twitter
    For Quick Alerts
    ALLOW NOTIFICATIONS  
    For Daily Alerts

    ಇವರೇ ನೋಡಿ ಬಿಗ್‌ಬಾಸ್‌ನ ಸುಂದರ ಮನೆ ವಿನ್ಯಾಸ ಮಾಡಿದವರು

    |

    ಬಿಗ್‌ಬಾಸ್ ಕನ್ನಡ ಸೀಸನ್ 08 ನಿನ್ನೆಯಷ್ಟೆ ಬಹು ಅದ್ಧೂರಿಯಾಗಿ ಪ್ರಾರಂಭವಾಗಿದೆ. ಬಿಗ್‌ಬಾಸ್ ಆರಂಭದ ದಿನ ಈ ಸೀಸನ್‌ನ ಸ್ಪರ್ಧಿಗಳು ಯಾರ್ಯಾರು ಆಗಿರಲಿದ್ದಾರೆ ಎನ್ನುವ ಕುತೂಹಲದ ಜೊತೆಗೆ ಈ ಬಾರಿ ಬಿಗ್‌ಬಾಸ್ ಮನೆ ಹೇಗಿರಲಿದೆ ಎಂಬ ಕುತೂಹಲ ಸಹಜ.

    ಹಾಗೆಯೇ ಈ ವರ್ಷವೂ ಇದೇ ಕುತೂಹಲ ಇತ್ತು. ಅದಕ್ಕೆ ತಕ್ಕಂತೆಯೇ ಈ ಬಾರಿ ಸಹ ಬಿಗ್‌ಬಾಸ್ ಮನೆಯನ್ನು ಬಹು ಅದ್ಧೂರಿಯಾಗಿ, ವಿಶಿಷ್ಟವಾಗಿ, ವಿನೂತನವಾಗಿ ವಿನ್ಯಾಸಗೊಳಿಸಲಾಗಿದೆ. ಈ ಬಾರಿಯ ಬಿಗ್‌ಬಾಸ್ ಮನೆ ಹಿಂದಿನ ಕೆಲವು ಬಿಗ್‌ಬಾಸ್‌ ಮನೆಗಳಿಗಿಂತಲೂ ಸಾಕಷ್ಟು ವಿಷಯದಲ್ಲಿ ಭಿನ್ನವಾಗಿದೆ.

    ಈ ಬಾರಿಯ ಬಿಗ್‌ಬಾಸ್ ಮನೆಯಲ್ಲಿ ಹಸಿರು ಬಣ್ಣಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಜೊತೆಗೆ ಹಲವು ಮೂರ್ತಿಗಳನ್ನು ಸಹ ಮನೆಯ ಒಳಗೆ ನಿರ್ಮಿಲಾಗಿದೆ. ಹಲವು ಭಾವ ಸ್ಪುರಿಸುತ್ತಿರುವ ಈ ಮೂರ್ತಿಗಳು ಬಿಗ್‌ಬಾಸ್ ಮನೆಗೆ ವಿಶೇಷ ಮೆರುಗು ನೀಡುತ್ತಿವೆ. ಈ ಬಾರಿಯ ಬಿಗ್‌ಬಾಸ್ ಮನೆಯನ್ನು ವಿನ್ಯಾಸ ಮಾಡಿದವರ ಸ್ಥೂಲ ಪರಿಚಯ ಇಲ್ಲಿದೆ.

    ಕಲಾ ನಿರ್ದೇಶಕಿ ವರ್ಷಾ ಜೈನ್

    ಕಲಾ ನಿರ್ದೇಶಕಿ ವರ್ಷಾ ಜೈನ್

    ಎಂಡೆಮೋಲ್ ಶೈನ್ ಇಂಡಿಯಾದ ಕಲಾ ನಿರ್ದೇಶಕಿ ವರ್ಷಾ ಜೈನ್ ಅವರದ್ದು ಬಿಗ್‌ಬಾಸ್ ಮನೆಯ ವಿನ್ಯಾಸದಲ್ಲಿ ಪ್ರಮುಖ ಪಾತ್ರ. ಅವರೇ ಹೇಳಿರುವಂತೆ 'ಬಿಗ್‌ಬಾಸ್ ಮನೆ ನಿರ್ಮಾಣಕ್ಕೆ ಈಗಾಗಲೇ ಸಿದ್ಧ ಮಾದರಿ ಇದೆ ಆದರೆ ನಾವು ಅದರಲ್ಲಿಯೂ ತುಸು ಭಿನ್ನ ಪ್ರಯತ್ನವನ್ನು ಮಾಡಿದ್ದೇವೆ, ಸೃಜನಶೀಲತೆಯನ್ನು ತುಂಬುವ ಪ್ರಯತ್ನ ಮಾಡಿದ್ದೇವೆ' ಎಂದಿದ್ದಾರೆ ವರ್ಷಾ ಜೈನ್. ಬಿಗ್‌ಬಾಸ್ ಮನೆ ಕುರಿತಾಗಿ ಇಂದು ಬಿಡುಗಡೆ ಮಾಡಲಾಗಿರುವ ವಿಡಿಯೋದಲ್ಲಿ ಅವರು ಮಾತನಾಡಿದ್ದಾರೆ.

