಪರ್ಧಿ ನಟಿ ಚಂದ್ರಕಲಾ

ಬಿಗ್ ಬಾಸ್ ಮನೆಯ 12ನೇ ಸ್ಪರ್ಧಿಯಾಗಿ ಕಿರುತೆರೆಯ ಖ್ಯಾತ ನಟಿ ಅಜ್ಜಮ್ಮ ಎಂದೆ ಖ್ಯಾತಿಗಳಿಸಿರುವ ಕಲಾವಿದೆ ಚಂದ್ರಕಲಾ. ಪುಟ್ಟಗೌರಿ ಮದುವೆ ಧಾರಾವಾಹಿಯ ಅಜ್ಜಮ್ಮ ಪಾತ್ರದ ಮೂಲಕ ಪ್ರೇಕ್ಷಕರ ಮನೆ ಮಾತಾಗಿರುವ ಚಂದ್ರಕಲಾ ಈ ಬಾರಿ ಬಿಗ್ ಪ್ರವೇಶ ಮಾಡುತ್ತಿರುವುದು ಕಿರುತೆರೆ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.

ಬಿಗ್ ಬಾಸ್ 10ನೇ ಸ್ಪರ್ಧಿ ಮಂಜು ಪಾವಗಡ

ಬಿಗ್ ಬಾಸ್ 10ನೇ ಸ್ಪರ್ಧಿ ಮಂಜು ಪಾವಗಡ

ಬಿಗ್ ಬಾಸ್ ಮನೆಯ 10ನೇ ಸ್ಪರ್ಧಿಯಾಗಿ ಮಜಾ ಭಾರತ ಖ್ಯಾತಿಯ ಕಾಮಿಡಿ ಸ್ಟಾರ್ ಮಂಜು ಪಾವಗಡ ಎಂಟ್ರಿ ಕೊಟ್ಟಿದ್ದಾರೆ. ತುಂಬಾ ಕಷ್ಟಪಟ್ಟು ನಟನ ವೃತ್ತಿಗೆ ಕಾಲಿಟ್ಟಿರುವ ಮಂಜು ಪಾವಗಡ ಈ ಬಾರಿ ಬಿಗ್ ಬಾಸ್ ಮನೆಯಲ್ಲಿರಲಿದ್ದಾರೆ.

ಬಿಗ್ ಬಾಸ್ 11ನೇ ಸ್ಪರ್ಧಿ ದಿವ್ಯಾ

ಬಿಗ್ ಬಾಸ್ 11ನೇ ಸ್ಪರ್ಧಿ ದಿವ್ಯಾ

ಬಿಗ್ ಬಾಸ್ ಮನೆಯ 11ನೇ ಸ್ಪರ್ಧಿಯಾಗಿ ಕಿರುತೆರೆ ನಟಿ ಮತ್ತು ಮಾಡೆಲ್ ದಿವ್ಯಾ ರಾವ್ ಎಂಟ್ರಿ ಕೊಟ್ಟಿದ್ದಾರೆ. ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ಮಿಂಚಿರುವ ದಿವ್ಯಾ ತೆಲುಗು ಸಿನಿಮಾರಂಗದಲ್ಲೂ ಮಿಂಚಿದ್ದಾರೆ. ಇದೀಗ ಬಿಗ್ ಬಾಸ್ ಪ್ರವೇಶ ಮಾಡಿರುವ ದಿವ್ಯಾ ಕಿರುತೆರೆ ಪ್ರೇಕ್ಷಕರನ್ನು ರಂಜಿಸುತ್ತಾರಾ ಎಂದು ಕಾದು ನೋಡಬೇಕು.

ಬಿಗ್ ಬಾಸ್ 9ನೇ ಸ್ಪರ್ಧಿ ನಟಿ ಗೀತಾ

ಬಿಗ್ ಬಾಸ್ 9ನೇ ಸ್ಪರ್ಧಿ ನಟಿ ಗೀತಾ

ಬಿಗ್ ಬಾಸ್ ಮನೆಯ 9ನೇ ಸ್ಪರ್ಧಿಯಾಗಿ ಕಿರುತೆರೆಯ ಖ್ಯಾತ ನಟಿ ಗೀತಾ ಎಂಟ್ರಿ ಕೊಟ್ಟಿದ್ದಾರೆ. ಬ್ರಹ್ಮಗಂಟು ಧಾರಾವಾಹಿ ಮೂಲಕ ಪ್ರಸಿದ್ಧಿ ಗಳಿಸಿರುವ ಗೀತಾ ಕೆಲವು ಸಿನಿಮಾಗಳಲ್ಲೂ ನಟಿಸಿದ್ದಾರೆ. ಇತ್ತೀಚಿಗೆ ಲವ್ ಮಾಕ್ ಟೇಲ್ ಸಿನಿಮಾದ ತೆಲುಗು ರಿಮೇಕ್ ನಲ್ಲೂ ನಟಿಸುವ ಮೂಲಕ ತೆಲುಗು ಸಿನಿಮಾರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಇದೀಗ ಗೀತಾ ಬಿಗ್ ಬಾಸ್ ಮೂಲಕ ಕಿರುತೆರೆಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ.

