ನಾಮಿನೇಟ್ ತೂಗುಕತ್ತಿಯನ್ನು ರಘು ತಲೆಗೆ ವರ್ಗಾಯಿಸಿದ ಮಂಜು
ಬಿಗ್‌ಬಾಸ್ ಮನೆಯಲ್ಲಿ ಎರಡನೇ ದಿನ ಇಬ್ಬರಿಗೆ ಸಿಹಿ ಸಿಹಿ ದಿನವಾದರೆ ಇನ್ನಿಬ್ಬರಿಗೆ ಬಹಳ ಕಹಿ ದಿನವಾಗಿ ಪರಿಣಮಿಸಿತು.
ಬಿಗ್‌ಬಾಸ್ ನ ಮೊದಲನೇ ದಿನವೇ ಪ್ರಶಾಂತ್ ಸಂಬರ್ಗಿ, ಮಂಜು ಪಾವಗಡ, ಧನುಶ್ರಿ, ನಿಧಿ ಸುಬ್ಬಯ್ಯ ಇತರೆ ಸ್ಪರ್ಧಿಗಳಿಂದ ನಾಮಿನೇಟ್ ಆಗಿದ್ದರು. ನಿರ್ಮಲಾ ಅವರನ್ನು ಬಿಗ್‌ಬಾಸ್ ನಾಮಿನೇಟ್ ಮಾಡಿದ್ದರು.
ಎರಡನೇ ದಿನ ಪ್ರಶಾಂತ್ ಸಂಬರ್ಗಿ, ಮಂಜು ಪಾವಗಡ, ಧನುಶ್ರಿ, ನಿಧಿ ಸುಬ್ಬಯ್ಯ ಅವರಿಗೆ ವಿಶೇಷ ಅವಕಾಶ ಕೊಟ್ಟ ಬಿಗ್‌ಬಾಸ್, ಮನೆಯ ಯಾವುದಾದರೂ ಒಬ್ಬ ಸ್ಪರ್ಧಿಯನ್ನು ಆಯ್ಕೆ ಮಾಡಿಕೊಂಡು ಬಿಗ್‌ಬಾಸ್ ನೀಡುವ ಆಟದಲ್ಲಿ ಅವರನ್ನು ಸೋಲಿಸಿದರೆ ನಾಮಿನೇಟ್ ನಿಂದ ಮುಕ್ತಿ ಪಡೆದು ಸೇಫ್ ಆಗುವ ಅವಕಾಶ ನೀಡಲಾಯಿತು.

ಮೊದಲಿಗೆ ಪ್ರಶಾಂತ್ ಸಂಬರ್ಗಿ ಅವರು 'ಬಲಹೀನ' ಎಂಬ ಕಾರಣ ವಿಶ್ವ ಅವರನ್ನು ಆಯ್ಕೆ ಮಾಡಿಕೊಂಡು ಸುಸಲಭವಾಗಿ ವಿಶ್ವನನ್ನು ಸೋಲಿಸಿ ಸೇಫ್ ಆದರು. ವಿಶ್ವ ನಾಮಿನೇಟ್ ಆದರು.
ನಂತರ ಮಂಜು ಸರದಿ ಬಂದಾಗ, ಮಂಜು, ರಘು ಗೌಡ ಅವರನ್ನು ಆಯ್ಕೆ ಮಾಡಿಕೊಂಡರು. 'ರಘು ನನ್ನ ಸಮಾನ ಪ್ರತಿಸ್ಪರ್ಧಿ, ಸೋತರು ಬಲಾಡ್ಯನೊಂದಿಗೆ ಸೋತೆ ಎಂಬ ನೆಮ್ಮದಿ ಇರುತ್ತದೆಯಾದ್ದರಿಂದ ರಘುವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ' ಎಂದರು ಮಂಜು ಪಾವಗಡ.
ಐಸ್‌ಕ್ರೀಮ್ ಕಪ್‌ನ ಚಿತ್ರಗಳನ್ನು ನೋಡಿಕೊಂಡು ಅದನ್ನೇ ಹೋಲುವ ಮಾದರಿಯನ್ನು ನಿರ್ಮಿಸುವ ನೆನಪಿನ ಶಕ್ತಿ, ಬುದ್ಧಿಕೌಶಲ್ಯದ ಆಟವನ್ನು ಬಿಗ್‌ಬಾಸ್ ನೀಡಿದರು. ಈ ಆಟದಲ್ಲಿ ಬುದ್ಧಿವಂತಿಕೆಯಿಂದ ಆಡಿದ ಮಂಜು ಪಾವಗಡ ವಿಜೇತರಾದರು. ಆ ಮೂಲಕ ಮಂಜು ಪಾವಗಡ ನಾಮಿನೇಷನ್ ನಿಂದ ಮುಕ್ತಿ ಪಡೆದು ಸೇಫ್ ಜೋನ್‌ಗೆ ಬಂದರು. ಮಂಜು ಎದುರು ಆಟದಲ್ಲಿ ಸೋತ ಕಾರಣ ರಘು ಗೌಡ ನಾಮಿನೇಟ್ ಆಗಿದ್ದಾರೆ.
ಇನ್ನು ಮನೆಯಲ್ಲಿ ನಿಧಿ ಸುಬ್ಬಯ್ಯ ಹಾಗೂ ಧನುಶ್ರಿ ಅವರುಗಳು ಇಬ್ಬರು ಇತರೆ ಸ್ಪರ್ಧಿಗಳೊಂದಿಗೆ ಆಟವಾಡಬೇಕಿದೆ. ಗೆದ್ದಲ್ಲಿ ಸೇಫ್, ಸೋತಲ್ಲಿ ನಾಮಿನೇಟ್ ಮುಂದುವೆಯಲಿದೆ.


Click it and Unblock the Notifications