    ಪರಿಸರ ಸ್ನೇಹಿ ಬಣ್ಣಗಳನ್ನು ಬಳಸಲಾಗಿದೆ

    ಪರಿಸರ ಸ್ನೇಹಿ ಬಣ್ಣಗಳನ್ನು ಬಳಸಲಾಗಿದೆ

    'ಬಣ್ಣಗಳ ಕಾಂಬಿನೇಷನ್ ಅನ್ನು ಬದಲಾವಣೆ ಮಾಡಲು ನಿರ್ಧರಿಸಿ ಹಲವು ಬಣ್ಣಗಳ ಮೂಲಕ ಹೊಸ ಲುಕ್ ಅನ್ನು ಬಿಗ್‌ಬಾಸ್ ಮನೆಗೆ ನೀಡಿದ್ದೇವೆ. ಇದಕ್ಕಾಗಿ ಪರಿಸರ ಸ್ನೇಹಿ ಬಣ್ಣಗಳನ್ನು ನಾವು ಬಳಸಿದ್ದೇವೆ. ಬಿಗ್‌ಬಾಸ್‌ ಮನೆಯಲ್ಲಿ ಬಣ್ಣಗಳು ಬಹಳ ಮುಖ್ಯ. ಬಿಗ್‌ಬಾಸ್ ಮನೆಯಲ್ಲಿ ನಿರ್ದಿಷ್ಟ ಜಾಗಗಳಿಗೆ ನಾವು ನಿರ್ದಿಷ್ಟ ಬಣ್ಣಗಳನ್ನು ಬಳಸಿದ್ದೇವೆ. ಬಿಗ್‌ಬಾಸ್ ಮನೆ ವಿನ್ಯಾಸ ಮಾಡುವಾಗ ಬಣ್ಣಗಳಿಗೆ ನಾವು ಹೆಚ್ಚು ಆದ್ಯತೆ ಕೊಟ್ಟಿದ್ದೇವೆ' ಎಂದಿದ್ದಾರೆ ವರ್ಷಾ ಜೈನ್.

    ಆಧುನಿಕ ತಂತ್ರಜ್ಞಾನ ಹೊಂದಿದ ಬಣ್ಣಗಳ ಬಳಕೆ

    ಆಧುನಿಕ ತಂತ್ರಜ್ಞಾನ ಹೊಂದಿದ ಬಣ್ಣಗಳ ಬಳಕೆ

    ನಿಪ್ಪಾನ್ ಪೇಯಿಂಟ್ಸ್‌ ಸಂಸ್ಥೆಯ ವಿನಯ್ ಬದಸಾಗಿ ಅವರು ಬಣ್ಣಗಳ ವಿಭಾಗದಲ್ಲಿ ಸಲಹೆ ನೀಡಿದ್ದಾರೆ. ಬಿಗ್‌ಬಾಸ್ ಮನೆಯ ಯಾವ ಏರಿಯಾದಲ್ಲಿ ಯಾವ ತಂತ್ರಜ್ಞಾನ ಹೊಂದಿರುವ ಬಣ್ಣಗಳನ್ನು ಬಳಸಬೇಕು ಎಂಬುದರ ನಿರ್ಣಯ ಇವರದ್ದು. ''ಬೆಡ್‌ ರೂಂ ನಲ್ಲಿ ಸ್ಯಾಟಿನ್ ಗ್ಲೋ ಪ್ರೈಂ ಮಾದರಿಯ ಬಣ್ಣ. ಲಿವಿಂಗ್ ರೂಂನಲ್ಲಿ 'ಓಡರ್ಲೆಸ್ ಏರ್‌ಕೇರ್ ಬಣ್ಣ ಬಳಸಿದ್ದೇವೆ. ಈ ಬಣ್ಣ ಗಾಳಿಯನ್ನು ಆಹ್ಲಾದಕರಗೊಳಿಸುತ್ತದೆ. ಅಡುಗೆ ಮನೆಯಲ್ಲಿ 'ಸ್ಪಾಟ್‌ಲೆಸ್ ನೆಟ್ಸ್' ಹೆಸರಿನ ಬಣ್ಣ ಬಳಸಿದ್ದೇವೆ. ಇದರಿಂದ ಗೋಡೆಯ ಮೇಲೆ ಆದ ಕಲೆಯನ್ನು ಸ್ವಚ್ಛ ಮಾಡುವುದು ಸುಲಭ. ಮನೆಯ ಹೊರಗೆ ಮಳೆ, ಗಾಳಿ, ಬಿಸಿಲು ತಡೆಯಲು ವೆದರ್‌ ಗ್ರಾನ್ ಪ್ರೋ ಮಾದರಿಯ ಬಣ್ಣ ಬಳಸಿದ್ದೇವೆ'' ಎಂದು ಮಾಹಿತಿ ನೀಡಿದ್ದಾರೆ ವಿನಯ್.