ಬಿಗ್ ಬಾಸ್ 8ನೇ ಸ್ಪರ್ಧಿ ಗಾಯಕ ಬ್ರೋ ಗೌಡ

ಬಿಗ್ ಬಾಸ್ 8ನೇ ಸ್ಪರ್ಧಿ ಗಾಯಕ ಬ್ರೋ ಗೌಡ

ಬಿಗ್ ಬಾಸ್ ಮನೆ ಪ್ರವೇಶ ಮಾಡಿದ 8ನೇ ಸ್ಪರ್ಧಿ ಗಾಯಕ ಬ್ರೋ ಗೌಡ. ಗಾಯನದ ಜೊತೆಗೆ ನಟನೆ ಕೂಡ ಮಾಡಿರುವ ಬ್ರೋ ಗೌಡ ಈ ಬಾರಿ ಬಿಗ್ ಮನೆ ಪ್ರವೇಶ ಮಾಡಿದ್ದಾರೆ. ವೆಬ್ ಸೀರಿಸ್ ಮೂಲಕ ಬ್ರೋ ಗೌಡ ಎಂದು ಖ್ಯಾತಿಗಳಿಸಿರುವ ಗಾಯಕ ಮತ್ತು ನಟನ ನಿಜವಾದ ಹೆಸರು ಶಮಂತ್.

ಬಿಗ್ ಬಾಸ್ 7ನೇ ಸ್ಪರ್ಧಿ ನಿಧಿ ಸುಬ್ಬಯ್ಯ

ಬಿಗ್ ಬಾಸ್ 7ನೇ ಸ್ಪರ್ಧಿ ನಿಧಿ ಸುಬ್ಬಯ್ಯ

ಬಿಗ್ ಬಾಸ್ ಮನೆಯ 7ನೇ ಸ್ಪರ್ಧಿಯಾಗಿ ಕೊಡಗಿನ ಸುಂದರಿ ನಟಿ ನಿಧಿ ಸುಬ್ಬಯ್ಯ ಎಂಟ್ರಿ ಕೊಟ್ಟಿದ್ದಾರೆ. ನಟಿ ನಿಶ್ಚಿಕಾ ನಾಯ್ಡು ಅದ್ಭುತವಾಗಿ ಡಾನ್ಸ ಪ್ರದರ್ಶನ ಮಾಡುವ ಮೂಲಕ ನಿಧಿ ಸುಬ್ಬಯ್ಯ ಅವರನ್ನು ವೇದಿಕೆ ಮೇಲೆ ಬರಮಾಡಿಕೊಂಡರು.

ಬಗ್ ಬಾಸ್ 6ನ್ ಸ್ಪರ್ಧಿ ಅರವಿಂದ್

ಬಗ್ ಬಾಸ್ 6ನ್ ಸ್ಪರ್ಧಿ ಅರವಿಂದ್

ಬಿಗ್ ಬಾಸ್ ಮನೆ ಪ್ರವೇಶ ಮಾಡಿದ 6ನೇ ಸ್ಪರ್ಧಿ ಬೈಕ್ ರೇಸರ್ ಅರವಿಂದ್. ಅಂತರಾಷ್ಟ್ರೀಯ ಮಟ್ಟದ ಬೈಕ್ ರೇಸರ್ ಆಗಿರುವ ಅರವಿಂದ್ ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಮನರಂಜನೆ ನೀಡುತ್ತಾರಾ ಎನ್ನುವುದು ಪ್ರೇಕ್ಷಕರ ಕುತೂಹಲ.

ಬಿಗ್ ಬಾಸ್ 5ನೇ ಸ್ಪರ್ಧಿ ವೈಷ್ಣವಿ ಗೌಡ

ಬಿಗ್ ಬಾಸ್ 5ನೇ ಸ್ಪರ್ಧಿ ವೈಷ್ಣವಿ ಗೌಡ

ಬಿಗ್ ಬಾಸ್ ಮನೆಯ 5ನೇ ಸ್ಪರ್ಧಿಯಾಗಿ ಕಿರುತೆರೆಯ ಖ್ಯಾತ ನಟಿ ವೈಷ್ಣವಿ ಗೌಡ ಎಂಟ್ರಿ ಕೊಟ್ಟಿದ್ದಾರೆ. ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಖ್ಯಾತಿ ಗಳಿಸಿದ್ದ ನಟಿ ವೈಷ್ಣವಿ ಸದ್ಯ ಧಾರಾವಾಹಿಯಿಂದ ದೂರ ಉಳಿದಿದ್ದರು, ಇದೀಗ ಬಿಗ್ ಮನೆ ಪ್ರವೇಶ ಮಾಡಿದ್ದಾರೆ.

