ಬಿಗ್‌ಬಾಸ್: ಕೊಡಲಿ ಬಳಸಿ ನಾಮಿನೇಷನ್ ಕತ್ತಿಯಿಂದ ಬಚಾವಾದ ಗೀತಾ ಭಟ್
ಬಿಗ್‌ಬಾಸ್ ಮನೆಯಲ್ಲಿ ಮೊದಲ ದಿನವೇ ಲ್ಯಾಗ್ ಮಂಜು, ಪ್ರಶಾಂತ್ ಸಂಬರ್ಗಿ, ನಿಧಿ ಸುಬ್ಬಯ್ಯ, ಧನುಶ್ರಿ ಅವರುಗಳು ಇತರ ಸ್ಪರ್ಧಿಗಳಿಂದ ನಾಮಿನೇಟ್ ಆದರು. ನಿರ್ಮಲಾ ಅವರು ನೇರವಾಗಿ ನಾಮಿನೇಟ್ ಆಗಿದ್ದರು.
ಬಿಗ್‌ಬಾಸ್ ಕೊಟ್ಟ ವಿಶೇಷ ಅವಕಾಶದಿಂದ ಪ್ರಶಾಂತ್ ಸಂಬರ್ಗಿ ಹಾಗೂ ಲ್ಯಾಗ್ ಮಂಜು ಅವರುಗಳು ಆಟವಾಡಿ ಗೆದ್ದು ನಾಮಿನೇಷನ್ ತೂಗುಕತ್ತಿಯಿಂದ ಪಾರಾಗಿ ಸೇಫ್‌ಝೋನ್‌ಗೆ ಹೋದರು.
ಆದರೆ ನಿಧಿ ಸುಬ್ಬಯ್ಯ ಹಾಗೂ ಟಿಕ್‌ಟಾಕ್ ಸ್ಟಾರ್ ಧನುಶ್ರಿ ಅವರುಗಳು ಮೇಲೆ ನಾಮಿನೇಟ್ ತೂಗುಗತ್ತಿ ತೂಗುತ್ತಲೇ ಇತ್ತು.
ಸೇಫ್ ಆಗುವ ಮೊದಲ ಅವಕಾಶ ದೊರಕಿದ್ದು ನೀಧಿ ಸುಬ್ಬಯ್ಯ ಅವರಿಗೆ, ಅವರು ಆಯ್ಕೆ ಮಾಡಿಕೊಂಡಿದ್ದು ದಿವ್ಯಾ ಉರುಡುಗ ಅವರನ್ನು. ಅದಾದ ನಂತರ ಧನುಶ್ರಿ ಆಯ್ಕೆ ಮಾಡಿಕೊಂಡಿದ್ದು ಗೀತಾ ಭಟ್ ಅನ್ನು.

ಈಜು ಕೊಳದಲ್ಲಿ ಬಿಗ್‌ಬಾಸ್ ಆಡಿಸಿದ ಆಟದಲ್ಲಿ ದಿವ್ಯಾ ಉರುಡುಗ ಅವರು ವಿಜೇತರಾದ ಕಾರಣ ನಿಧಿ ಸುಬ್ಬಯ್ಯ ಅವರ ನಾಮಿನೇಟ್ ಮುಂದುವರೆಯಿತು.
ಆ ನಂತರ ಧನುಶ್ರೀ ಅವರು ತಮ್ಮ ಪ್ರತಿಸ್ಪರ್ಧಿಯಾಗಿ ಗೀತಾ ಭಟ್ ಅವರನ್ನು ಆಯ್ಕೆ ಮಾಡಿಕೊಂಡರು. ಅವರಿಬ್ಬರಿಗೂ ಕಟ್ಟಿಗೆ ಕಡಿಯುವ ಟಾಸ್ಕ್ ನೀಡಿದರು ಬಿಗ್‌ಬಾಸ್.
ಗೀತಾ ಭಟ್ ಅವರು ಅದ್ಭುತವಾಗಿ ಆಡಿ ಧನುಶ್ರೀ ಗಿಂತಲೂ ಬಹಳ ಬೇಗವೇ ಎರಡು ತುಂಡು ಕಟ್ಟಿಗೆಯನ್ನು ಎಂಟು ತುಂಡುಗಳನ್ನಾಗಿ ಮಾಡಿ ಟಾಸ್ಕ್ ನಲ್ಲಿ ಗೆದ್ದರು. ಆ ಮೂಲಕ ಗೀತಾ ಭಟ್ ಮತ್ತೆ ಸೇಫ್ ಆದರು. ಧನುಶ್ರೀ ಅವರ ನಾಮಿನೇಷನ್ ಮುಂದುವರೆಯಿತು.
ಅಲ್ಲಿಗೆ ಅಂತಿಮವಾಗಿ ನಿಧಿ ಸುಬ್ಬಯ್ಯ, ಧನುಶ್ರಿ, ರಘು ಗೌಡ ಹಾಗೂ ವಿಶ್ವ ಅವರುಗಳು ಬಿಗ್‌ಬಾಸ್ ಮನೆಯಿಂದ ಮೊದಲ ವಾರ ಹೊಗಲು ನಾಮಿನೇಟ್ ಆಗಿರುವ ಸದಸ್ಯರಾಗಿದ್ದಾರೆ.


Click it and Unblock the Notifications