    ಒಂದೊಂದು ಏರಿಯಾದಲ್ಲಿ ಒಂದೊಂದು ಬಣ್ಣ ಪ್ರಧಾನ

    ಒಂದೊಂದು ಏರಿಯಾದಲ್ಲಿ ಒಂದೊಂದು ಬಣ್ಣ ಪ್ರಧಾನ

    'ಬಿಗ್‌ಬಾಸ್ ಮನೆ ಬೋಲ್ಡ್‌ ಹಾಗೂ ಸ್ಟ್ರೈಕಿಂಗ್ ಮಾದರಿಯಲ್ಲಿರಬೇಕು ಎಂಬುದನ್ನು ಗಮನದಲ್ಲಿಟ್ಟುಕೊಂಡು ಬಣ್ಣಗಳನ್ನು ಬಳಸಿದ್ದೇವೆ. ಅಡುಗೆ ಮನೆಯಲ್ಲಿ ಹಳದಿ ಬಣ್ಣ ಪ್ರಧಾನ. ಬೆಡ್‌ರೂಂ ನಲ್ಲಿ ನೀಲಿ ಬಣ್ಣ ಪ್ರಧಾನ, ನಾಯಕನ ರೂಂ ಗೆ ಕೆಂಪು ಬಳಸಿದ್ದೇವೆ, ಹೀಗೆ ಮನೆಯ ಬೇರೆ-ಬೇರೆ ಏರಿಯಾದಲ್ಲಿ ಬೇರೆ-ಬೇರೆ ಮಾದರಿ ಬಣ್ಣ ಬಳಸಿ ವಿನ್ಯಾಸವನ್ನು ಮಾಡಿದ್ದೇವೆ' ಎಂದಿದ್ದಾರೆ ವರ್ಷಾ.

    ಬಣ್ಣಗಳೇ ತುಂಬಿಕೊಂಡಿರುವ ಬಿಗ್‌ಬಾಸ್ ಮನೆ

    ಬಣ್ಣಗಳೇ ತುಂಬಿಕೊಂಡಿರುವ ಬಿಗ್‌ಬಾಸ್ ಮನೆ

    ಬಿಗ್‌ಬಾಸ್ ಮನೆ ಈಗಾಗಲೇ ತನ್ನ ಅದ್ಭುತ ವಿನ್ಯಾಸದಿಂದ ಗಮನ ಸೆಳೆದಿದೆ. ಹಲವು ರೀತಿಯ ಬಣ್ಣಗಳು ಬಿಗ್‌ಬಾಸ್ ಮನೆಯಲ್ಲಿವೆ. ವಿಶಾಲ ಲಿವಿಂಗ್ ರೂಂ ಅದಕ್ಕೆ ಹೊಂದಿಕೊಂಡಂತೆ ಇರುವ ಅಡುಗೆ ಮನೆ. ಮಲಗುವ ಕೋಣೆ, ಬಿಗ್‌ಬಾಸ್ ಮನೆಯ ಅಂಗಳ ಎಲ್ಲವೂ ಸುಂದರವಾಗಿದೆ. ಬಿಗ್‌ಬಾಸ್ ಮನೆಯಲ್ಲಿ ಕಣ್ಣು ಹಾಯಿಸದಲ್ಲೆಲ್ಲಾ ಸುಂದರವಾದ ಬಣ್ಣಗಳ ವಿನ್ಯಾಸ ಮತ್ತು ಮೂರ್ತಿಗಳು ಸೆಳೆಯುತ್ತವೆ.

    English summary
    Bigg Boss Kannada 8 House Designer Varsha Jain and Vinay Talked About House Design and color combinations of the house.
    Tuesday, March 2, 2021, 8:05
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X