ಹುಡುಗಿ ಅಣ್ಣಾ.. ಎಂದಿದ್ದಕ್ಕೆ ಹೀಗಾ ಮಾಡೋದು ಮಂಜು ಪಾವಗಡ!

ಬಿಗ್ ಬಾಸ್ ಮನೆ ಮೊದಲ ದಿನವೇ ರಂಗೇರಿದೆ. ನಗು, ಅಳು, ತಮಾಷೆ, ಟಾಸ್ಕ್ ಗಳ ಜೊತೆಗೆ ಸ್ಪರ್ಧಿಗಳ ಇಂಟರೆಸ್ಟಿಂಗ್ ಕತೆಗಳು ಸಹ ಗಮನ ಸೆಳೆದಿದೆ. ಟಾಸ್ಕ ಬಳಿಕ ನಾಮಿನೇಷನ್ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಕೆಲವು ಸ್ಪರ್ಧಿಗಳು ಕಣ್ಣೀರಧಾರೆ ಹರಿಸಿದರು.

ನಾಮಿನೇಷನ್ ನಿಂದ ಡಲ್ ಆಗಿದ್ದ ಮನೆಗೆ ಕಾಮಿಡಿ ಸ್ಟಾರ್ ಮಂಜು ಪಾವಗಡ ತನ್ನ ಹಳೆಯ ಲವ್ ಸ್ಟೋರಿಯನ್ನು ರೋಚಕವಾಗಿ ಕಟ್ಟಿಕೊಡುವ ಮೂಲಕ ಸಹ ಸ್ಪರ್ಧಿಗಳ ಮೊಗದಲ್ಲಿ ನಗು ತರಿಸಿದರು. ರಾತ್ರಿ 12 ಗಂಟೆ ಸುಮಾರಿಗೆ ಮನೆಯ ಎಲ್ಲಾ ಸ್ಪರ್ಧಿಗಳು ಕುಳಿತಿರುವಾಗ ಮಂಜು ತನ್ನ ಹಳೆಯ ಪ್ರೀತಿಯ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.

ಹುಡುಗಿ ಪಟಾಯಿಸಲು ಹೋಗಿ ಯಾಮಾರಿದ ಮಂಜು

ಹುಡುಗಿ ಪಟಾಯಿಸಲು ಹೋಗಿ ಯಾಮಾರಿದ ಮಂಜು

ಫ್ರೆಂಡ್ ತಂಗಿಯ ಮದುವೆಯಲ್ಲಿ ಲವ್ ಆದ ವಿಚಾರವನ್ನು ಮಂಜು ರೋಚಕವಾಗಿ ವಿವರಿಸಿದ್ದಾರೆ. ಮದುವೆಯಲ್ಲಿ ತನ್ನನ್ನೇ ನೋಡುತ್ತಿದ್ದ ಹುಡುಗಿ ನೋಡಿ ಇದು ವರ್ಕೌಟ್ ಆಗುತ್ತೆ ಎಂದು ಯೋಚಿಸಿ ಪಟಾಯಿಸುವ ಪ್ರಯತ್ನ ಮಾಡಿದ್ದಾರೆ. ಮದುವೆ ಖರ್ಚೆಲ್ಲ ಫ್ರೆಂಡ್ ಆಗಿದ್ದರೂ ಹೆಸರು, ಅಬ್ಬರ ತನ್ನದೆ ಇರಬೇಕೆಂದು ಮಂಜು ಮದುವೆ ಮನೆ ತುಂಬೆಲ್ಲಾ ಓಡಾಡಿಕೊಂಡು ಎಂಜಾಯ್ ಮಾಡಿದ್ದಾರೆ.

