ಬಿಗ್‌ಬಾಸ್ ಕನ್ನಡ 8 ರಿಂದ ಹೊರ ಹೋದ ಮೊದಲ ಸ್ಪರ್ಧಿ ಧನುಶ್ರಿ
ಬಿಗ್ ಬಾಸ್ ಕನ್ನಡ 8 ರ ಮೊದಲ ವಾರ ಒಬ್ಬ ಸ್ಪರ್ಧಿ ಹೊರಗೆ ಹೋಗಿದ್ದಾರೆ. ಬಿಗ್‌ಬಾಸ್ ಸೀಸನ್‌ನ ಮೊದಲ ಎಲಿಮಿನೇಶನ್‌ನಲ್ಲಿ ಟಿಕ್‌ಟಾಕ್ ಸ್ಟಾರ್ ಧನುಶ್ರಿ ಮನೆಯಿಂದ ಹೊರಗೆ ಹೋಗಿದ್ದಾರೆ.
Recommended Video
ಮೊದಲ ವಾರ ಐದು ಮಂದಿ ನಾಮಿನೇಟ್ ಆಗಿದ್ದರು, ನಿರ್ಮಲಾ, ರಘು ಗೌಡ, ವಿಶ್ವ ಹಾಗೂ ಶುಭಾ ಪೂಂಜಾ. ಇದರಲ್ಲಿ ಶನಿವಾರದ ಎಪಿಸೋಡ್‌ನಲ್ಲಿ ಶುಭಾ ಪೂಂಜಾ ಹಾಗೂ ವಿಶ್ವ ಅವರುಗಳು ಸೇಫ್ ಆಗಿದ್ದರು.
ಭಾನುವಾರದ ಸಂಚಿಕೆ ಆರಂಭಿಸಿದ ಸುದೀಪ್ ಅವರು ಮೊದಲು ರಘು ಗೌಡ ಅವರನ್ನು ಸೇಫ್ ಮಾಡಿದರು. ಆ ನಂತರ ಉಳಿದ ಇಬ್ಬರಲ್ಲಿ ಧನುಶ್ರಿ ಅವರನ್ನು ಹೊರಗೆ ಹೋಗಲು ಬಿಗ್‌ಬಾಸ್ ಸೂಚಿಸಿದರು ಅಂತೆಯೇ ಧನುಶ್ರಿ ಮೊದಲ ಸ್ಪರ್ಧಿಯಾಗಿ ಹೊರಗೆ ಬಂದರು.

ಹೊರಗೆ ಹೋಗುವ ಮುನ್ನ ಧನುಶ್ರಿ ಅವರಿಗೆ ವಿಶೇಷ ಅಧಿಕಾರವೊಂದನ್ನು ಬಿಗ್‌ಬಾಸ್ ನೀಡಿದರು. ಒಬ್ಬರನ್ನು ನಾಮಿನೇಷನ್‌ನಿಂದ ಉಳಿಸುವ ಅಧಿಕಾರ ನೀಡಿದರು. ಆ ಅಧಿಕಾರವನ್ನು ಬಳಸಿಕೊಂಡ ಧನುಶ್ರಿ ಅವರು ರಘು ಗೌಡ ಅವರನ್ನು ನಾಮಿನೇಷನ್ ನಿಂದ ಉಳಿಸಿದರು.
ಟಿಕ್‌ಟಾಕ್ ಸ್ಟಾರ್ ಆಗಿದ್ಧ ಧನುಶ್ರಿ ಅವರು ಒಳ್ಳೆಯ ಸ್ಪರ್ಧಿ ಎಂದೇ ಎಣಿಸಲಾಗಿತ್ತು. ಆದರೆ ಅವರು ಮೊದಲನೇಯ ವಾರದಲ್ಲಿಯೇ ಮನೆಯಿಂದ ಹೊರಗೆ ಹೋಗಿದ್ದಾರೆ.
ಶುಭಾ ಪೂಂಜಾ ಅವರು ಬಿಗ್‌ಬಾಸ್ ಮನೆಯಿಂದ ಹೊರಗೆ ಹೋಗುತ್ತಾರೆ ಎಂದು ಸುದ್ದಿಗಳು ಹರಿದಾಡಿತ್ತು, ಆದರೆ ಧನುಶ್ರಿ ಅವರು ಮೊದಲನೇ ಸ್ಪರ್ಧಿ ಆಗಿ ಹೊರಹೋಗಿದ್ದಾರೆ.


Click it and Unblock the Notifications