ಬಿಗ್ ಬಾಸ್ 4ನೇ ಸ್ಪರ್ಧಿ ಗಾಯಕ ವಿಶ್ವ

ಬಿಗ್ ಬಾಸ್ 4ನೇ ಸ್ಪರ್ಧಿ ಗಾಯಕ ವಿಶ್ವ

ಬಿಗ್ ಬಾಸ್ ಮನೆಯ 4ನೇ ಸ್ಪರ್ಧಿಯಾಗಿ ಗಾಯಕ ವಿಶ್ವ ಎಂಟ್ರಿ ಕೊಟ್ಟಿದ್ದಾರೆ. ಹಾವೇರಿ ಮೂಲದ 19 ವರ್ಷದ ಗಾಯಕ ಬಿಗ್ ಮನೆ ಪ್ರವೇಶ ಮಾಡುತ್ತಿದ್ದಾರೆ. ಬಿಗ್ ಬಾಸ್ ಮನೆ ಪ್ರವೇಶ ಮಾಡುತ್ತಿರುವ ಚಿಕ್ಕ ವಯಸ್ಸಿನ ಸ್ಪರ್ಧಿ ವಿಶ್ವ ಕನ್ನಡ ಕೋಗಿಲೆಯಲ್ಲಿ ಭಾಗಿಯಾಗಿದ್ದರು.

ಬಿಗ್ ಬಾಸ್ ಪ್ರವೇಶ ಮಾಡಿದ 3ನೇ ಸ್ಪರ್ಧಿ ಶಂಕರ್ ಅಶ್ವಥ್

ಬಿಗ್ ಬಾಸ್ ಪ್ರವೇಶ ಮಾಡಿದ 3ನೇ ಸ್ಪರ್ಧಿ ಶಂಕರ್ ಅಶ್ವಥ್

ಬಿಗ್ ಬಾಸ್ ಮನೆಯ 3ನೇ ಸ್ಪರ್ಧಿಯಾಗಿ ಹಿರಿಯ ನಟ ಶಂಕರ್ ಅಶ್ವಥ್ ಎಂಟ್ರಿ ಕೊಟ್ಟಿದ್ದಾರೆ. ಸಿನಿಮಾ ಜೊತೆಗೆ ಶಂಕರ್ ಅಶ್ವಥ್ ಜೀವನಕ್ಕಾಗಿ ಟ್ಯಾಕ್ಸಿ ಓಡಿಸುತ್ತಿದ್ದಾರೆ. ಇದೀಗ ಶಂಕರ್ ಅಶ್ವಥ್ ಬಿಗ್ ಮನೆ ಪ್ರವೇಶ ಮಾಡಿದ್ದಾರೆ.

ಬಿಗ್ ಬಾಸ್ ಪ್ರವೇಶ ಮಾಡಿದ 2ನ್ ಸ್ಪರ್ಧಿ ಶುಭಾ

ಬಿಗ್ ಬಾಸ್ ಪ್ರವೇಶ ಮಾಡಿದ 2ನ್ ಸ್ಪರ್ಧಿ ಶುಭಾ

ಬಿಗ್ ಬಾಸ್ ಸೀಸನ್ 8ರ 2ನೇ ಸ್ಪರ್ಧಿಯಾಗಿ ಶುಭಾ ಪೂಂಜಾ ಎಂಟ್ರಿ ಕೊಟ್ಟಿದ್ದಾರೆ. ನಟಿ ಅದಿತಿ ಪ್ರಭುದೇವ ವೇದಿಕೆ ಮೇಲೆ ಡಾನ್ಸ ಮಾಡುವ ಮೂಲಕ ಶುಭಪೂಂಜ ಅವರನ್ನು ವೇದಿಕೆ ಮೇಲೆ ಬರಮಾಡಿಕೊಂಡರು. ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳನ್ನು ಮಾಡಿರುವ ನಟಿ ಶುಭಾ ಪೂಂಜಾ ಬಿಗ್ ಬಾಸ್ ಮನೆಯಲ್ಲಿ ಹೇಗಿರಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.

ಬಿಗ್ ಮನೆ ಪ್ರವೇಶ ಮಾಡಿದ ಮೊದಲ ಸ್ಪರ್ಧಿ ಧನುಶ್ರೀ

ಬಿಗ್ ಮನೆ ಪ್ರವೇಶ ಮಾಡಿದ ಮೊದಲ ಸ್ಪರ್ಧಿ ಧನುಶ್ರೀ

ಬಿಗ್ ಬಾಸ್ ಕನ್ನಡ ಸೀಸನ್ 8 ಗ್ರ್ಯಾಂಡ್ ಓಪನಿಂಗ್ ಸಿಕ್ಕಿದೆ. ಬಿಗ್ ಮನೆ ಪ್ರವೇಶ ಮಾಡಿದ ಮೊದಲ ಸ್ಪರ್ಧಿ ಯಾರು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ಇದೀಗ ಆ ಕುತೂಹಲಕ್ಕೆ ತೆರೆಬಿದ್ದಿದೆ. ಮೊದಲ ಸ್ಪರ್ಧಿಯಾಗಿ ಸೋಶಿಯಲ್ ಮೀಡಿಯ ಸ್ಟಾರ್ ಧನುಶ್ರೀ ಎಂಟ್ರಿ ಕೊಟ್ಟಿದ್ದಾರೆ.

More from Filmibeat

English summary
Bigg Boss Kannada 8 Grand Launch takes place today. Host Sudeep will grace the event and introduce the final record of enduring contestants on the journey as housemates in BBK8.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X