ಪ್ರಪೋಸ್ ಮಾಡಿದ್ರೆ ನಕ್ಕು ಸುಮ್ಮನಾದಳು

ಪ್ರಪೋಸ್ ಮಾಡಿದ್ರೆ ನಕ್ಕು ಸುಮ್ಮನಾದಳು

ತಾನು ಪಟಾಯಿಸಲು ಪ್ರಯತ್ನಿಸುತ್ತಿರುವ ಹುಡುಗಿ ತನ್ನ ಫ್ರೆಂಡ್ ನಾದಿನಿ ಆದರೂ ಪ್ರೀತಿಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿ ಹೇಗಾದರು ಮಾಡಿ ಪ್ರಪೋಸ್ ಮಾಡಬೇಕೆಂದು ಹಠ ಹಿಡಿಯುತ್ತಾರೆ. 'ನಾನು ಪ್ರೀತಿ ವಿಚಾರ ಹೇಳಲೇ ಬೇಕು ಅಂತ ಮದುವೆ ಮುಗಿಸಿ ಎಲ್ಲಾ ಮನೆ ಕಡೆ ಹೋದರು ನಾನು ಅಲ್ಲೆ ಇದ್ದೆ. ಕೊನೆಗೆ ಮಾತನಾಡಿಸಿ ನಿಮ್ಮನ್ನು ಇಷ್ಟಪಡುತ್ತಿದ್ದೀನಿ ಎಂದು ಹೇಳಿದೆ. ಆದರೆ ಅವಳು ಜೋರಾಗಿ ನಕ್ಕು ಅಲ್ಲಿಂದ ಹೊರಟು ಹೋದಳು' ಎಂದು ಮಂಜು ತನ್ನ ಕತೆಯನ್ನು ವಿವರಿಸಿದ್ದಾರೆ.

ಅಣ್ಣ ಎಂದಿದ್ದಕ್ಕೆ ಕೈ ಸುಟ್ಟುಕೊಂಡಿರುವ ಮಂಜು

ಅಣ್ಣ ಎಂದಿದ್ದಕ್ಕೆ ಕೈ ಸುಟ್ಟುಕೊಂಡಿರುವ ಮಂಜು

'ಲವ್ ಮಾಡುವ ಯೋಗ್ಯತೆ ಇಲ್ಲ ಅಂತ ನಕ್ಕಿದ್ಲಾ ಅಥವಾ ಏನು ಗೊತ್ತಾಗಿಲ್ಲ. ಕೊನೆಗೆ ಮನೆಗೆ ಹೊರಡುವಾಗ ಹೋಗಿ ಬರ್ತೀನಿ ಅಂದೆ ಆದರೆ ಅವಳು ಅಣ್ಣ..ಅಂತ ಹೇಳಿದ್ಲು. ಆಗ ನಾನು ಫುಲ್ ಎಮೋಷನಲ್ ಆದೆ, ಲವ್ ಫೇಲ್ಯೂರ್ ಅಂದರೆ ಅದೇ ನನಗೆ ಅಂದುಕೊಂಡು ಸಿಗರೇಟು ತೆಗೆದುಕೊಂಡು ಆಕೆಯ ಹೆಸರು ಹೇಳಿ ಹೇಳಿ ಕೈಯನ್ನು ಸುಟ್ಟುಕೊಂಡೆ. ಈಗಲು ತಮ್ಮ ಹುಡುಗರು ವಿಚಾರ ಹೇಳಿ ರೇಗಿಸುತ್ತಾರೆ' ಎಂದು ಹೇಳಿದ್ದಾರೆ.

ಸುಟ್ಟ ಕಲೆಯನ್ನು ತೋರಿಸಿದ ಮಂಜು

ಸುಟ್ಟ ಕಲೆಯನ್ನು ತೋರಿಸಿದ ಮಂಜು

ಮಂಜು ಕೈಯಲ್ಲಿ ಸಿಗರೇಟಿನಿಂದ ಸುಟ್ಟ ಕಲೆಗಳು ಈಗಲೂ ಇದೆ. ಇದೇ ಕಲೆಗಳಾ ಎಂದು ನಿಧಿ ಸುಬ್ಬಯ್ಯ ಕೇಳುತ್ತಾರೆ. ಆಗ ಮಂಜು ಕೈಯಲ್ಲಿ ಇರುವ ಮೂರು ಕಲೆಗಳನ್ನು ಮಂಜು ತೋರಿಸುತ್ತಾರೆ. ಇದು ನೋವಿನ ಕತೆಯಾಗಿದ್ದರು ಮಂಜು ಹೇಳುವ ರೀತಿಗೆ ಬಿಗ್ ಬಾಸ್ ಸ್ಪರ್ಧಿಗಳು ಜೋರಾಗಿ ನಗುವ ಮೂಲಕ ನಾಮಿನೇಷನ್ ಬೇಸರಿಂದ ಕೊಂಚ ನಿರಾಳರಾಗುತ್ತಾರೆ.

More from Filmibeat

English summary
Bigg Boss Kannada 8: Manju Pavagada reveals his love story in Bigg Boss house.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X